ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋರಿಕ್ ದಂಪತಿಗಳ ಅಪಾರ ಆಭರಣ, ಆಯುಧ ವಶ

ಸೋಮವಾರ, 30–5–1994
Last Updated 29 ಮೇ 2019, 18:57 IST
ಅಕ್ಷರ ಗಾತ್ರ

ರೋರಿಕ್ ದಂಪತಿಗಳ ಅಪಾರ ಆಭರಣ, ಆಯುಧ ವಶ

ಬೆಂಗಳೂರು, ಮೇ 29– ದೇವಿಕಾರಾಣಿ ಅವರ ಆಪ್ತ ಸಹಾಯಕಿ ಮೇರಿ ಜಾಯ್ಸ್ ಪೂಣಚ್ಚ ಅವರ ಪತಿ ಎಂ.ಎ. ಪೂಣಚ್ಚ ಹಾಗೂ ಆಕೆಯ ಸ್ನೇಹಿತ ನಂದಕುಮಾರ್ ಅವರನ್ನು ಇಂದು ಬಂಧಿಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಅಪಾರವಾದ ಒಡವೆ–ವಸ್ತು, ವಜ್ರ–ವೈಢೂರ್ಯ, ಆಯುಧಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಒಂದು ವಾರದಿಂದ ಸತತವಾಗಿ ಮೇರಿ ಜಾಯ್ಸ್‌ಳ ಬ್ಯಾಂಕ್ ಲಾಕರುಗಳನ್ನು ಒಡೆದು ಹಲವು ವಿಧದ ಒಡವೆಗಳನ್ನು ವಶಪಡಿಸಿಕೊಂಡಿದ್ದ ನಗರ ಅಪರಾಧ ತನಿಖಾ ದಳದ ಎಸಿಪಿಗಳಾದ ನಿಂಗೇಗೌಡ, ಆಫ್ಜತ್ ಉಲ್ಲಾ ಹಾಗೂ ನಾಗರಾಜಯ್ಯ ಅವರು ನಿನ್ನೆ ನಗರದಲ್ಲಿರುವ ಮೇರಿ ಜಾಯ್ಸ್ ಹಾಗೂ ಆಕೆಯ ಪರಿಚಿತರ ಮನೆಗಳ ಮೇಲೆ ದಾಳಿ ನಡೆಸಿದ್ದರು.

ಶೇಷನ್ ಅಧಿಕಾರ ಮೊಟಕು: ಉದ್ದೇಶ

ಬೆಂಗಳೂರು, ಮೇ 29– ‘ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡನೆಯಾಗಲಿರುವ ಚುನಾವಣೆ ಸುಧಾರಣೆಗೆ ಸಂಬಂಧಿಸಿದ ಉದ್ದೇಶಿತ ವಿಧೇಯಕವು ಮುಖ್ಯ ಚುನಾವಣಾ ಆಯುಕ್ತರ ಅಧಿಕಾರ ಹಾಗೂ ಬಿಜೆಪಿ ಬೆಳವಣಿಗೆಯನ್ನು ಮೊಟಕುಗೊಳಿಸುವ ಉದ್ದೇಶ ಹೊಂದಿದೆ’ ಎಂದು ಪಕ್ಷದ ರಾಷ್ಟ್ರೀಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ವ್ಯಾಖ್ಯಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT