ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನತ್ತ ಅರ್ಧಕ್ಕೂ ಹೆಚ್ಚು ದೂರ ಅಪೊಲೊ ಯಾನ

Last Updated 22 ಡಿಸೆಂಬರ್ 2018, 20:34 IST
ಅಕ್ಷರ ಗಾತ್ರ

ಚಂದ್ರನತ್ತ ಅರ್ಧಕ್ಕೂ ಹೆಚ್ಚು ದೂರ ಅಪೊಲೊ ಯಾನ

ಕೇಪ್ ಕೆನೆಡಿ ಡಿ. 22–ಭೂಮಿಯಿಂದ ಹಾರಿದ 28 ಗಂಟೆಗಳ ನಂತರ ಅಪೊಲೊ–8 ಗಗನಗಾಮಿಗಳು ಗಂಟೆಗೆ 3,500 ಮೈಲಿ ವೇಗದಲ್ಲಿ 1,25,000 ಮೈಲಿ ದೂರ ಪ್ರಯಾಣ ಮಾಡಿ ಚಂದ್ರನತ್ತ ಅರ್ಧದಷ್ಟಕ್ಕೂ ಹೆಚ್ಚು ಮಾರ್ಗ ದಾಟಿದ್ದಾರೆ.

ಗಗನನೌಕೆಯ ಎಲ್ಲ ವ್ಯವಸ್ಥೆಗಳೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು ಇದರಿಂದ ಗಗನಗಾಮಿಗಳೂ, ಅಂತರಿಕ್ಷ ಅಧಿಕಾರಿಗಳೂ ತೃಪ್ತರಾಗಿದ್ದಾರೆ.

ತಾಂತ್ರಿಕ ಸಮಾಚಾರ ವಿನಿಮಯದ ಹೊರತು ಪ್ರಯೋಗ ನೆಲೆ ಅಧಿಕಾರಿಗಳಿಗೂ, ಚಂದ್ರನ ಮೇಲ್ಮೈನಿಂದ 69 ಮೈಲಿ ಮೇಲಿನ ಪಥ ಮುಟ್ಟಲು ಸಾಗುತ್ತಿರುವ ಗಗನಗಾಮಿಗಳಾದ ಫ್ರಾಂಕ್ ಬೊರ್ಮನ್, ಜೇಮ್ಸ್ ಲೊವೆಲ್ ಮತ್ತು ವಿಲಿಯಂ ಆಂಡರ್ಸ್ ಅವರಿಗೂ ನಡುವೆ ಹೆಚ್ಚಿನ ಸಂಭಾಷಣೆ ನಡೆಯಲಿಲ್ಲ.

**

ಸಿನೆಮಾ ನಡೆದು ಬಂದ ದಾರಿ

ನವದೆಹಲಿ ಡಿ. 22–ಅಭಿಮಾನಿಗಳ ಸಂಖ್ಯೆ ಕಡಿಮೆಯೆನಿಸಿದರೂ ಈಚಿನ ವರ್ಷಗಳಲ್ಲಿ ರಾಷ್ಟ್ರದಲ್ಲಿ ಪ್ರಾದೇಶಿಕ ಚಿತ್ರರಂಗ ದೃಢವಾಗಿ ಮತ್ತು ಅದ್ಭುತವಾಗಿ ಬೆಳೆಯುತ್ತಿದೆಯೆಂದು ಅಧಿಕೃತ ಸಮೀಕ್ಷೆಯೊಂದರಿಂದ ವ್ಯಕ್ತಪಟ್ಟಿದೆ.

‘ಭಾರತೀಯ ಚಲನ ಚಿತ್ರರಂಗದ 55 ವರ್ಷ’ ಎಂಬ ಆ ಸಮೀಕ್ಷೆ 1967ರಲ್ಲಿ ರಾಷ್ಟ್ರೀಯ ಚಲನಚಿತ್ರ ಉತ್ಪಾದನೆ ಹೊಸ ವಿಕ್ರಮ ಸ್ಥಾಪಿಸಿದೆಯೆಂದು ತಿಳಿಸಿದೆ. 1967ರಲ್ಲಿ 333 ಚಲನಚಿತ್ರಗಳು ತಯಾರಾಗಿದ್ದರೆ, 1966ರಲ್ಲಿ 316 ಮತ್ತು 1965ರಲ್ಲಿ 325 ತಯಾರಾಗಿದ್ದವು. ಇವುಗಳಲ್ಲಿ ಪ್ರಾದೇಶಿಕ ಭಾಷೆಯವೇ 248 ಆಗಿದ್ದು ಅದೂ ಕೂಡ ಒಂದು ಹೊಸ ಸಾಧನೆ. ಇದು ಅದರ ಹಿಂದಿನ ವರ್ಷದಲ್ಲಿದ್ದುದಕ್ಕಿಂತ 36 ಹೆಚ್ಚು.

**

ವನಸ್ಪತಿ ಬೆಲೆ ಮತ್ತಷ್ಟು ಕಡಿಮೆ

ನವದೆಹಲಿ ಡಿ. 22–ವನಸ್ಪತಿ ಬೆಲೆಯನ್ನು ನಾಳೆಯಿಂದ ಮತ್ತಷ್ಟು ಇಳಿಸಿರುವುದಾಗಿ ಸರ್ಕಾರ ಇಂದು ಪ್ರಕಟಿಸಿದೆ. ಸರ್ಕಾರದ ಈ ಆಜ್ಞೆಯ ಪ್ರಕಾರ ದಕ್ಷಿಣ ವಲಯದಲ್ಲಿ ವನಸ್ಪತಿಯ ಬೆಲೆ ಕೆ.ಜಿ.ಗೆ 20 ಪೈಸೆಗಳಷ್ಟು ಕಡಿಮೆಯಾಗುವುದು. ಇದರ ಪರಿಣಾಮವಾಗಿ ವನಸ್ಪತಿಯ ಚಿಲ್ಲರೆ ಬೆಲೆ ಸ್ಥಳೀಯ ತೆರಿಗೆಗಳನ್ನು ಬಿಟ್ಟು ಕೆ.ಜಿ.ಗೆ 4 ರೂ. 2 ಪೈಸೆ ಆಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT