ಹ್ಯೂಸ್ಟನ್ (ಪಿಟಿಐ): ಪೆಸಿಫಿಕ್ ಸಾಗರದ ತಳದಲ್ಲಿ ಭೂಮಿಯ ಅತಿ ದೊಡ್ಡ ಜ್ವಾಲಾಮುಖಿ ಪತ್ತೆಯಾಗಿದೆ. ಇದು ಸೌರಮಂಡಲದ 2ನೇ ಅತಿ ದೊಡ್ಡ ಜ್ವಾಲಾಮುಖಿ ಎನ್ನಲಾಗಿದೆ.
`ಟಮು ಮಸ್ಸಿಫ್' ಎಂದು ಕರೆಯಲಾಗಿರುವ ಜಪಾನಿನ ಪೂರ್ವಕ್ಕೆ 1,609 ಕಿ.ಮೀನಷ್ಟು ದೂರದಲ್ಲಿರುವ ಈ ಜ್ವಾಲಾಮುಖಿಯ ವ್ಯಾಪ್ತಿಯು ಬ್ರಿಟಿಷ್ ದ್ವೀಪಗಳು ಅಥವಾ ನ್ಯೂ ಮೆಕ್ಸಿಕೊ ರಾಜ್ಯದಷ್ಟು ಇದೆ.