ಬುಧವಾರ, ನವೆಂಬರ್ 13, 2019
23 °C

ಮಂದಿರ ನಿರ್ಮಾಣ ಟ್ರಸ್ಟ್ ರಚನೆಗೆ ವ್ಯಾಪಕ ವಿರೋಧ

Published:
Updated:

ಮಂದಿರ ನಿರ್ಮಾಣ ಟ್ರಸ್ಟ್ ರಚನೆಗೆ ವ್ಯಾಪಕ ವಿರೋಧ

ನವದೆಹಲಿ, ಅ. 16 (ಪಿಟಿಐ, ಯುಎನ್‌ಐ)– ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶಂಕರಾಚಾರ್ಯರುಗಳನ್ನು ಒಳಗೊಂಡ ಒಂಬತ್ತು ಸದಸ್ಯರ ರಾಜಕೀಯೇತರ ಟ್ರಸ್ಟ್ ರಚನೆ ಸಾಕಷ್ಟು ವಿವಾದ ಹುಟ್ಟಿಸಿದ್ದು, ಹಲವು ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ನಾಯಕರು ಇದನ್ನು ‘ಸರ್ಕಾರಿ ಪ್ರೇರಿತ ತಂತ್ರ’ ಎಂದು ಟೀಕಿಸಿದ್ದಾರೆ.

ಶ್ರೀರಾಮ ಜನ್ಮಭೂಮಿ ರಾಮಾಲಯ ನ್ಯಾಸ ಎಂಬ ಹೆಸರಿನ ಈ ಟ್ರಸ್ಟ್‌ನ ಸಂಚಾಲಕರ ಯಾದಿಯಲ್ಲಿ ತಮ್ಮ ಹೆಸರು ಸೇರ್ಪಡೆಯ ಬಗ್ಗೆ ಅಯೋಧ್ಯೆಯ ಸ್ವಾಮಿ ಪುರುಷೋತ್ತಮ ಆಚಾರ್ಯ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಶ್ರೀರಾಮ ಜನ್ಮಸ್ಥಳದ ಗರ್ಭಗೃಹದಿಂದ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುವುದಾದರೆ ಮಾತ್ರ ತಾವು ಟ್ರಸ್ಟ್‌ನಲ್ಲಿ ಉಳಿಯುವುದಾಗಿ ಇನ್ನೊಬ್ಬ ಸದಸ್ಯ ಸ್ವಾಮಿ ಹರಿಯಾಚಾರ್ಯ ಅವರು ಅಯೋಧ್ಯೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಶೇಷನ್ ಪುಸ್ತಕಕ್ಕೆ ಕೋರ್ಟ್ ತಡೆ

ಮದ್ರಾಸು, ಅ. 16 (ಯುಎನ್‌ಐ)– ಟಿ.ಎನ್. ಶೇಷನ್ ಅವರ ಜೀವನಚರಿತ್ರೆಯಾದ ‘ಶೇಷನ್– ಒಂದು ಆತ್ಮೀಯ ಕಥನ’ (ಶೇಷನ್– ಆ್ಯನ್ ಇಂಟಿಮೇಟ್ ಸ್ಟೋರಿ) ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಇಂದು ಆರು ವಾರಗಳ ತಡೆಯಾಜ್ಞೆ ನೀಡಿತು.

ಅಣ್ಣಾದೊರೆ ಅವರ ಬಗ್ಗೆ ನಿಂದನಾತ್ಮಕ ಮಾತುಗಳಿರುವ ಭಾಗದೊಂದಿಗೆ ಈ ಪುಸ್ತಕದ ಪ್ರಕಾಶನ, ಬಿಡುಗಡೆ ಹಾಗೂ ಮಾರಾಟ ಕೂಡದು ಎಂದು ಹೈಕೋರ್ಟಿನ ನ್ಯಾಯಾಧೀಶ ಎಂ. ಶ್ರೀನಿವಾಸನ್ ಅವರು ಆದೇಶ ನೀಡಿದರು.

‌ವೀರಶೈವ ಮಠಗಳ ಒಕ್ಕೂಟ ರಚನೆಗೆ ನಿರ್ಧಾರ

ಬೆಂಗಳೂರು, ಅ. 16– ನಾಡಿನ ಉದ್ದಗಲಕ್ಕೂ ಹರಡಿರುವ ವೀರಶೈವ ಮಠಗಳ ಒಕ್ಕೂಟ ರಚಿಸಲು ವೀರಶೈವ ಮಠಾಧೀಶರು ನಿರ್ಧರಿಸಿದ್ದಾರೆ.

 

ಪ್ರತಿಕ್ರಿಯಿಸಿ (+)