ಹವಾನಾ,ಕ್ಯೂಬಾ: ಇಲ್ಲಿನ ಜೋಸ್ ಮಾರ್ಟಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 110 ಮಂದಿಯನ್ನು ಕರೆದೊಯ್ಯುತ್ತಿದ್ದ ಬೋಯಿಂಗ್ 737 ವಿಮಾನವು ಶುಕ್ರವಾರ ರಾತ್ರಿ ಅಪಘಾತಕ್ಕೀಡಾಗಿ 107 ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಮೂವರು ಬದುಕುಳಿದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಕ್ಯೂಬಾದ ಮಾಧ್ಯಮಗಳು ವರದಿ ಮಾಡಿವೆ.