ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ 10-3-1995

Last Updated 9 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬಿಹಾರ: ನಾಳೆ ಮೊದಲ ಸುತ್ತಿನ ಮತದಾನಕ್ಕೆ ಆಯೋಗ ಅಸ್ತು
ನವದೆಹಲಿ, ಮಾರ್ಚಿ 9 (ಯುಎನ್ಐ, ಪಿಟಿಐ):
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಲಲ್ಲೂ ಪ್ರಸಾದ್ ಯಾದವ್ ನೇತೃತ್ವದ ಸರ್ಕಾರವು ಚುನಾವಣೆ ಆಯೋಗಕ್ಕೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಿಹಾರ ವಿಧಾನಸಭೆಗೆ ಮೊದಲ ಸುತ್ತಿನ ಮತದಾನವನ್ನು ನಿಗದಿಯಂತೆ ನಡೆಸಲು ಆಯೋಗ ನಿರ್ಧರಿಸಿದೆ.

ಇದರಿಂದಾಗಿ ಅಲ್ಲಿನ ವಿಧಾನಸಭೆ ಚುನಾವಣೆ ಬಗ್ಗೆ ಕಳೆದ ಒಂದು ವಾರದಿಂದ ಉದ್ಭವಿಸಿದ್ದ ಆತಂಕ ನಿವಾರಣೆಯಾದಂತಾ ಗಿದೆ. ಆದರೆ ಆಯೋಗಕ್ಕೆ ತೃಪ್ತಿಕರವಾಗುವ ರೀತಿಯಲ್ಲಿ ಮತದಾನ ನಡೆದರೆ ಮಾತ್ರ ಎರಡನೇ ಹಾಗೂ ಅಂತಿಮ ಹಂತದ (ಮಾರ್ಚಿ 15 ಮತ್ತು 19) ಮತದಾನವನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಬಿಹಾರದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹಾಗೂ ಚುನಾವಣಾ ಸಿದ್ಧತೆಗಳ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅತೃಪ್ತಿ ವ್ಯಕ್ತಪಡಿಸಿದರೂ ಮೊದಲ ಸುತ್ತಿನ ಮತದಾನವನ್ನು ನಿಗದಿಯಂತೆ ನಡೆಸುವುದಾಗಿ ಪಟ್ನಾದಲ್ಲಿ ತಿಳಿಸಿದ್ದರು.

ವಿದೇಶಿ ಒಪ್ಪಂದದ ವಿವರ ಸದನದಲ್ಲಿ ಮಂಡನೆಗೆ ಆಗ್ರಹ
ಬೆಂಗಳೂರು, ಮಾರ್ಚಿ 9–
ಅಮೆರಿಕದ ಕೊಜೆಂಟ್ರಿಕ್ಸ್ ಸಂಸ್ಥೆಯ ಜೊತೆಗಿನ ವಿದ್ಯುತ್ ಕೊಳ್ಳುವಿಕೆ ಒಪ್ಪಂದವೂ ಸೇರಿದಂತೆ ರಾಜ್ಯ ಸರ್ಕಾರ ವಿದೇಶಿ ಕಂಪನಿಗಳ ಜೊತೆ ಸಹಿ ಹಾಕಿರುವ ಎಲ್ಲ ಒಪ್ಪಂದ ಪತ್ರಗಳ ವಿವರವನ್ನೂ ಶಾಸನಸಭೆಯಲ್ಲಿ ಮಂಡಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ಎಂ.ಡಿ.ನಂಜುಂಡ ಸ್ವಾಮಿ ಇಂದು ಇಲ್ಲಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT