ಹಣೆ ಮೇಲೆ ಮೂಗು ಬೆಳೆದಿರುವ ವಿಚಿತ್ರ ಘಟನೆ ಇದು ಎಂದು ತಿಳಿಯಬೇಡಿ. ಚೀನಾದ ಕ್ಸಿಯಾಲಿನ್ (22) ಎಂಬ ಯುವಕನ ಹಣೆಯಲ್ಲಿ ವೈದ್ಯರು ಕೃತಕವಾಗಿ ಈ ಮೂಗನ್ನು ಬೆಳೆಸಿದ್ದಾರೆ. 2012ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಯುವಕನ ಮೂಗಿಗೆ ತೀವ್ರ ಏಟಾಗಿತ್ತು. ಆದರೆ ಗಾಯವನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಮೂಗಿಗೆ ಸೋಂಕು ತಗುಲಿ ಕ್ಷಯಿಸಲು ಆರಂಭಿಸಿತ್ತು. ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗದೇ ಹೋದಾಗ, ವೈದ್ಯರು ಹಣೆಯ ಮೇಲೆ ಕೃತಕವಾಗಿ ಮೂಗನ್ನು ಬೆಳೆಸುವ ನಿರ್ಧಾರ ಕೈಗೊಂಡರು. ಈಗ ಕೃತಕ ಮೂಗನ್ನು ಕ್ಷಯಿಸಿದ್ದ ಮೂಗಿನ ಜಾಗದಲ್ಲಿ ಕಸಿಕಟ್ಟಿದ್ದಾರೆ. ಇದು ಶಸ್ತ್ರಕ್ರಿಯೆಗೂ ಮುನ್ನ ತೆಗೆದ ಚಿತ್ರ...