ಶುಕ್ರವಾರ, ಜನವರಿ 17, 2020
23 °C
1994

25 ವರ್ಷಗಳ ಹಿಂದೆ| ಭಾನುವಾರ, 18–12–1994

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧ್ಯಗೆ ಗೃಹ, ಜಾಲಪ್ಪಗೆ ಕಂದಾಯ, ಸಿದ್ದರಾಮಯ್ಯಗೆ ಹಣಕಾಸು ಖಾತೆ

ಬೆಂಗಳೂರು, ಡಿ. 17– ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರು ನೀರಾವರಿ ಖಾತೆಯನ್ನು ಪ್ರಮುಖವಾಗಿ ತಮ್ಮಲ್ಲಿರಿಸಿಕೊಂಡು ಉಪ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರಿಗೆ ವಿದ್ಯುತ್ ಜವಾಬ್ದಾರಿ ನೀಡಿ ತಮ್ಮ ನೆಚ್ಚಿನ ಶಿಷ್ಯ ಪಿ.ಜಿ.ಆರ್. ಸಿಂಧ್ಯ ಅವರಿಗೆ ಗೃಹ ಖಾತೆ ನೀಡಿದ್ದು, ಕಂದಾಯ ಹೊಣೆಯನ್ನು ಆರ್.ಎಲ್. ಜಾಲಪ್ಪ ಅವರಿಗೆ ಕೊಟ್ಟು, ಹಣಕಾಸಿನ ಖಾತೆಯನ್ನು ಸಿದ್ದರಾಮಯ್ಯ ಅವರಿಗೆ ವಹಿಸಿದ್ದಾರೆ.

ರಾಜ್ಯದ ಹಣಕಾಸಿನ ಸಂಪನ್ಮೂಲಕ್ಕೆ ಪ್ರಮುಖ ಇಲಾಖೆ ಆದ ಅಬ್ಕಾರಿಯನ್ನು ತಮ್ಮ ಮತ್ತೊಬ್ಬ ಶಿಷ್ಯ ತಿಪ್ಪೇಸ್ವಾಮಿ ಅವರಿಗೆ ಕೊಟ್ಟು, ಪ್ರಗತಿಪರರ ಗುಂಪಿನಲ್ಲಿ ಸದಾ ಒಬ್ಬರಾಗಿ ಕಾಣಿಸಿಕೊಳ್ಳುವ ಎಂ.ಪಿ. ಪ್ರಕಾಶ್ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ನೀಡಿ ಹೆಚ್ಚಿನ ಹೊಣೆಗಾರಿಕೆ ನೀಡಿದ್ದಾರೆ.

ಸಿ.ಎಂ. ಇಬ್ರಾಹಿಂ ದಳದ ಅಧ್ಯಕ್ಷ

ಬೆಂಗಳೂರು, ಡಿ. 17– ಜನತಾ ದಳದ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಇಂದು ಇಲ್ಲಿ ನೇಮಕಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)