ಭಾರತ ದೇಶದ, ಕರ್ನಾಟಕ ರಾಜ್ಯದ, ಕನ್ನಡ ಭಾಷೆ ಹಾಗೂ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯವಾಗಿದೆ. ಅಲ್ಲದೆ ಬಸವಾದಿಶರಣರ ಶಿವಸದನದ ದೈವ ಭಾಷೆ ಕನ್ನಡ. ನಾವೆಲ್ಲರೂ ಗರ್ವ ಪಡಬೇಕಾದ ಸಂಗತಿ. ಪರಮಾತ್ಮನ ಭಾಷೆ ಕನ್ನಡ, ಮುಕ್ತಿ ಮಂಟಪದ ಬೀಡು ಕನ್ನಡ ನಾಡು.ನಿತ್ಯ ಮುಕ್ತನ ಮಾಡುವ ದೇವ ಲಿಪಿ ಕನ್ನಡವಾಗಿದೆ.

ಧಾರ್ಮಿಕ ಕ್ಷೇತ್ರದಲ್ಲಿ ಮುಕ್ತಿ ಹೊಂದುವ ಸಾಮಾನ್ಯರಿಗೆ ಕಷ್ಟವಾದ ಭಾಷೆಯನ್ನು ಸುಲಲಿತಗೊಳಿಸಿ ಹಾಗೂ ತನ್ನದೇ ಅದ ಲಿಂಗ ಚೈತನ್ಯದ ಉಪ್ಪರಿಗೆಯ ಮೇಲೆ ನಿಂತು ತಾನು ಮೇಲು ನೀನು ಕೀಳೆಂಬ ಸಮಾಜಕ್ಕೆ ಕನ್ನಡದಲ್ಲೇ ದೈವತ್ವದೆಡೆಗೆ ಸಾಧನೆಯನ್ನು ತೋರಿದ ಬಸವಾದಿಪ್ರಮಥರು ಮಹಾ ದಾರ್ಶನಿಕರು.

ಕನ್ನಡವನ್ನು ದೈವ ಭಾಷೆಯನ್ನಾಗಿಸಿ ಸಚ್ಚಿದಾನಂದ ನಿತ್ಯ ಪರಿಪೂರ್ಣ ಪರಮಾತ್ಮನನ್ನು ಕರಸ್ಥಲಕ್ಕೆ ತಂದು ಇಷ್ಟಲಿಂಗವಾಗಿಸಿ ಜೀವನ್ ಮುಕ್ತಿಗೆ ನಿಜ ನಿಚ್ಚಣಿಕೆಯಾದವರು ಬಸವಾದಿ ಶಿವಶರಣರು.

ಬೆಳಕು ಕತ್ತಲಿನ ನಡುವಣ ನಿರಂಜನ ಜ್ಯೋತಿಯ ಮಹಾ ಬೆಳಕು ಕನ್ನಡ ಭಾಷೆಯಾಗಿದೆ. ಏಕೆಂದರೆ, ಕಾಯಕದಲ್ಲಿ ಶೋಷಿತ ಕೆಳವರ್ಗ, ವರ್ಣದವರಿಗೂ ತನ್ನ ಅಂತರಂಗದ ಸ್ವರೂಪವನ್ನು ತೋರಿಕೊಟ್ಟ ಭಾಷೆ ಕನ್ನಡವಾಗಿದೆ.

ಬಸವಣ್ಣನವರು ಹೇಳುವ ಹಾಗೆ ಕೂಡಲಸಂಗನ ಶರಣರ ಭಾಷೆ ಕನ್ನಡ, ನುಡಿದರೆ ಲಿಂಗಮೆಚ್ಚಿ ಅಹುದಹುದು ಎನ್ನುವ ಭಾಷೆ ಕನ್ನಡ. ಜೀವನದ ತನ್ನ ಎಲ್ಲ ಸಂಕಟವನ್ನು ಹಾಗೂ ಶಿವ ಸಾನಿಧ್ಯವನ್ನು ಇಲ್ಲಿನ ಭಾಷೆಯಲ್ಲಿ ಇರ್ವರಿಗೂ ಸಮ ಸಾಹಿತ್ಯಮಯ ಸಂಭಾಷಣೆಗೆ ನೆರವಾದ ಭಾಷೆ ಕನ್ನಡ.

ಏನರಿಯದ ಹಸುಗೂಸು ತನಗೆ ಮೂಲವಾದ ನೋವನ್ನು ವ್ಯಕ್ತಪಡಿಸುವ ಭಾಷೆ ಅಮ್ಮ ಎಂಬುದಾಗಿದೆ, ಅಲ್ಲದೆ, ಸಾವಿನ ಮುಕ್ತಿ ಮಂತ್ರ ಶಿವ ಎಂಬುದು ಕನ್ನಡ ಭಾಷೆಯ ಸತ್ ಸ್ವರೂಪಾಗಿದೆ. ಅನುಭವ ಮಂಟಪ ಸ್ಥಾಪಿಸಿ ಮಹಾ ಭಕ್ತಿ ಜ್ಞಾನ ವೈರಾಗ್ಯ ಸಾಮ್ರಾಜ್ಯ ಸ್ಥಾಪಿಸಿ ಸಮಾಜದ ಎಲ್ಲರಿಗೂ ಇಷ್ಟಲಿಂಗ ಶಿವಯೋಗದ ಮೂಲಕ ಲಿಂಗ ಚೈತನ್ಯವನ್ನು ನೆಲೆಗೊಳಿಸಿ, ವಿಶ್ವ ಕ್ರಾಂತಿ ಮಾಡಿ, ಜಾತಿ ವರ್ಗ ವರ್ಣ ಭಾಷಾತೀತಾ ಮುಕ್ತಿ ಮಂಟಪದ ಮಹಾ ನಿರಂಜನನ ನೆಲೆಗೊಳಿಸಿದ ದೇವ ಭಾಷೆ ಬಸವಣ್ಣನವರ ಭಾಷೆ ಕನ್ನಡ.

ವಿಶ್ವ ಸಾಹಿತ್ಯಕ್ಕೆ ಮೇರು ಶಿಖರ 12ನೇ ಶತಮಾನದ ಬಸವಾದಿ ಪ್ರಮಥರು ನೀಡಿದ ವಚನ ಸಾಹಿತ್ಯದ ಭಾಷೆ ಕನ್ನಡ. ಕೊನೆಗೆ ದೇವನನ್ನು ನಾ ದೇವನ್ನಲ್ಲದೆ ನೀ ದೇವನೇ ಎಂದು ಪ್ರಶ್ನಿಸಿ, ಮುಕ್ತಿಯ ಮಹಾ ಶಿವ ಸದನವ ಗೈದ ಭಾಷೆ ಕನ್ನಡ.

ಅನೇಕಾನೇಕ ಮಹಾ ದಾರ್ಶನಿಕರ ನಡುವೆ ಮುಕ್ತಿ ಮಂಟಪದ ಕಿರು ಅವಲೋಕನ ಹಾಗೂ ಅನುಭಾವ ಮಂಟಪ, ಇದುವೇ ಅಂತರಂಗದ ಅನುಭವ ಮಂಟಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.