ಶುಕ್ರವಾರ, ಆಗಸ್ಟ್ 23, 2019
22 °C

25 ವರ್ಷಗಳ ಹಿಂದೆ: ಕೃಷ್ಣಾ ಜಲ ನಿಗಮ ಶೀಘ್ರ ನೋಂದಣಿ– ಮೊಯಿಲಿ

Published:
Updated:

ಕೃಷ್ಣಾ ಜಲ ನಿಗಮ ಶೀಘ್ರ ನೋಂದಣಿ– ಮೊಯಿಲಿ

ಮೈಸೂರು, ಆ. 11– ಇನ್ನು ಹತ್ತು ಹದಿನೈದು ದಿನಗಳಲ್ಲಿ ಕೃಷ್ಣಾ ಜಲನಿಗಮವನ್ನು ನೋಂದಣಿ ಮಾಡಿ ಅದರ ಮೂಲಕ ಕೃಷ್ಣಾ ಕಣಿವೆಯ ಯೋಜನೆಗಳಿಗೆ ಅಗತ್ಯವಾದ ಹಣವನ್ನು ಷೇರುಗಳ ಮೂಲಕ ಸಂಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಇಂದಿಲ್ಲಿ ತಿಳಿಸಿದರು.

ವರದಿಗಾರರ ಜತೆ ಮಾತನಾಡುತ್ತಿದ್ದ ಅವರು, ಸರ್ಕಾರ ನೀರಾವರಿ ಬಾಂಡ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ಕೆಲವು ಪತ್ರಿಕೆಗಳಲ್ಲಿ ತಪ್ಪಾಗಿ ವರದಿಯಾಗಿದೆ ಎಂದು ಸ್ಪಷ್ಟನೆ ನೀಡಿ, ಸರ್ಕಾರದ ಮುಂದೆ ಸದ್ಯಕ್ಕೆ ಅಂತಹ ಪ್ರಸ್ತಾವ ಇಲ್ಲ. ಆದರ ಬದಲು ಜಲನಿಗಮವನ್ನು ಕಂಪನಿ ಕಾಯ್ದೆಯನ್ವಯ ನೋಂದಣಿ ಮಾಡಿ ಷೇರುಗಳ ಮೂಲಕ ಹಣವನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

ಶೀಘ್ರವೇ ರಾಯಚೂರು ಥರ್ಮಲ್ 4ನೇ ಘಟಕ

ರಾಯಚೂರು, ಆ. 11– ರಾಯಚೂರು ಥರ್ಮಲ್ ಸ್ಥಾವರದ (ಆರ್.ಟಿ.ಪಿ.ಎಸ್.) 591 ಕೋಟಿ ರೂ. ವೆಚ್ಚದ ನಾಲ್ಕನೇ ಘಟಕ ಸೆಪ್ಟೆಂಬರ್ ತಿಂಗಳಲ್ಲಿ ವಿದ್ಯುತ್ ಉತ್ಪಾದನೆಗೆ ಸಜ್ಜುಗೊಳ್ಳಲಿದೆಯಾದರೂ ಅದರಿಂದ ಉತ್ಪಾದನೆಯಾಗುವ ವಿದ್ಯುತ್‌ನ ಸಾಗಣೆಗೆ ಅಗತ್ಯದ ವ್ಯವಸ್ಥೆ ಮಾತ್ರ ಇನ್ನೂ ಆಗಿಲ್ಲ.

Post Comments (+)