ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶನಿವಾರ, 21–1–1995

Last Updated 20 ಜನವರಿ 2020, 20:00 IST
ಅಕ್ಷರ ಗಾತ್ರ

ಕೋಬೆಯಲ್ಲಿ ಮತ್ತೆ ಭೂಕಂಪ: ಒಟ್ಟು ಸತ್ತವರು 5,000
ಟೋಕಿಯೊ, ಜ. 20 (ಪಿಟಿಐ)– ಜಪಾನ್‌ನ ಕೋಬೆಯಲ್ಲಿ ಇಂದು ಮತ್ತೆ ಭೂಕಂಪ ಸಂಭವಿಸಿದೆ. ಈ ಮಧ್ಯೆ ಮಂಗಳವಾರ ಸಂಭವಿಸಿದ ಭೀಕರ ಭೂಕಂಪ‍ದಲ್ಲಿ ಸತ್ತವರ ಸಂಖ್ಯೆ ಕನಿಷ್ಠ 5,000 ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

ಅಕಾಡೆಮಿಗಳ ಪುನರ್‌ರಚನೆ 26ರಂದುಬೆಂಗಳೂ
ರು, ಜ. 20– ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಹತ್ತು ಅಕಾಡೆಮಿಗಳ ಅಧ್ಯಕ್ಷರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಅಕಾಡೆಮಿಗಳ ಪುನರ್‌ರಚನೆ ಬಗ್ಗೆ ಈ ತಿಂಗಳ 26ರಂದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಬಿ.ಟಿ. ಲಲಿತಾ ನಾಯಕ್ ಇಂದು ಇಲ್ಲಿ ತಿಳಿಸಿದರು.

ಮತ್ತೆ ಅಪಾಯದಲ್ಲಿ ತುಂಗಭದ್ರಾ ಕಾಲುವೆ
ರಾಯಚೂರು, ಜ. 20– ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ಡೊಗರು ಬಿದ್ದಿರುವುದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದು, ಅದರ ದುರಸ್ತಿಗೆ ನೀರಾವರಿ ಇಲಾಖೆಯ ಎಂಜಿನಿಯರುಗಳು ಹಗಲೂ ರಾತ್ರಿ ಶ್ರಮಿಸತೊಡಗಿದ್ದಾರೆ.

ಮುಖ್ಯ ಕಾಲುವೆಯ ಮೊದಲ 18ನೇ ಮೈಲಿನಲ್ಲಿಯೇ ಈ ಡೊಗರು ಬಿದ್ದಿರುವುದು ನಿನ್ನೆ ಬೆಳಿಗ್ಗೆ ಪತ್ತೆಯಾಯಿತು. ಗಂಗಾವತಿ ತಾಲ್ಲೂಕಿನ ರಾಂಪುರ ಗ್ರಾಮದ ಬಳಿ ಹರಿದು ಹೋಗುವ ನೀರನ್ನು ಉಳಿಸುವ ಹಾಗೂ ದುರಸ್ತಿ ಮಾಡುವ ಉದ್ದೇಶದಿಂದ, ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನ ಮಟ್ಟವನ್ನು 17 ಅಡಿಯಿಂದ ಐದಾರು ಅಡಿಗೆ ತಗ್ಗಿಸಲಾಗಿದೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT