ಲಾಹೋರ್ (ಪಿಟಿಐ): ವರದಕ್ಷಿಣೆ ಸಮಸ್ಯೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಪಾಕಿಸ್ತಾನದಲ್ಲೂ ಇದೆ ಎಂಬುದಕ್ಕೆ ಸಾಕ್ಷಿಯಾಗಿ ಶುಕ್ರವಾರ ಇಲ್ಲಿಯ ಪಂಜಾಬ್ ಪ್ರಾಂತ್ಯದ ನಾಲ್ವರು ಸಹೋದರಿಯರು ವರದಕ್ಷಿಣೆ ಸಮಸ್ಯೆ ಎದುರಿಸಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತನ್ನ ಐದು ಹೆಣ್ಣುಮಕ್ಕಳಿಗೆ ವರದಕ್ಷಿಣೆ ನೀಡಿ ಮದುವೆ ಮಾಡಲಾಗದ ತಂದೆಯ ಅಸಹಾಯಕ ಸ್ಥಿತಿಯನ್ನು ನೋಡಿ ಬೇಸತ್ತ ನಾಲ್ವರು ಸಹೋದರಿಯರು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಐದನೇ ಮಗಳು ಬದುಕುಳಿದಿದ್ದಾಳೆ. ಈಕೆಯನ್ನು ಸ್ಥಳೀಯರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.