ಲಂಡನ್ (ಪಿಟಿಐ): ಭಾರತ ಮೂಲದ ಬ್ರಿಟನ್ ವೈದ್ಯ ದಂಪತಿ ಪುತ್ರನ ಅಪಹರಣ ಹಾಗೂ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಈ ಕುರಿತು ಇಂದೋರ್ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಬ್ರಿಟನ್ ವಿದೇಶಾಂಗ ಹಾಗೂ ಕಾಮನ್ವೆಲ್ತ್ ಕಚೇರಿ ಮೂಲಗಳು ತಿಳಿಸಿವೆ.
ಇಶಾನ್ ರಾವಲ್ (8) ಎಂಬ ಬಾಲಕನನ್ನು ದುಷ್ಕರ್ಮಿಗಳು ಇಂದೋರ್ನಲ್ಲಿ ಅಪಹರಿಸಿ ನಂತರ ಕೊಲೆ ಮಾಡಿದ್ದರು.