ನ್ಯೂಯಾರ್ಕ್ (ಐಎಎನ್‌ಎಸ್): ಇಹಲೋಕ ತ್ಯಜಿಸಿದವರು ಇನ್ನು ಮುಂದೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಜೀವಂತವಾಗಿರಲಿದ್ದಾರೆ.

ಮೃತಪಟ್ಟವರ ಖಾತೆಗಳನ್ನು ಅವರು ಜೀವಂತವಾಗಿರುವಾಗ ಇದ್ದ ರೀತಿಯಲ್ಲಿ ಉಳಿಸಿಕೊಳ್ಳಲು ಫೇಸ್‌ಬುಕ್ ನಿರ್ಧರಿಸಿದೆ. ಇದಕ್ಕೂ ಮುನ್ನ, ನಿಧನಹೊಂದಿದವರ ಫೇಸ್‌ಬುಕ್ ಖಾತೆಯ ಪುಟವನ್ನು ಅವರ ಸ್ನೇಹಿತರು ಮಾತ್ರ ನೋಡಬಹುದಿತ್ತು.

ಬಳಕೆದಾರರು ತಮ್ಮ ಖಾತೆಗಳಲ್ಲಿ ಜೀವನದ ವೈಯಕ್ತಿಕ ಮಾಹಿತಿಗಳನ್ನು ದಾಖಲಿಸುವ ವ್ಯವಸ್ಥೆಯ ಕುರಿತಾಗಿ ಇರುವ ಕಂಪೆನಿಯ ನೀತಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುವುದು ಎಂದು ಫೇಸ್‌ಬುಕ್ ಹೇಳಿದೆ.
‘ಕುಟುಂಬದ ಸದಸ್ಯರನ್ನೋ ಅಥವಾ ಗೆಳೆಯರನ್ನು ಕಳೆದುಕೊಂಡವರು ನಮ್ಮನ್ನು ಸಂಪರ್ಕಿಸಿ, ಮೃತಪಟ್ಟವರ ಖಾತೆಗಳನ್ನು ‘ಸ್ಮರಣಾರ್ಥ’ ಸ್ಥಿತಿಯಲ್ಲಿ ಮಾಡುವಂತೆ ಮನವಿ ಮಾಡುತ್ತಿದ್ದರು’ ಎಂದು ಫೇಸ್‌ಬುಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದುವರೆಗೆ ಯಾವುದೇ ವ್ಯಕ್ತಿಯ ಖಾತೆಯನ್ನು ‘ಸ್ಮರಣಾರ್ಥ’ ಸ್ಥಿತಿಯಲ್ಲಿ ಇಟ್ಟರೆ ಕೇವಲ ಅವರ ಗೆಳೆಯರಿಗೆ ಮಾತ್ರ ಆ ಖಾತೆ ಕಾಣುತ್ತಿತ್ತು.

ಇದರಿಂದಾಗಿ ಫೇಸ್‌ಬುಕ್‌ನ ಇತರ ಬಳಕೆದಾರರಿಗೆ (ಮೃತಪಟ್ಟ ವ್ಯಕ್ತಿಯ ಗೆಳೆಯರ ಪಟ್ಟಿಯಲ್ಲಿರುವ ವ್ಯಕ್ತಿಗಳನ್ನು ಹೊರತುಪಡಿಸಿ) ನಿಧನ ಹೊಂದಿದ ವ್ಯಕ್ತಿಯ ಖಾತೆ, ಅದರಲ್ಲಿನ ಮಾಹಿತಿ ನೋಡಲು ಸಾಧ್ಯವಿರಲಿಲ್ಲ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.