ಲಂಡನ್ (ಪಿಟಿಐ): ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಸರ್ವಾಧಿಕಾರಿ ಹಿಟ್ಲರ್ ತನ್ನ ಸೇನಾಧಿಕಾರಿಗಳಿಗೆ ರಹಸ್ಯವಾಗಿ ಸಂದೇಶ ಕಳುಹಿಸಲು ಬಳಸುತ್ತಿದ್ದ ಯಂತ್ರವು ಆನ್ಲೈನ್ ಮಾರಾಟ ತಾಣ ‘ಇ–ಬೇ’ನಲ್ಲಿ ಸುಮಾರು ₹950 ಕ್ಕೆ ಮಾರಾಟಕ್ಕಿದೆ.
ಇದನ್ನು ಟೆಲಿಗ್ರಾಂ ಯಂತ್ರ ಎಂದು ಮಾರಾಟಕ್ಕೆ ಇಡಲಾಗಿತ್ತು. ಬ್ರಿಟನ್ನ ಬ್ಲೆಟ್ಚ್ಲೆ ಪಾರ್ಕ್ನಲ್ಲಿರುವ ಪ್ರತಿಷ್ಠಿತ ನ್ಯಾಷನಲ್ ಮ್ಯೂಸಿಯಂ ಅಫ್ ಕಂಪ್ಯೂಟಿಂಗ್ನ ಸ್ವಯಂ ಸೇವಕರು ಇ–ಬೇನಲ್ಲಿರುವ ಯಂತ್ರವಿದ್ದ ಎಸ್ಸೆಕ್ಸ್ನ ಸ್ಥಳ ವನ್ನು ಪತ್ತೆ ಹಚ್ಚಿದ್ದಾರೆ.
ಈ ಯಂತ್ರದ ಮೂಲಕ ಜರ್ಮನ್ ಭಾಷೆಯಲ್ಲಿ ಬರೆದ ಸಂದೇಶಗಳು ಗುಪ್ತ ಸಂದೇಶವಾಗಿ ಪರಿವರ್ತನೆಯಾಗಿ ಸಂಬಂಧಪಟ್ಟವರನ್ನು ತಲುಪುತ್ತಿದ್ದವು.