ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ನೊಬೆಲ್‌ಗೆ ಆಯ್ಕೆ

Last Updated 12 ಅಕ್ಟೋಬರ್ 2018, 18:58 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್‌: ಪರ್ಯಾಯ ನೊಬೆಲ್‌ ಸಾಹಿತ್ಯ ಪ್ರಶಸ್ತಿಗೆ ಫ್ರಾನ್ಸ್‌ನ ದ್ವೀಪ ಪ್ರದೇಶ ಗ್ವಾಡೆಲೋಪ್‌ನ ಲೇಖಕ ಮ್ಯಾರಿಸ್‌ ಕಾಂಡ್‌ ಆಯ್ಕೆಯಾಗಿದ್ದಾರೆ.

ನೊಬೆಲ್‌ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುವ ಸ್ವೀಡಿಷ್‌ ಅಕಾಡೆಮಿಯೊಂದಿಗೆ ನಿಕಟ ಸಂಬಂಧ ಹೊಂದಿರುವ ಫ್ರಾನ್ಸ್‌ನ ಜೀನ್‌ ಕ್ಲಾಡ್‌ ಆರ್ನಾಲ್ಟ್‌, ಲೈಂಗಿಕ ಹಗರಣದ ಸಂಬಂಧ 2017ರಲ್ಲಿ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

ಆ ಬಳಿಕ ಅಕಾಡೆಮಿ ವಿವಾದಕ್ಕೆ ಸಿಲುಕಿತ್ತು. ಮೀ–ಟೂ ಚಳವಳಿಯ ಅಂಗವಾಗಿ ಈ ಹಗರಣ ಬಹಿರಂಗಗೊಂಡಿತ್ತು. ಹಗರಣ ಖಂಡಿಸಿ ಲೇಖಕರ ಗುಂಪೊಂದು ಸ್ಥಾಪಿಸಿದ್ದ ಪರ್ಯಾಯ ನೊಬೆಲ್‌ ಪ್ರಶಸ್ತಿಯ ಅಂತಿಮ ಆಯ್ಕೆ ಪಟ್ಟಿಗೆ, ಕಾಂಡ್‌ ಅವರ ಜೊತೆಗೆ ವಿಯೆಟ್ನಾಂ–ಕೆನಡಾ, ಬ್ರಿಟನ್‌, ಜಪಾನ್‌ ಲೇಖಕರು ಸೇರಿದಂತೆ ನಾಲ್ವರು
ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT