ಶುಕ್ರವಾರ, ಜನವರಿ 24, 2020
20 °C
ಶುಕ್ರವಾರ

ಶುಕ್ರವಾರ, 16–12–1994

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಂಕಿತ ಸಚಿವರ ರಾಜೀನಾಮೆ– ಪ್ರಧಾನಿ ಸೂಚನೆ

ನವದೆಹಲಿ, ಡಿ. 15 (ಪಿಟಿಐ, ಯುಎನ್‌ಐ)– ಸಕ್ಕರೆ ಆಮದು ಹಗರಣದಲ್ಲಿ ಒಳಗೊಂಡಿರುವ ಎಲ್ಲ ಸಚಿವರು ಸ್ವಯಂಪ‍್ರೇರಣೆಯಿಂದ ರಾಜೀನಾಮೆ ಕೊಡಬೇಕು ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಸೂಚಿಸಿದರು.

ಅವರು ಕಾಂಗೈ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಈ ಇಂಗಿತ ವ್ಯಕ್ತಪಡಿಸಿದಾಗ ಸದಸ್ಯರು ಮೇಜು ಗುದ್ದಿ ಸ್ವಾಗತಿಸಿದರು.

ಎ.ಕೆ. ಆಂಟನಿ ಅವರ ರಾಜೀನಾಮೆ ಬಗ್ಗೆ  ಪ್ರಧಾನಿ ದಿಗ್ಭ್ರಾಂತಿ ವ್ಯಕ್ತಪಡಿಸಿದರು. ‘ಆಂಟನಿ ರಾಜೀನಾಮೆ ಕೊಡಬೇಕಾಗಿ ಬಂದದ್ದು ವಿಧಿಯ ಅಣಕ. ಅವರು ಏನೂ ತಪ್ಪು ಮಾಡಿಲ್ಲ ಎಂದು ನನಗೆ ಗೊತ್ತು. ಅವರನ್ನು 25 ವರ್ಷಗಳಿಂದ ಬಲ್ಲೆ. ಅವರ ಪ್ರಾಮಾಣಿಕತೆ ಬಗ್ಗೆ ನನಗೆ ಅಪಾರ ಗೌರವವಿದೆ’ ಎಂದು ರಾವ್ ಹೇಳಿದರು.

ಕಾರ್ನಾಡ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನವದೆಹಲಿ, ಡಿ. 15 (ಯುಎನ್‌ಐ, ಪಿಟಿಐ)– ಬಹುಮುಖ ಪ್ರತಿಭೆಯ ನಟ–ನಿರ್ದೇಶಕ–ನಾಟಕಕಾರ ಗಿರೀಶ್ ಕಾರ್ನಾಡ್ ಸೇರಿದಂತೆ ದೇಶದ 22 ಮಂದಿ ಸಾಹಿತಿಗಳಿಗೆ 1994ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

‘ತಲೆದಂಡ’ ನಾಟಕ ಕೃತಿಗಾಗಿ ಗಿರೀಶ್ ಕಾರ್ನಾಡ್ ಅವರು ಈ ಪ್ರಶಸ್ತಿ ಪಡೆದಿದ್ದಾರೆ.

 

ಪ್ರತಿಕ್ರಿಯಿಸಿ (+)