ಭೂಸುಧಾರಣೆ ಶಾಸನದಿಂದ ಸಣ್ಣ ಹಿಡುವಳಿದಾರರಿಗೆ ಅನ್ಯಾಯ: ತಿದ್ದುಪಡಿ ಅಗತ್ಯ

ಬೆಂಗಳೂರು, ಅ. 4– ಮೈಸೂರು ಭೂಸುಧಾರಣೆ ಶಾಸನದಿಂದ ಸಣ್ಣ ಹಿಡುವಳಿದಾರರಿಗೆ ಮಹದನ್ಯಾಯವಾಗಿದೆಯೆಂದು ಮೈಸೂರು ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಶ್ರೀ ಎಂ.ಆರ್. ನಾಗೇಶ್ವರ ಅಯ್ಯರ್ ಅವರು ಇಂದು ಇಲ್ಲಿ ನುಡಿದು, ನ್ಯಾಯ ದೊರಕಿಸಲು ಕಾನೂನಿನ ತಿದ್ದುಪಡಿ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು.

ರೈತವಾದಿ ಭೂಮಾಲೀಕರಿಗೆ ಆಗಿರುವ ಅನ್ಯಾಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಅವರು, ಹಿಡುವಳಿಯ ಮಿತಿಗೊಳಪಟ್ಟ ಜಮೀನು ಮಾಲೀಕರು ಸ್ವಂತ ಸಾಗುವಳಿಗೆ ಜಮೀನು ಬಿಡಿಸಿಕೊಳ್ಳಲು ಹಾಗೂ ಬಾಕಿ ಬಿದ್ದಿರುವ ಗುತ್ತಿಗೆಯನ್ನು ಪೂರ್ಣವಾಗಿ ವಸೂಲು ಮಾಡಲು ಅವಕಾಶವಾಗುವಂತೆ ಶಾಸನವನ್ನು ಸರ್ಕಾರ ತಿದ್ದುಪಡಿ ಮಾಡಬೇಕೆಂದು ಒತ್ತಾಯ ಮಾಡಿದರು.

ನಗರದಲ್ಲಿ ಮತ್ತೆ ಚಂದ್ರಶಿಲೆ

ಬೆಂಗಳೂರು, ಅ. 4 – ಚಂದ್ರಶಿಲೆ ಮತ್ತೊಮ್ಮೆ ನಗರಕ್ಕೆ ಬಂದಿದ್ದು, 3 ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ದೊರೆಯಲಿದೆ.

ಅಪೊಲೊ– 11ರ ಗಗನಯಾತ್ರಿಗಳು ಚಂದ್ರನಿಂದ ತಂದ 350 ಗ್ರಾಂ ತೂಕದ ಶಿಲೆಯಿಂದ ಮಾಡಿರುವ ಈ ಚೂರಿನ ತೂಕ 28.5 ಗ್ರಾಂಗಳು.

ಭಾರತದಲ್ಲಿ ಎರಡನೆಯ ಪ್ರವಾಸ ಮಾಡುತ್ತಿರುವ ಈ ಶಿಲೆಯನ್ನು ಈಗಾಗಲೇ 5 ಲಕ್ಷಕ್ಕಿಂತ ಹೆಚ್ಚು ಮಂದಿ ನೋಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.