ವಾಷಿಂಗ್ಟನ್: ಅಮೆರಿಕ ಬಾಹ್ಯಾಕಾಶ ಸಂಸ್ಥೆಯ (ನಾಸಾ) ಕ್ಯಾಸ್ಸಿನಿ ಬಾಹ್ಯಾಕಾಶ ನೌಕೆಯು ಇದೇ ಮೊದಲ ಬಾರಿಗೆ ಶನಿಗ್ರಹ ಹಾಗೂ ಅದರ ಉಂಗುರಗಳ ನಡುವೆ ಅತ್ಯಂತ ಹತ್ತಿರದಲ್ಲಿ ಹಾದುಹೋಗಿದೆ.

‘ಕ್ಯಾಲಿಫೋರ್ನಿಯಾದ ಮೊಜಾವ್ ಮರುಭೂಮಿಯಲ್ಲಿರುವ ನಾಸಾದ ಡೀಪ್ ಬಾಹ್ಯಾಕಾಶ ಕೇಂದ್ರವು ಏಪ್ರಿಲ್ 26ರಂದು ಬೆಳಿಗ್ಗೆ 2.56ರ ವೇಳೆಗೆ ಮೊದಲ ಸಂಕೇತವನ್ನು ಸ್ವೀಕರಿಸಿತು. ಶನಿಗ್ರಹದಲ್ಲಿ 3 ಸಾವಿರ ಕಿ.ಮೀ. ಸನಿಹದಲ್ಲಿ ಕ್ಯಾಸಿನಿಯು ಹಾದುಹೋಗಿದ್ದು, ಉಂಗುರದ ಒಳಭಾಗವು 300 ಕಿ.ಮೀ. ಹತ್ತಿರದಲ್ಲಿತ್ತು’ ಎಂದು ಕೇಂದ್ರದ ನಿರ್ದೇಶಕ ಜಿಮ್ ಗ್ರೀನ್ ಸಂತಸ ವ್ಯಕ್ತಪಡಿಸಿದರು.

‘ಈ ಹಿಂದೆ ಯಾವುದೇ ವ್ಯೋಮನೌಕೆಯು ಇಷ್ಟೊಂದು ಹತ್ತಿರ ಹಾದುಹೋಗಿಲ್ಲ. ನಮ್ಮ ನಿರೀಕ್ಷೆಯಂತೆ, ಶನಿಗ್ರಹ ಮತ್ತು ಅದನ್ನು ಸುತ್ತಿರುವ ಉಂಗುರದ ನಡುವೆ ಅತ್ಯಂತ ಕಡಿಮೆ ಅಂತರದಲ್ಲಿ ಹಾದುಹೋಗಿದೆ ’ ಎಂದು ನಾಸಾ ವಿಜ್ಞಾನಿ ಎರ್ಲ್ ಮೈಜ್ ತಿಳಿಸಿದರು. ಶನಿಗ್ರಹದ ಮೇಲ್ಮೈ ವಾತಾವರಣ ಹಾಗೂ ಹಾಗೂ ಉಂಗುರದ ನಡುವೆ 2 ಸಾವಿರ ಕಿ.ಮೀ. ವಿಸ್ತಾರವಿದೆ. ಕ್ಯಾಸಿನಿಯು ಹಾದುಹೋದ 20 ತಾಸಿನ ನಂತರ ಭೂಮಿಗೆ ಸಂದೇಶ ಕಳುಹಿಸಿತ್ತು. ಎರಡನೇ ಹಂತದಲ್ಲಿ ಹಾದುಹೋಗುವ ಕಾರ್ಯಾಚರಣೆಯನ್ನು ಮೇ 2 ಕ್ಕೆ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.