ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 26–1–1994

ದಿನದ ನೆನಪು
Last Updated 25 ಜನವರಿ 2019, 20:00 IST
ಅಕ್ಷರ ಗಾತ್ರ

ಸ್ವಾತಂತ್ರ್ಯ, ಸಮಗ್ರತೆ ರಕ್ಷಣೆ: ರಾಷ್ಟ್ರಪತಿ ಕರೆ

ನವದೆಹಲಿ, ಜ. 25 (ಯುಎನ್ಐ, ಪಿಟಿಐ)– ಭಾರತ ತನ್ನ ಸ್ವಾತಂತ್ರ್ಯ, ರಾಷ್ಟ್ರೀಯ ಸಾರ್ವಭೌಮತೆ ಮತ್ತು ಸಮಗ್ರತೆಗಳನ್ನು ಎಚ್ಚರಿಕೆಯಿಂದ ಕಾದುಕೊಳ್ಳುವುದಲ್ಲದೆ, ಇವುಗಳಿಗೆ ಧಕ್ಕೆ ತರುವ ಯಾವ ರೀತಿಯ ಪ್ರಯತ್ನವನ್ನೂ ಸಹಿಸುವುದಿಲ್ಲ ಎಂದು ರಾಷ್ಟ್ರಪತಿ ಡಾ. ಶಂಕರ ದಯಾಳ ಶರ್ಮಾ ಹೇಳಿದರು.

ನಲವತ್ತೈದನೇ ಗಣರಾಜ್ಯೋತ್ಸವಕ್ಕೆ ಮುನ್ನಾ ದಿನ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು, ಭಾರತ ಎಲ್ಲ ದೇಶಗಳು ಮತ್ತು ಜನರೊಂದಿಗೆ ಅದರಲ್ಲೂ ಉಪಖಂಡದ ನೆರೆಹೊರೆಯೊಂದಿಗೆ ಮತ್ತು ಏಷ್ಯಾದ ಇತರ ದೇಶಗಳೊಂದಿಗೆ ಶಾಂತಿ, ಸ್ನೇಹ ಮತ್ತು ಸಹಕಾರಗಳನ್ನು ಬಯಸುತ್ತದೆ ಎಂದು ಹೇಳಿದರು. ಭಾರತವು ಮಾನವತೆಗೆ ಒಳಿತು ಬಯಸಲು ಬದ್ಧವಾಗಿದೆ ಎಂದು ತಿಳಿಸಿದರು.

**

ಹುಬ್ಬಳ್ಳಿಯಲ್ಲಿ ಕರ್ಫ್ಯೂ ಜಾರಿ ಶಾಂತಿಪಾಲನೆಗೆ ಸಕಲ ಸಿದ್ಧತೆ: ಧ್ವಜಾರೋಹಣಕ್ಕೆ ಬಿಜೆಪಿ ಪಟ್ಟು

ಹುಬ್ಬಳ್ಳಿ, ಜ. 25– ‘ನಾವಿಲ್ಲಿ ಯಾರೊಡನೆಯೂ ಯುದ್ಧ ಮಾಡಲು ಬಂದಿಲ್ಲ. ಸರಕಾರದ ಆದೇಶದಂತೆ ಶಾಂತಿಪಾಲನೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವುದಷ್ಟೇ ನಮ್ಮ ಕೆಲಸ. ವಿನಯದಿಂದ ಅದರಲ್ಲಿ ತೊಡಗಿದ್ದೇವೆ’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್‌.ಪಿ. ಬರ್ಮನ್ ತಿಳಿಸಿದ್ದಾರೆ. ಆದರೆ ಇದೇ ಕಾಲದಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಸ್. ಯಡಿಯೂರಪ್ಪ ಅವರು ‘ನಾಳೆ ನಮ್ಮ ಪ‍ಕ್ಷ ಇಲ್ಲಿನ ಈದಗಾ ಮೈದಾನದಲ್ಲಿ ಧ್ವಜ ಹಾರಿಸುವುದು ಶತಸ್ಸಿದ್ಧ’ ಎಂದು ಸಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT