ವಾಷಿಂಗ್ಟನ್ : ಪ್ರಕಾಶಮಾನವಾದ ಬೆಳಕು ಹೊರಸೂಸುವ ಆಕಾಶಕಾಯಗಳು (ಕ್ವಾಸಾರ್ಗಳು) ಇರುವ ಸ್ಥಳಗಳನ್ನು ಆಧಾರವಾಗಿಟ್ಟುಕೊಂಡು ಮೊದಲ ಬಾರಿಗೆ ವಿಶ್ವದ ಬೃಹತ್ ಅಳತೆಯ ನಕ್ಷೆಯನ್ನು ಖಗೋಳ ವಿಜ್ಞಾನಿಗಳು ರಚಿಸಿದ್ದಾರೆ.
‘ಕಪ್ಪುರಂಧ್ರದ ಪ್ರಭಾವದಿಂದ ಕ್ವಾಸಾರ್ಗಳು ಅತ್ಯಂತ ಪ್ರಖರ ಬೆಳಕು ಹೊರಹೊಮ್ಮಿಸುತ್ತವೆ. ಇವುಗಳನ್ನು ಬ್ರಹ್ಮಾಂಡದ ಎಲ್ಲ ಕಡೆ ಗುರುತಿಸಬಹುದು’ ಎಂದು ಅಮೆರಿಕದ ಓಹಿಯೊ ವಿಶ್ವವಿದ್ಯಾಲಯದ ಆಶ್ಲೆ ರೋಸ್ ಹೇಳಿದ್ದಾರೆ