ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಗುರುವಾರ, 1–6–1995

Last Updated 31 ಮೇ 2020, 20:00 IST
ಅಕ್ಷರ ಗಾತ್ರ

ಕಾವೇರಿ: ಲೋಕಸಭೆಯಲ್ಲಿ ಗದ್ದಲ
ನವದೆಹಲಿ, ಮೇ 31– ಕಾವೇರಿ ನ್ಯಾಯಮಂಡಲಿಯ ಮಧ್ಯಂತರ ತೀರ್ಪನ್ನು ಜಾರಿಗೆ ತರಲು ಕರ್ನಾಟಕಕ್ಕೆ ಸ್ಪಷ್ಟ ಆದೇಶ ನೀಡುವಂತೆ ಲೋಕಸಭೆಯಲ್ಲಿ ಇಂದು ತಮಿಳುನಾಡು ಸದಸ್ಯರು ಪಕ್ಷಾತೀತವಾಗಿ ಕೇಂದ್ರವನ್ನು ಆಗ್ರಹಿಸಿ ಸಭಾಧ್ಯಕ್ಷರ ಪೀಠದ ಮುಂಭಾಗದ ಅಂಗಳಕ್ಕೆ ಬಂದಾಗ ಕರ್ನಾಟಕದ ಸದಸ್ಯರೂ ಪ್ರತಿಯಾಗಿ ಅಂಗಳಕ್ಕಿಳಿದು ಪ್ರತಿಭಟನೆ ನಡೆಸಿದ್ದರಿಂದ ಭಾರಿ ಕೋಲಾಹಲ ಉಂಟಾಯಿತು.

ಶೂನ್ಯ ವೇಳೆಯಲ್ಲಿ ಈ ಗದ್ದಲ ಉಂಟಾದ ಬಳಿಕ ಹೇಳಿಕೆ ನೀಡಿದ ಜಲಸಂಪನ್ಮೂಲ ಸಚಿವ ವಿದ್ಯಾಚರಣ ಶುಕ್ಲಾ, ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಈಗ ನ್ಯಾಯಮಂಡಲಿಯ ಮುಂದಿದೆ. ನ್ಯಾಯಮಂಡಲಿಯು ತನ್ನ ಅಂತಿಮ ತೀರ್ಪು ನೀಡುವವರೆಗೆ, ಪ್ರಕಟಿಸಿರುವ ಮಧ್ಯಂತರ ವರದಿಯ ಜಾರಿಗೆ ಎಲ್ಲರೂ ಬದ್ಧವಾಗಬೇಕಾಗಿದೆ. ನ್ಯಾಯಮಂಡಲಿ ಆದಷ್ಟು ಬೇಗ ತನ್ನ ಅಂತಿಮ ತೀರ್ಪು ನೀಡುವುದು ಎಂಬುದು ಕೇಂದ್ರ ಸರ್ಕಾರದ ನಿರೀಕ್ಷೆ ಎಂದರು.

ಕೃಷ್ಣಾ ಜಲ ಸಂಗ್ರಹ ಕಾಮಗಾರಿ ತ್ವರಿತ
ಮೈಸೂರು, ಮೇ 31– ಬಚಾವತ್‌ ನ್ಯಾಯಮಂಡಲಿಯ ತೀರ್ಪಿನಂತೆ ಕೃಷ್ಣಾ ನದಿ ನೀರಿನಲ್ಲಿ ರಾಜ್ಯದ ಪಾಲನ್ನು ಉಳಿಸಿಕೊಳ್ಳಲು ಮುಂದಿನ ಎರಡು ವರ್ಷಗಳಲ್ಲಿ 550 ಟಿಎಂಸಿ ನೀರನ್ನು ಸಂಗ್ರಹಿಸಿಕೊಳ್ಳುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT