ಯು.ಪಿ.ಯಲ್ಲಿ ಕಾಂಗ್ರೆಸ್ ಮುನ್ನಡೆ: ಪಂಜಾಬ್‌ನಲ್ಲಿ ಅಕಾಲಿದಳದ ಮೇಲುಗೈ

7
ವಾರ

ಯು.ಪಿ.ಯಲ್ಲಿ ಕಾಂಗ್ರೆಸ್ ಮುನ್ನಡೆ: ಪಂಜಾಬ್‌ನಲ್ಲಿ ಅಕಾಲಿದಳದ ಮೇಲುಗೈ

Published:
Updated:

ಯು.ಪಿ.ಯಲ್ಲಿ ಕಾಂಗ್ರೆಸ್ ಮುನ್ನಡೆ: ಪಂಜಾಬ್‌ನಲ್ಲಿ ಅಕಾಲಿದಳದ ಮೇಲುಗೈ

ಮರಿ ಮಹಾಚುನಾವಣೆಯ ಮತ ಎಣಿಕೆಯ ಪ್ರಥಮ ದಿನ, ಇದುವರೆಗೆ ಪ್ರಕಟವಾದ ಚುನಾವಣಾ ಫಲಿತಾಂಶಗಳಿಂದ ಉತ್ತರ ‍ಪ್ರದೇಶದಲ್ಲಿ ಕಳೆದುಕೊಂಡ ಸ್ಥಾನವನ್ನು ಕಾಂಗ್ರೆಸ್ ಪುನಃ ಪಡೆಯುತ್ತಿರುವುದು ಕಂಡು ಬರುತ್ತಿದೆ.

ಪಂಜಾಬಿನಲ್ಲಿ ಶಿರೋಮಣಿ ಅಕಾಲಿ ದಳ ಹೆಚ್ಚಿನ ಸ್ಥಾನಗಳನ್ನು ಗಳಿಸುತ್ತಿದ್ದು 104 ಸದಸ್ಯ ರಾಜ್ಯ ವಿಧಾನ ಸಭೆಯ
ಏಕೈಕ ಬೃಹತ್ ಪಕ್ಷವಾಗಿ ಮುಂದುವರಿಯುತ್ತಿದೆ.

ಚರಣ್‌ಸಿಂಗ್‌ಗೆ ಭಾರಿ ಜಯ

ಮೇರತ್, ಫೆ. 10– ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಕ್ರಾಂತಿದಳದ ನಾಯಕ ಚರಣ್‌ಸಿಂಗ್‌ರವರು ಚಪ್ರೌಲಿ ಕ್ಷೇತ್ರದಿಂದ ಕಾಂಗ್ರೆಸ್ ಹಾಗೂ ಇತರ ಮೂವರು ಪ್ರತಿಸ್ಪರ್ಧಿಗಳನ್ನು ಸೋಲಿಸಿ 48,000 ಮತಗಳ ವ್ಯತ್ಯಾಸದಿಂದ ಚುನಾಯಿತರಾಗಿದ್ದಾರೆ.

ಮುಂಬೈಯಲ್ಲಿ ಮತ್ತೆ ಗೋಲಿಬಾರ್: 12 ಸಾವು, ಕರ್ಫ್ಯೂ ವಿಸ್ತರಣೆ

ಮುಂಬೈ, ಫೆ. 10– ಮೈಸೂರು–ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಶಿವಸೇನೆ ಚಳವಳಿಯಿಂದ ಸಿಡಿದೆದ್ದಿರುವ ಹಿಂಸಾಚಾರದಲ್ಲಿ ಇಂದು ಮುಂಬೈನ ಕೆಲವು ಕಡೆ ಗೋಲಿಬಾರ್‌ನಿಂದ 12 ಜನ ಸತ್ತರು.

ಕಳೆದ ಎರಡು ದಿನಗಳಿಂದ ಸಂಭವಿಸುತ್ತಿರುವ ಗಲಭೆಗಳಲ್ಲಿ ಪೊಲೀಸರ ಗೋಲಿಬಾರ್‌ನಿಂದ ಇದೂ ಸೇರಿ ಇದುವರೆಗೆ ಒಟ್ಟು 22 ಜನ ಸತ್ತರೆಂದು ಪೊಲೀಸರು ಪ್ರಕಟಿಸಿದ್ದಾರೆ. ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !