ನ್ಯೂಯಾರ್ಕ್ (ಪಿಟಿಐ): ದೇವಯಾನಿ ಖೋಬ್ರಾಗಡೆ ಅವರ ಮಾಜಿ ಮನೆಕೆಲಸದಾಕೆ ಸಂಗೀತಾ ರಿಚರ್ಡ್ ಅವರನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಹಲವು ಬಾರಿ ಬೆದರಿಕೆ ಒಡ್ಡಲಾಗಿತ್ತು ಎಂದು ಸಂಗೀತಾ ಕುಟುಂಬ ಆರೋಪಿಸಿದೆ.

ಸಂಗೀತಾ ಅವರ ಕುಟುಂಬದ ಆಪ್ತರೊಬ್ಬರ ಹೇಳಿಕೆಗಳನ್ನು ಉಲ್ಲೇಖಿಸಿರುವ ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಅವರ ಕುಟುಂಬದ ಸದಸ್ಯರಿಗೆ ಬೆದರಿಕೆ ಹಾಕಿರುವ ಘಟನೆಗಳ ಬಗ್ಗೆ ವರದಿ ಮಾಡಿದೆ.

ಒಂದು ಘಟನೆಯಲ್ಲಿ, ಸಂಗೀತಾ ಪತಿ ಫಿಲಿಪ್ ಅವರು ಮಗುವಿನೊಂದಿಗೆ ಸೈಕಲ್ ಸವಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಬಂದೂಕುಧಾರಿ ವ್ಯಕ್ತಿಯೊಬ್ಬ ಅವರನ್ನು ತಡೆದು ಪತ್ನಿಯನ್ನು ವಾಪಸ್ ಕರೆಸಿಕೊಳ್ಳುವಂತೆ ಒತ್ತಾಯಿಸಿದ್ದ ಎಂದು ವರದಿ ಹೇಳಿದೆ.

ದೇವಯಾನಿ ಅವರ ತಂದೆ ಒಂದಕ್ಕಿಂತ ಹೆಚ್ಚು ಬಾರಿ ಕರೆ ಮಾಡಿ ಸಂಗೀತಾ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ಫಿಲಿಪ್ ಅವರನ್ನು ಒತ್ತಾಯಿಸಿದ್ದರು ಎಂದು ಕುಟುಂಬದ ಆಪ್ತ ವ್ಯಕ್ತಿ ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ಫಿಲಿಪ್ ಅವರನ್ನು ವಿಚಾರಣೆ ನಡೆಸಿದ್ದ ಭಾರತೀಯ ಪೊಲೀಸರು, ಸಂಗೀತಾ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಕೇಳಿದ್ದರು ಎಂದೂ ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.