ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಭಾನುವಾರ 19–2– 1995

Last Updated 18 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ತೆರಿಗೆ ವಂಚನೆ ಹಾವಳಿವಿರುದ್ಧ ಸಿಂಗ್ ಎಚ್ಚರಿಕೆ
ಮುಂಬೈ, ಫೆ. 18 (ಪಿಟಿಐ, ಯುಎನ್‌ಐ): ತೆರಿಗೆ ವಂಚಕರಿಂದ ದೇಶಕ್ಕೆ ಅಪಾರ ಹಾನಿಯಾಗುತ್ತಿದೆ ಎಂದು ಇಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್, ಇಂಥವರ ವಿರುದ್ಧ ಹೋರಾಟ ನಡೆಸುವಂತೆ ವಾಣಿಜ್ಯೋದ್ಯಮಿಗಳಿಗೆ ಕರೆ ನೀಡಿದರು.

ಸರಿಯಾಗಿ ತೆರಿಗೆ ಕಟ್ಟದೆ ತಪ್ಪಿಸುತ್ತಿರುವವರು ಕೋಟಿಗಟ್ಟಲೆ ಮಕ್ಕಳನ್ನು ಶಿಕ್ಷಣ ಮತ್ತು ಆರೋಗ್ಯ ಸೇವೆಯಿಂದ ವಂಚಿ ಸುತ್ತಿರುವ ಪಾಪದ ಹೊಣೆ ಹೊರಬೇಕಾ ಗುತ್ತದೆ ಎಂದು ಅವರು ಇಲ್ಲಿನ ಆದಾಯ ತೆರಿಗೆ ಕಚೇರಿಯಲ್ಲಿ ಪ್ರಾದೇಶಿಕ ಕಂಪ್ಯೂ ಟರ್ ಕೇಂದ್ರ ಉದ್ಘಾಟಿಸುತ್ತ ಹೇಳಿದರು.

ವಾಣಿಜ್ಯೋದ್ಯಮಿಗಳು ತೆರಿಗೆ ವಿಷಯದಲ್ಲಿ ಪ್ರಾಮಾಣಿಕತೆ ತೋರಲಿ ಎಂಬ ಸದುದ್ದೇಶದಿಂದ ಸರ್ಕಾರ ತೆರಿಗೆ ದರಗಳನ್ನು ಕಡಿಮೆ ಮಾಡಿದೆ. ಆದರೆ, ಈಗಲೂ ಆದಾಯ, ಕಸ್ಟಮ್ಸ್‌ ಮತ್ತು ಎಕ್ಸೈಸ್ ತೆರಿಗೆ ಪಾವತಿಯಲ್ಲಿ ಭಾರಿ ಪ್ರಮಾಣದ ವಂಚನೆ ನಡೆಯುತ್ತಿದೆ ಎಂದು ವಿಷಾದಿಸಿದರು.

ಬಡ್ತಿ ಅವಕಾಶಕ್ಕಾಗಿ ಬೋಧಕ ಶ್ರೇಣಿ ಪುನರ‍್ರಚನೆ
ಬೆಂಗಳೂರು, ಫೆ. 18: ಶಿಕ್ಷಣಾಧಿಕಾರಿ ಮತ್ತು ಸಹಾಯಕ ಶಿಕ್ಷಣಾಧಿಕಾರಿ ಹುದ್ದೆಗಳನ್ನು ಮೇಲ್ದರ್ಜೆಗೆ ಏರಿಸುವುದು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ಅವಕಾಶ ಕಲ್ಪಿಸಲು ಹೊಸ ಹುದ್ದೆಗಳ ಸೃಷ್ಟಿ ಸೇರಿದಂತೆ ಶೈಕ್ಷಣಿಕ ಗುಣಮಟ್ಟ ಉತ್ತಮಪಡಿಸುವ ಹಾಗೂ ಅಧಿಕಾರ ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕ ಶ್ರೇಣಿಯ ಪುನರ‍್ರಚನೆಗೆ ರಾಜ್ಯ ಸಚಿವ ಸಂಪುಟದ ಒಪ್ಪಿಗೆ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT