ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಸೋಮವಾರ 6–3–1995

Last Updated 5 ಮಾರ್ಚ್ 2020, 17:33 IST
ಅಕ್ಷರ ಗಾತ್ರ

ಮೀಸಲು ಮುಂದುವರಿಕೆಉಪರಾಷ್ಟ್ರಪತಿ ಸಮರ್ಥನೆ
ಬೆಂಗಳೂರು, ಮಾರ್ಚಿ 5–
ದಲಿತರುಎದುರಿಸುತ್ತಿರುವ ಸಮಸ್ಯೆಗಳಿಗೆಲ್ಲಾ ಮೀಸಲಾತಿ ಪರಿಹಾರ ಅಲ್ಲವಾದರೂ, ಜೀವನದಲ್ಲಿ ಯಾವುದೇ ಕ್ಷೇತ್ರ ಪ್ರವೇಶಿಸಲು ಅವರಿಗೆ ಮೀಸಲಾತಿ ಸ್ಫೂರ್ತಿ ನೀಡುತ್ತದೆ ಎಂದು ಉಪರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಅವರು ಇಂದು ಇಲ್ಲಿಅಭಿಪ್ರಾಯಪಟ್ಟರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರೂ ಮೀಸಲಾತಿಯನ್ನು ವಿರೋಧಿಸಿದ್ದರು ಎಂದು ಸ್ಮರಿಸಿದ ಉಪರಾಷ್ಟ್ರಪತಿಯವರು, ಆದರೆ ದಲಿತರು ಮುಂದೆ ಬರಲು ಮೀಸಲಾತಿ ಸಹಾಯಕವಾಗುತ್ತದೆ ಎಂದು ಹೇಳಿದರು.

ಹೇರೋಹಳ್ಳಿ ಬಳಿ ಬಾಬಾ ಸಾಹೇಬ್ ಅಂಬೇಡ್ಕರ್‌ ಶತಮಾನೋತ್ಸವ ಸಮಿತಿ ಟ್ರಸ್ಟ್‌ ಆಶ್ರಯದಲ್ಲಿ, ಅಂಬೇಡ್ಕರ್‌ ಸ್ಮಾರಕ ‘ಸ್ಫೂರ್ತಿಧಾಮ’ ಆವರಣಕ್ಕೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡು ತ್ತಿದ್ದ ನಾರಾಯಣನ್‌ ಅವರು ಎಷ್ಟೇ ಅಡ್ಡಿ ಇದ್ದರೂ ಕೇಂದ್ರ ಸರ್ಕಾರ ಮೀಸಲಾತಿಯನ್ನು ಮುಂದುವರಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂಬೈ: ಭೂಮಿ ಬೆಲೆ ಗಗನಕ್ಕೆ
ಮುಂಬೈ, ಮಾರ್ಚಿ 5 (ಯುಎನ್‌ಐ)–
ಅನಿವಾಸಿ ಭಾರತೀಯರು ಮತ್ತು ವಿದೇಶಿ ಸಂಸ್ಥೆಗಳು ಭಾರತದಲ್ಲಿ ಸ್ಥಿರ ಆಸ್ತಿ (ಭೂಮಿ) ಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿರುವುದರ ಪರಿಣಾಮವಾಗಿ ಮುಂಬೈ ಮಹಾನಗರದಲ್ಲಿ ನಿವೇಶನ, ಭೂಮಿಯ ಬೆಲೆ ಗಗನಕ್ಕೆ ಏರಿದೆ.

ತಲೆ ಮೇಲೊಂದು ಸೂರು ಹೊಂದುವ ಲಕ್ಷಾಂತರ ಮಧ್ಯಮ ವರ್ಗ ಈ ಬೆಲೆ ಏರಿಕೆಯಿಂದ ತತ್ತರಿಸಿದ್ದು, ಮನೆ ಕಟ್ಟುವ ಅವರ ಆಸೆ ಕನಸಾಗಿಯೇ ಉಳಿಯುವಂತೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT