ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಮಾಧ್ಯಮ ಸಂಸ್ಥೆಗಳು ಹಾಗೂ ಪತ್ರಕರ್ತರು ಈಗ ನಿಜಕ್ಕೂ ಭಯಗೊಂಡಿದ್ದಾರೆ.

ತಾಲಿಬಾನ್ ಕೆಲ ಮಾಧ್ಯಮ ಸಂಸ್ಥೆ ಗಳ ಮತ್ತು ಪತ್ರಕರ್ತರ ಕುರಿತು ಮಾಹಿತಿ ಕಲೆ ಹಾಕುತ್ತಿದೆಯಂತೆ. ಈ ಕೆಲಸಕ್ಕಾಗಿಯೇ ಅದು ಆಯ್ದ ಸದಸ್ಯರ ತಂಡವನ್ನೂ ರಚಿಸಿದೆಯಂತೆ. ಈ ವಿಷಯವನ್ನು ಖುದ್ದು ತಾಲಿಬಾನ್ ಮುಖ್ಯಸ್ಥರೇ ಬಹಿರಂಗಪಡಿಸಿದ್ದಾರೆ.

‘ಸಚಿನ್ ತೆಂಡೂಲ್ಕರ್ ಹಾಗೂ ಮಿಸ್ಬಾ ಉಲ್ ಹಕ್ ಕುರಿತು ನಮ್ಮ ವಕ್ತಾರ ಶಾಹಿದುಲ್ಲಾ ಶಾಹಿದ್ ನೀಡಿದ ಹೇಳಿಕೆಯನ್ನು ಪತ್ರಕರ್ತರು ತಿರುಚಿ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಹೆಸರಿಗೆ ಕಳಂಕ ತಂದಿದ್ದಾರೆ’ ಎಂದು ತೆಹರಿಕ್ ಇ ತಾಲಿಬಾನ್ ಪಾಕಿಸ್ತಾನದ ನೂತನ ಮುಖ್ಯಸ್ಥ ಮುಲ್ಲಾ ಫಜಲುಲ್ಲಾ ಸಂದೇಶ ರವಾನಿಸಿದ್ದಾರೆ.

ಇತ್ತೀಚೆಗಷ್ಟೆ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ ಸಚಿನ್ ಅವರನ್ನು ಪಾಕಿಸ್ತಾನಿ ಪತ್ರಿಕೆ ಹಾಗೂ ಮಾಧ್ಯಮ ಸಂಸ್ಥೆಗಳು ಹೊಗಳಿ ಪಾಕಿಸ್ತಾನ ಆಟಗಾರ ಮಿಸ್ಬಾ ಉಲ್ ಹಕ್ ನಾಯಕನಾಗಿ ವೈಫಲ್ಯ ಅನುಭವಿ ಸಿರುವುದನ್ನು ಟೀಕಿಸಿದ್ದವು.

ಇದಕ್ಕೆ ಸಂಬಂಧಿಸಿದಂತೆ ತಾಲಿಬಾನ್ ಸಂಘಟನೆಯು ಮಾಧ್ಯ ಮಗಳಿಗೆ ವೀಡಿಯೊ ಸಂದೇಶ ತಲುಪಿಸಿ ಅದರ ಮೂಲಕ ‘ಸಚಿನ್ ಭಾರತದ ಆಟಗಾರ. ಹಾಗಾಗಿ ಅವರ ಬಗ್ಗೆ ಹೊಗಳುವುದನ್ನು ನಿಲ್ಲಿಸಿ’ ಎಂದು ಎಚ್ಚರಿಕೆ ನೀಡಿದೆ ಎಂದು ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.