ನ್ಯೂಯಾರ್ಕ್ (ಎಪಿ): ಕೇಂಬ್ರಿಜ್ ಅನಲಿಟಿಕಾ ಕಂಪನಿ ದಿವಾಳಿಯಾಗಿರುವುದಾಗಿ ಘೋಷಿಸಿಕೊಂಡಿದ್ದು, ಇನ್ನು ಮುಂದೆ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

ರಾಜಕೀಯ ವಿಶ್ಲೇಷಣೆ ಹಾಗೂ ಚುನಾವಣಾ ಪ್ರಚಾರ ಸೇವೆ ನೀಡುವ ಲಂಡನ್ ಮೂಲದ ಈ ಕಂಪನಿ, ಸಾಮಾಜಿಕ ಜಾಲತಾಣ ಫೇಸ್‌ಬುಕ್ ಬಳಕೆದಾರರ ಖಾಸಗಿ ಮಾಹಿತಿ ಕದ್ದ ಆರೋಪ ಎದುರಿಸುತ್ತಿದೆ. ಚುನಾವಣಾ ಪ್ರಚಾರಕ್ಕಾಗಿ ಮತ್ತು ಮತದಾರರ ಮೇಲೆ ಪ್ರಭಾವ ಬೀರಲು ಫೇಸ್‌ಬುಕ್‌ನ ಲಕ್ಷಾಂತರ ಬಳಕೆದಾರರ ಮಾಹಿತಿಯನ್ನು ಕೇಂಬ್ರಿಜ್ ಅನಲಿಟಿಕಾ ಸೋರಿಕೆ ಮಾಡಿತ್ತು.

‘ಮಾಧ್ಯಮಗಳಲ್ಲಿ ಕಂಪನಿ ಕುರಿತು ನಕಾರಾತ್ಮಕವಾಗಿ ಬಿಂಬಿಸಲಾಯಿತು. ಇದರಿಂದ ಗ್ರಾಹಕರು ಮತ್ತು ವಿತರಕರು ದೂರವಾದರು. ಹೀಗಾಗಿ, ಕಂಪನಿಯನ್ನು ನಡೆಸುವುದು ಕಾರ್ಯಸಾಧುವಲ್ಲ ಎನ್ನುವ ತೀರ್ಮಾನಕ್ಕೆ ಬರಲಾಯಿತು’ ಎಂದು ಕೇಂಬ್ರಿಜ್ ಅನಲಿಟಿಕಾ ಹೇಳಿಕೆ ನೀಡಿದೆ.

‘ಆನ್‌ಲೈನ್ ಜಾಹೀರಾತಿಗೆ ಗ್ರಾಹಕರ ದತ್ತಾಂಶವನ್ನು ಬಳಕೆ ಮಾಡಿಕೊಳ್ಳಲಾಗಿತ್ತು’ ಎಂದು ಫೇಸ್‌ಬುಕ್ ಬಳಕೆಯನ್ನು ಅದು ಸಮರ್ಥಿಸಿಕೊಂಡಿದೆ.

2016ರ ಅಮೆರಿಕದ ಅಧ್ಯಕ್ಷಿಯ ಚುನಾವಣೆ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಪರವಾಗಿ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆ ಕೆಲಸ ಮಾಡಿದ ಆರೋಪವಿದೆ. ಈ ವೇಳೆ ಲಕ್ಷಾಂತರ ಫೇಸ್‌ಬುಕ್ ಖಾತೆದಾರರ ಮಾಹಿತಿ ಕದ್ದು ಅದನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳಲಾಗಿತ್ತು. ಈ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೆಕ್ಸಾಂಡರ್ ಟೇಲರ್ ಅವರನ್ನು ಅಮಾನತುಗೊಳಿಸಲಾಗಿತ್ತು.

ಫೇಸ್‌ಬುಕ್‌ನ ಮಾಹಿತಿ ಬಳಕೆಗೆ ಸಂಬಂಧಿಸಿದಂತೆ ಬ್ರಿಟನ್‌ನಲ್ಲಿ ನಡೆಯುತ್ತಿರುವ ತನಿಖೆಗೆ ಸಹಕಾರ ನೀಡುವುದಾಗಿ ಕಂಪನಿ ತಿಳಿಸಿತ್ತು. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕವಾದ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ಕಂಪನಿ ನೀಡಿಲ್ಲ ಎಂದು ತನಿಖೆ ಕೈಗೊಂಡಿರುವ ಬ್ರಿಟನ್ ಮಾಹಿತಿ ಆಯುಕ್ತ ಎಲಿಜಬೆತ್ ಡೆನ್ಹಾಮ್ ಮಾರ್ಚ್ ತಿಂಗಳಲ್ಲಿ ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.