ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 20–9–1969

Last Updated 19 ಸೆಪ್ಟೆಂಬರ್ 2019, 19:35 IST
ಅಕ್ಷರ ಗಾತ್ರ

‘ತಾತಯ್ಯ’ನವರ ಆದರ್ಶ, ನಿಷ್ಠೆ, ವಿಚ್ಛಿದ್ರಕಾರಕ ಶಕ್ತಿಗಳ ವಿರುದ್ಧ ಹೋರಾಟಕ್ಕೆ ದಾರಿದೀಪ: ಶ್ರೀ ಗಿರಿ
ಮೈಸೂರು, ಸೆ. 19–
‘ಮೈಸೂರಿನ‍ಪತ್ರಿಕೋದ್ಯಮದ ಜನಕ, ಪ್ರಾಂತ್ಯ, ಜಾತಿ, ಮತ ಮುಂತಾದ ಸಂಕುಚಿತ ಭಾವನೆಗಳ ಪ್ರಬಲ ಶತ್ರು, ಜನರ ಪ್ರೀತಿಯ ತಾತಯ್ಯ ಶ್ರೀ ಎಂ. ವೆಂಕಟಕೃಷ್ಣಯ್ಯನವರ ರಾಷ್ಟ್ರಭಕ್ತಿ, ರಾಷ್ಟ್ರದ ಭವಿಷ್ಯದಲ್ಲಿ ಅವರು ಇಟ್ಟಿದ್ದ ನಂಬಿಕೆ ಇಂದು ನಮಗೆ ಅಗತ್ಯ. ಪ್ರಬಲಗೊಳ್ಳುತ್ತಿರುವ ವಿಚ್ಛಿದ್ರಕಾರಕ ಶಕ್ತಿಗಳ ವಿರುದ್ಧ ಹೋರಾಟಕ್ಕೆ ತಾತಯ್ಯನವರ ಆದರ್ಶ, ಶಿಸ್ತು, ಸೇವಾಭಾವನೆ, ಕರ್ತವ್ಯ ನಿಷ್ಠೆ ನಮಗೆ ದಾರಿದೀಪವಾಗಿ ಸ್ಫೂರ್ತಿ ನೀಡಬೇಕು’ ಎಂದು ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಅವರು ಇಂದು ಇಲ್ಲಿ ಕರೆ ನೀಡಿದರು.

ಲ್ಯಾನ್ಸ್‌ಡೌನ್ ಕಟ್ಟಡದ ಮುಂಭಾಗದಲ್ಲಿ ತಾತಯ್ಯನವರ ಅಮೃತಶಿಲಾ ಪ್ರತಿಮೆಯನ್ನು ಅನಾವರಣ ಮಾಡಿದ ಶ್ರೀ ಗಿರಿಯವರು, ತಾತಯ್ಯನವರ ಆದರ್ಶ ಗುಣಗಳು ನಮ್ಮಲ್ಲಿ ಶಿಸ್ತು ಮತ್ತು ಒಗ್ಗಟ್ಟನ್ನು ಮೂಡಿಸಿ, ಸಮಾಜವಾದಿ ಸಮಾಜ ರಚನೆ ಹಾದಿಯಲ್ಲಿ ಶೀಘ್ರವಾಗಿ ಮುನ್ನಡೆಯುವಂತೆ ಮಾಡಲೆಂದು ಹಾರೈಸಿದರು.

ಪ್ರಧಾನಮಂತ್ರಿಯದೇ ಪರಮಾಧಿಕಾರ: ನಾಯಕ್
ಮುಂಬಯಿ, ಸೆ. 19–
‘ಪ್ರಧಾನ ಮಂತ್ರಿಯವರದೇ ಪರಮಾಧಿಕಾರ. ಪ್ರಧಾನಿಯ ಈ ಸರ್ವೋಚ್ಚ ಅಧಿಕಾರವನ್ನು ಕಡೆಗಣಿಸುವುದು ಅಥವಾ ಲಘುವಾಗಿ ಕಾಣುವುದು ದೇಶದ ಹಿತಾಸಕ್ತಿಗೆ ಅಪಾಯಕಾರಿ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ವಿ.ಪಿ. ನಾಯಕ್ ಅವರು ಇಂದು ಇಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT