ಇಸ್ಲಾಮಾಬಾದ್ (ಐಎಎನ್ಎಸ್): ವಾಯವ್ಯ ಪಾಕಿಸ್ತಾನದ ಪೇಷಾವರ್ ಸಮೀಪ ಶಸ್ತ್ರದಾರಿಯೊಬ್ಬ ಶಾಲಾ ಬಸ್ಸೊಂದರಲ್ಲಿ ಮಂಗಳವಾರ ಮಧ್ಯಾಹ್ನ ಯದ್ವಾತದ್ವ ಗುಂಡಿನಮಳೆಗರೆದ ಪರಿಣಾಮವಾಗಿ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಐವರು ಹತರಾಗಿದ್ದಾರೆ.

ಖಾಸಗಿ ಶಾಲಾ ಬಸ್ಸಿನ ಮೇಲೆ ಮಧ್ಯಾಹ್ನ 1.30ರ ವೇಳೆಗೆ ಪೇಷಾವರದ ಮಟ್ನಿ ಪ್ರದೇಶದಲ್ಲಿ ಈ ದಾಳಿ ನಡೆದಿದೆ ಎಂದು ಟಿವಿ ವರದಿಯೊಂದನ್ನು ಉಲ್ಲೇಖಿಸಿ ಕ್ಸಿನ್ ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪೇಷಾವರದಿಂದ 60 ಕಿ.ಮೀ. ದಕ್ಷಿಣಕ್ಕೆ ಬಸ್ಸು ಪೇಷಾವರದಿಂದ ಕೊಹತ್ ಗೆ ಸಾಗುತ್ತಿದ್ದಾಗ ಈ ದಾಳಿ ನಡೆಯಿತು.

ಪ್ರತ್ಯಕ್ಷದರ್ಶಿಗಳ ಪ್ರಕಾರ ಮೊದಲು ಬಸ್ಸಿನತ್ತ ರಾಕೆಟ್ ದಾಳಿ ನಡೆಸಲಾಯಿತು. ನಂತರ ಗುಂಡು ಹಾರಿಲಾಯಿತು. ದಾಳಿ ಕಾಲದಲ್ಲಿ ಬಸ್ಸಿನಲ್ಲಿ 17ಮಂದಿ ವಿದ್ಯಾರ್ಥಿಗಳು ಸೇರಿ 20 ಮಂದಿ ಇದ್ದರು.

ಕೆಲವು ವರದಿಗಳ ಪ್ರಕಾರ ದಾಳಿಯಲ್ಲಿ ಮೃತರಾದ ಎಲ್ಲರೂ ವಿದ್ಯಾರ್ಥಿಗಳು ಎನ್ನಲಾಗುತ್ತಿದ್ದರೆ, ಇತರ ವರದಿಗಳ ಪ್ರಕಾರ ನಾಲ್ವರು ವಿದ್ಯಾರ್ಥಿಗಳು ಮತ್ತು ಒಬ್ಬರು ಚಾಲಕರು ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಶಿಕ್ಷಕರೂ ಗಾಯಗೊಂಡಿದ್ದಾರೆ.

ದಾಳಿಯ ಹೊಣೆಯನ್ನು ಈವರೆಗೆ ಯಾರೂ ಹೊತ್ತುಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.