ವಾಷಿಂಗ್ಟನ್(ಪಿಟಿಐ): ಹಖಾನಿ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತನಗೆ ಸಾಮರ್ಥ್ಯ ಇಲ್ಲ ಎಂದು ಪಾಕಿಸ್ತಾನ ತಿಳಿಸಿರುವುದಾಗಿ ಆಫ್ಘಾನಿಸ್ತಾನದಲ್ಲಿರುವ ಅಮೆರಿಕದ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ಉಗ್ರರ ಜಾಲದ ವಿರುದ್ಧ, ಸರಿಯಾದ ವೇಳೆಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳವ ಸಾಮರ್ಥ್ಯ ಪಾಕಿಸ್ತಾನಕ್ಕೆ ಇಲ್ಲ ಎಂದು ಅಲ್ಲಿನವರೇ ಹೇಳಿದ್ದಾಗಿ ಅಂತರ ರಾಷ್ಟೀಯ ಭದ್ರತಾ ನೆರವು ಪಡೆಯ ಜಂಟಿ ಮುಖ್ಯಸ್ಥ ಹಾಗೂ ಅಮೆರಿಕ ಪಡೆಯ ಉಪ ಮುಖ್ಯಸ್ಥ ಕರ್ಟಿಸ್ ಸ್ಕಾಪರೊಟಿ ಮಾಹಿತಿ ನೀಡಿದ್ದಾರೆ.

`ಆಫ್ಘಾನಿಸ್ತಾನದಲ್ಲಿ ನಾವು ಯಶಸ್ಸು ಸಾಧಿಸಿದ್ದು, ಕಾರ್ಯಾಚರಣೆ ಉತ್ತಮ ಪರಿಣಾಮ ಬೀರಿದೆ. ಹಖಾನಿ ಉಗ್ರ ಜಾಲ ಆಫ್ಘಾನಿಸ್ತಾನದಲ್ಲಿ ಚಿಕ್ಕದಾಗಿದ್ದರೂ, ದೇಶಕ್ಕೆ ಹೆಚ್ಚಿನ ಬೆದರಿಕೆ ಇದೆ. ಅಲ್ಲದೇ ಈ ಸಂಘಟನೆ ಇತರ ಉಗ್ರ ಸಂಘಟನೆಗಳೊಂದಿಗೂ ಸಂಪರ್ಕ ಹೊಂದಿದೆ~ ಎಂದು ಕರ್ಟಿಸ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.