ಎಸ್ಸೆಸ್ಸೆಲ್ಸಿ ಫಲಿತಾಂಶದ ಉತ್ತಮೀಕರಣದ ದೃಷ್ಟಿಯಿಂದ ಡಿಸೆಂಬರ್ ಒಳಗೆ ಪಾಠ ಬೋಧನೆಯನ್ನು ಮುಗಿಸುವಂತೆ ಆದೇಶಿಸಲಾಗಿದೆ. ಆದೇಶದ ಪಾಲನೆ ಆಗಲೇಬೇಕು, ಆಗುತ್ತದೆ. ಆದರೆ, ಶಿಕ್ಷಣದ ಗುಣಮಟ್ಟದ ಉನ್ನತೀಕರಣದಲ್ಲಿ ವಾಸ್ತವಿಕ ಶೈಕ್ಷಣಿಕ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಜೂನ್ನಿಂದ ಮಾರ್ಚ್ವರೆಗಾಗಿ ಸಿದ್ಧಪಡಿಸಲಾಗಿರುವ ಪಠ್ಯಪುಸ್ತಕವನ್ನು ಡಿಸೆಂಬರ್ ಒಳಗೇ ಬೋಧಿಸಬೇಕಾದಾಗ ಇರುವ ವಾಸ್ತವವನ್ನು, ಸಮಾಜ ವಿಜ್ಞಾನ ಪಠ್ಯವೊಂದನ್ನು ಆಧರಿಸಿ ಹೀಗೆ ಕಂಡುಕೊಳ್ಳಬಹುದು:

ಒಟ್ಟು 33 ಪಾಠಗಳಿವೆ. ಅಂದರೆ 33 ಘಟಕ ಪರೀಕ್ಷೆಗಳನ್ನು ನಡೆಸಬೇಕು. ಒಂದು ಘಟಕ ಪರೀಕ್ಷೆಯ ಅವಧಿ 1 ಗಂಟೆ. ಪ್ರಶ್ನೆಗಳನ್ನು ಬರೆಯಲು 20 ನಿಮಿಷ, ವಿದ್ಯಾರ್ಥಿಗಳು ಕೂರುವ ಪ್ರಕ್ರಿಯೆಗೆ 10 ನಿಮಿಷ ಎಂದುಕೊಂಡರೆ– ಪ್ರತೀ ಪರೀಕ್ಷೆಗೆ 90 ನಿಮಿಷಗಳು ಎಂದರೆ 2 ಪಿರಿಯೆಡ್ ಬೇಕಾಗುತ್ತವೆ. 33 ಘಟಕ ಪರೀಕ್ಷೆಗಳಿಗೆ 66 ಪಿರಿಯೆಡ್ಗಳು. ಪ್ರತೀ ಪರೀಕ್ಷೆಯ ಫಲಿತಾಂಶದ ವಿಶ್ಲೇಷಣೆ ಮತ್ತು ಹಿಮ್ಮಾಹಿತಿಗೆ ತಲಾ 1 ಪಿರಿಯೆಡ್. ಒಟ್ಟು 99 ಪಿರಿಯೆಡ್ಗಳು ಘಟಕ ಪರೀಕ್ಷೆಗಳಿಗಾಗಿ ಬೇಕಾಗುತ್ತವೆ. ರೂಪಣಾತ್ಮಕ ಪರೀಕ್ಷೆಗಳಿಗೆ 8 ದಿನಗಳು. 4 ರೂಪಣಾತ್ಮಕ ಪರೀಕ್ಷೆಗಳ ಫಲಿತಾಂಶ ವಿಶ್ಲೇಷಣೆ ಮತ್ತು ಹಿಮ್ಮಾಹಿತಿಗೆ 4 ಪಿರಿಯೆಡ್ಗಳು. ಸಂಕಲನಾತ್ಮಕ ಮೌಲ್ಯಮಾಪನಕ್ಕೆ 7 ದಿನಗಳು ಮತ್ತು ವಿಶ್ಲೇಷಣೆಗೆ 1 ಪಿರಿಯೆಡ್. ಈ ಎಲ್ಲ ಕಾರ್ಯಗಳಿಗಾಗಿ ಡಿಸೆಂಬರ್ ತನಕ 119 ಪಿರಿಯೆಡ್ಗಳು ಬೇಕಾಗುತ್ತವೆ.

ಡಿಸೆಂಬರ್ವರೆಗೆ ಶಾಲಾ ದಿನಗಳು 160ರಿಂದ 165ರಷ್ಟಿರುತ್ತವೆ. ಅಂದರೆ, ವಿವಿಧ ಸಮ್ಮೇಳನ, ಕಾರ್ಯಕ್ರಮಗಳು, ತರಬೇತಿಗಳಿಗೆಲ್ಲ ವಿದ್ಯಾರ್ಥಿಗಳನ್ನು ಉಪಯೋಗಿಸದೆ ಇದ್ದರೆ ಪಾಠ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ನಡೆಸಲು 41ರಿಂದ 46 ಪಿರಿಯೆಡ್ಗಳು ದೊರೆಯುತ್ತವೆ. 41ರಿಂದ 46 ಪಿರಿಯೆಡ್ಗಳಲ್ಲಿ 33 ಪಾಠಗಳ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗಳು ಎಲ್ಲ ಬೋಧನೋದ್ದೇಶಗಳ ಸಹಿತ ಮುಗಿಯಬೇಕಾಗುತ್ತದೆ.

ಬದಲಾಗಿರುವ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ಎನ್ನುವುದು, ಪಠ್ಯ ವಸ್ತುವಿನ ವರ್ಗಾವಣೆ ಎನ್ನುವ ಸಾಮಾನ್ಯ ಅರ್ಥೈಸುವಿಕೆಯಾಗಿದೆ. ಆದರೆ, ಶಿಕ್ಷಣ ಶಾಸ್ತ್ರದ ಪ್ರಕಾರ ಬೋಧನೋದ್ದೇಶವು ಪಠ್ಯ ವಸ್ತುವಿನ ವರ್ಗಾವಣೆಗೆ ಸೀಮಿತ ಅಲ್ಲ. ಒಬ್ಬ ಸಂಗೀತ
ಗಾರ ರಾಗದ ಮೂಲಕ ರಸಸ್ಫುರಣ ಮಾಡುವುದಕ್ಕಾಗಿ ಪದಗಳನ್ನು ಬಳಸುತ್ತಾನೆ. ಆ ಪದಗಳು ‘ಲಲಲಲಾ’ ಎಂದಿದ್ದರೂ, ‘ವಾತಾಪಿ ಗಣಪತಿಂ ಭಜೇ’ ಎಂದಿದ್ದರೂ ಸಂಗೀತಗಾರನಿಗೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಅವನ ಉದ್ದೇಶ ರಾಗದ ಅನುಭೂತಿಯನ್ನು ವರ್ಗಾಯಿಸುವುದೇ ಹೊರತು ಪದಗಳನ್ನು ವರ್ಗಾಯಿಸುವುದಲ್ಲ.

ಅದೇ ರೀತಿಯಲ್ಲಿ, ಪಠ್ಯ ವಸ್ತು ಇರುವುದು ಸಾಮರ್ಥ್ಯದ ವರ್ಗಾವಣೆಗಾಗಿಯೇ ಹೊರತು ಪಠ್ಯ ವಸ್ತುವಿನ ವರ್ಗಾವಣೆಯೇ ಪ್ರಧಾನ ಅಲ್ಲ. ಯುದ್ಧದ ಪಾಠ ಮಾಡಿದಾಗ ಯುದ್ಧದ ವಿವರ ಗೊತ್ತಾಗುವುದಕ್ಕಿಂತ ಹೆಚ್ಚಾಗಿ, ಯುದ್ಧ ತಂತ್ರಗಳು ಹೇಗಿದ್ದಾಗ ಆ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು ಎಂಬುದನ್ನು ಗ್ರಹಿಸುವ ಸಾಮರ್ಥ್ಯ ಬೆಳೆಯಬೇಕು. ಮೂಲಭೂತ ಕರ್ತವ್ಯಗಳ ಪಾಠ ಮಾಡಿದಾಗ, ಅವುಗಳ ವಿವರಗಳನ್ನು ನೆನಪಿರಿಸಿಕೊಳ್ಳುವುದೇ ಪ್ರಧಾನ ಅಲ್ಲ. ಮೂಲಭೂತ ಕರ್ತವ್ಯಗಳ ಆಶಯಕ್ಕನು
ಗುಣವಾಗಿ ತನ್ನ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಗ್ರಹಿಸಿ ವಿದ್ಯಾರ್ಥಿಯ ವರ್ತನೆಯಲ್ಲಿ ಪರಿವರ್ತನೆ ತರುವುದು ಆ ಪಾಠ ಬೋಧನೆಯ ಉದ್ದೇಶವಾಗಿರುತ್ತದೆ.

ಸರ್ವ ಶಿಕ್ಷಣ ಅಭಿಯಾನದ ನಂತರದ ಕಾಲದಲ್ಲಿ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ಬೋಧ
ನೋದ್ದೇಶಗಳು ಬಹುಮಟ್ಟಿಗೆ ಹೊರಟುಹೋಗಿವೆ. ಪಠ್ಯ ವಸ್ತುವಿನ ವಿವರವನ್ನಷ್ಟೇ ಕೊಡಲಾಗುತ್ತದೆ. ಏಕೆಂದರೆ, ಬೋಧನೋದ್ದೇಶದ ಸಾಧನೆಯಾಗಿ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿ ಆಗಬೇಕಾದರೆ ಪಠ್ಯ ವಸ್ತು ಕಡಿಮೆ ಇರಬೇಕು. ಬೋಧನಾ ದಕ್ಷತೆ ಜಾಸ್ತಿ ಇರಬೇಕು. ಉದಾಹರಣೆಗೆ, ಇತಿಹಾಸದಲ್ಲಿ ನಡೆದ ಎಲ್ಲಾ ಯುದ್ಧಗಳನ್ನೂ ಪುಸ್ತಕದಲ್ಲಿ ಕೊಡಬೇಕಾಗಿಲ್ಲ. ಯುದ್ಧದ ನಿರ್ವಹಣೆಯಲ್ಲಿ ಒಂದಕ್ಕಿಂತ ಇನ್ನೊಂದು ಭಿನ್ನವಾಗಿರುವ ಯುದ್ಧಗಳನ್ನು ಕೊಟ್ಟರೆ ಸಾಕು.

ಪಠ್ಯಪುಸ್ತಕದಲ್ಲೇ ಆ ಭಿನ್ನತೆ ಏನು, ಯುದ್ಧ ತಂತ್ರಗಳು ಹೇಗಿದ್ದವು ಎಂದು ಹೇಳುವ ಅಗತ್ಯವಿಲ್ಲ. ಅದನ್ನು ಹೇಳುವುದಕ್ಕಾಗಿಯೇ ವಿಷಯ ತಜ್ಞ ಅಧ್ಯಾಪಕರ ನೇಮಕ ಆಗಿರುತ್ತದೆ. ಗಣಿತದಲ್ಲಿ ಭಾಗಿಸುವ ಲೆಕ್ಕಗಳನ್ನೇ 25–30 ಕೊಡಬೇಕಾಗಿಲ್ಲ. 4 ಲೆಕ್ಕಗಳು ಸಾಕು. ಭಾಗಿಸುವ ಸಾಮರ್ಥ್ಯ ವಿದ್ಯಾರ್ಥಿಗಳಿಗೆ ಬರಬೇಕು ಅಷ್ಟೆ. ಭಾಗಿಸುವ ಕ್ರಮದಲ್ಲೇ ವ್ಯತ್ಯಾಸ ಇದ್ದಾಗ ಭಿನ್ನ ಭಿನ್ನ ಭಾಗಾಕಾರ ಕ್ರಮಗಳನ್ನು ಪಠ್ಯಪುಸ್ತಕ ಹೊಂದಿರಬೇಕಾಗುತ್ತದೆ.

ಸರ್ವ ಶಿಕ್ಷಣ ಅಭಿಯಾನ ಹಾಗೂ ನಂತರ ಬಂದ ಶಿಕ್ಷಣ ನೀತಿಗಳೆಲ್ಲವೂ ವಿದ್ಯಾರ್ಥಿಗಳ ಸಾಮರ್ಥ್ಯ ವರ್ಧನೆ ಆಗಬೇಕು ಎಂದೇ ಹೇಳುತ್ತಿವೆ. ಆದರೆ, ಪಠ್ಯಪುಸ್ತಕವನ್ನು ರಚಿಸುವಾಗ ಶಿಕ್ಷಣ ನೀತಿಯು ಮಾರ್ಗದರ್ಶನ ಮಾಡುವುದಿಲ್ಲ. ಬದಲಿಗೆ ಅನೇಕ ಹಿತಾಸಕ್ತಿಗಳು ಮಾರ್ಗದರ್ಶನ ಮಾಡುತ್ತಿವೆ. ಆ ಹಿತಾಸಕ್ತಿಯ ತಂಡಗಳಿಗೆ ಶಿಕ್ಷಣ ಶಾಸ್ತ್ರದ ಜ್ಞಾನಕ್ಕಿಂತ ಬೇರೆಯದೇ ಅಜೆಂಡಾಗಳು ಮುಖ್ಯವಾಗಿವೆ. ಮಾನವಿಕಗಳು ಮತ್ತು ಭಾಷಿಕಗಳ ಮೇಲೆ ರಾಜಕೀಯ ಸಿದ್ಧಾಂತಗಳು ಮತ್ತು ಸಾಮಾಜಿಕ ಚಳವಳಿಗಳ ಒತ್ತಡ ಜಾಸ್ತಿ ಇದ್ದರೆ, ವಿಜ್ಞಾನ ಮತ್ತು ಗಣಿತದ ಮೇಲೆ ಪಾಲಕರ ಆರ್ಥಿಕ ಹಿತಾಸಕ್ತಿಯ ಒತ್ತಡಗಳು ಕೆಲಸ ಮಾಡುತ್ತವೆ. ಪಠ್ಯ ವಸ್ತುವನ್ನು ಕಡಿಮೆ ಮಾಡಿ ಬೋಧನೋದ್ದೇಶದ ಸಾಧನೆಗೆ ಹೆಚ್ಚು ಅವಕಾಶ ಕಲ್ಪಿಸೋಣ ಎಂದು ಹೊರಟರೆ, ಇಂದಿನ ಸಾಮಾಜಿಕ ವ್ಯವಸ್ಥೆ ಅಂತಹ ಪಠ್ಯಪುಸ್ತಕಗಳನ್ನು ತಿರಸ್ಕರಿಸಿ, ಪಾಠ ಪುಸ್ತಕದ ಗಾತ್ರವನ್ನು ದೊಡ್ಡದಾಗಿಸುವ ತನಕವೂ ವಿಶ್ರಮಿಸಲಾರದು.

‘ಕಲಿಸಲು ಆಗದಿದ್ದರೆ ಇನ್ಕ್ರಿಮೆಂಟ್ ಕಡಿತ ಮಾಡುತ್ತೇವೆ’ ಎಂದು ಅಧ್ಯಾಪಕರಿಗೆ ಹೇಳಿದರೂ, ಇನ್ಕ್ರಿಮೆಂಟ್ ಕಡಿತವೇ ಮಾಡಿದರೂ, ನಿಗದಿತ ಪಠ್ಯವನ್ನು ಕಲಿಯುವುದಕ್ಕೇ ಸಾಧ್ಯ ಇಲ್ಲದವರನ್ನು ಏನೂ ಮಾಡಲು ಸಾಧ್ಯವಿಲ್ಲ. ಅವರಿಗೆ ಬಹಳ ಸರಳೀಕೃತ ಪಠ್ಯವನ್ನು ಮಾಡಿ ಕನಿಷ್ಠ ಕಲಿಕೆಯ ಮಟ್ಟಕ್ಕೆ ತಂದು ಎನ್.ಐ.ಒ.ಎಸ್.ನಂತಹ ಸಂಸ್ಥೆಗಳು 12ನೇ ತರಗತಿ ಉತ್ತೀರ್ಣತೆಯ ಪ್ರಮಾಣ ಪತ್ರ ಕೊಡುತ್ತಿರುವಂತೆ, ಸಾರ್ವತ್ರಿಕ ಉಚಿತ ಶಿಕ್ಷಣದ ನೆಲೆಯಲ್ಲಿ ಮಾಡಬೇಕೇ ಹೊರತು, ಎಸ್ಸೆಸ್ಸೆಲ್ಸಿ ಉತ್ತೀರ್ಣ ಆಗಲಿಕ್ಕೇ ಬೇಕೆಂದು ಹಟ ಹಿಡಿದು ಉಪಯೋಗವಿಲ್ಲ. ಏಕೆಂದರೆ, ಇವರು ನಿಧಾನ ಕಲಿಕೆಯವರಲ್ಲ. ಕಲಿಯಲು ಆಗದೆ ಇರುವವರು.

ಶೈಕ್ಷಣಿಕ ಮನೋವಿಜ್ಞಾನದ ಅಧ್ಯಯನದ ಪ್ರಕಾರ, ಭಾರತದಲ್ಲಿ ಕಲಿಕಾ ಹಿಂದುಳಿಯುವಿಕೆಯು ಅತಿ ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಹಿಂದುಳಿಯುವಿಕೆಯಿಂದ ಆಗಿದೆ. ಅದನ್ನು ಸರಿಪಡಿಸಬೇಕಾದರೆ, ಅಂಥ ಕುಟುಂಬಗಳ ಮಕ್ಕಳಲ್ಲಿ ಆತ್ಮವಿಶ್ವಾಸ ತರಬೇಕು. ಕಲಿಕಾ ಚಟುವಟಿಕೆಗಳಲ್ಲಿ ಅವರು ಹೆಚ್ಚು ತೊಡಗಿಕೊಳ್ಳುವಂತೆ ಉತ್ತೇಜಿಸಬೇಕು. ಇವೆರಡನ್ನೂ ಸಾಧಿಸಬೇಕಾದರೆ ದಕ್ಷತೆ ಮತ್ತು ಬದ್ಧತೆಗಳೆರಡೂ ಇದ್ದು ಬೋಧನೆಯಲ್ಲಿ ಸ್ವಾತಂತ್ರ್ಯ ಇರುವ ಅಧ್ಯಾಪಕರು ಬೇಕು.

ಅಧ್ಯಾಪಕರಿಗೆ ದಕ್ಷತೆ ಇಲ್ಲದೆ ಇದ್ದರೆ ಅಧ್ಯಾಪಕರನ್ನು ಆಯ್ಕೆ ಮಾಡಿದ ಪರೀಕ್ಷೆ ಸರಿ ಇಲ್ಲದೆ ಇರುವುದು ಅದಕ್ಕೆ ಕಾರಣವಾಗಿರುತ್ತದೆ. ಬದ್ಧತೆ ಇಲ್ಲದಿದ್ದರೆ ಅದಕ್ಕೆ ಅಧ್ಯಾಪಕನೇ ಕಾರಣನಾಗಿರುತ್ತಾನೆ. ಆದರೆ, ಕೆಲವು ಅಧ್ಯಾಪಕರು ದಕ್ಷತೆ ಮತ್ತು ಬದ್ಧತೆ ಇಲ್ಲದವರು ಎಂದು ಔದ್ಯೋಗಿಕ ಪರಿಸರದಲ್ಲೇ ಅಧ್ಯಾಪಕರಿಗಿರಬೇಕಾದ ಸ್ವಾತಂತ್ರ್ಯವನ್ನು ಕಡಿತಗೊಳಿಸುತ್ತಾ ಹೋದರೆ, ದಕ್ಷತೆ– ಬದ್ಧತೆ ಇರುವವರಿಗೂ ಏನೂ ಮಾಡಲು ಆಗುವುದಿಲ್ಲ.

ಉದಾಹರಣೆಗೆ, ಅತೀ ಕಡಿಮೆ ಪಿರಿಯೆಡ್ಗಳಿದ್ದು ಬೋಧನೆಯನ್ನು ವೇಗವಾಗಿ ಮಾಡಿದಾಗ ನಿಧಾನ ಕಲಿಕೆಯವರಿಗೆ ಗ್ರಹಿಸಲು ಆಗುವುದಿಲ್ಲ. ಆಗ ಅವರಿಗೆ ವಿಶೇಷ ತರಗತಿಗಳನ್ನು ಮಾಡಬೇಕು. ‘ವಿಶೇಷ ತರಗತಿಗಳನ್ನು ಮಾಡಿ’ ಎನ್ನುವುದು ಸುಲಭ. ಆದರೆ, ಸಾಮಾಜಿಕವಾಗಿ ಹಿಂದುಳಿದ ಸಾಕಷ್ಟು ಕುಟುಂಬಗಳಲ್ಲಿ ಶಾಲೆ ಪ್ರಾರಂಭವಾಗುವ ಮೊದಲು ಮತ್ತು ಶಾಲೆ ಮುಗಿದ ಮೇಲೆ ತಂದೆ, ತಾಯಿಗೆ ಮಕ್ಕಳು ಸಹಾಯ ಮಾಡಬೇಕಾದಂತಹ ಅವಶ್ಯಕತೆ ಇರುತ್ತದೆ. ಸಂಜೆ ಐದೂವರೆ ತನಕ ತರಗತಿ ಮಾಡಿದರೆ ಮಕ್ಕಳು ಮನೆಗೆ ತಲುಪುವಾಗ ರಾತ್ರಿ ಆಗಿಬಿಡುವ ಸಮಸ್ಯೆ ಇರುತ್ತದೆ. ಆಗ ಹೆಣ್ಣುಮಕ್ಕಳಿಗೆ ಮತ್ತಷ್ಟು ಸಮಸ್ಯೆ. ಎಲ್ಲಕ್ಕಿಂತ ಮುಖ್ಯವಾಗಿ, ವಿಶ್ವಸಂಸ್ಥೆ ಘೋಷಿಸಿದ ಮಕ್ಕಳ ಹಕ್ಕುಗಳಲ್ಲಿ ಮಕ್ಕಳಿಗೆ ವಿಶ್ರಾಂತಿಯ ಹಕ್ಕೂ ಇದೆ.

ಪರಿಸ್ಥಿತಿ ಹೀಗಿದ್ದಾಗ ದಕ್ಷತೆ ಮತ್ತು ಬದ್ಧತೆ ಇರುವ ಅಧ್ಯಾಪಕರೂ ಏನೂ ಮಾಡಲಾರದ ಪರಿಸ್ಥಿತಿ ಬರುತ್ತದೆ. ಫಲಿತಾಂಶ ಉನ್ನತೀಕರಣಕ್ಕಾಗಿ ಅಧ್ಯಾಪಕರ ಮೇಲೆ ಹಾಕುವ ಅತಿಯಾದ ಒತ್ತಡಗಳು ಅಂತಿಮವಾಗಿ ಅಧ್ಯಾಪಕರು ತಮ್ಮ ಒತ್ತಡವನ್ನು ಮಗುವಿನ ಮೇಲೆ ಹಾಕುವ ಮೂಲಕವೇ ಈಡೇರಿಸಬೇಕು. ಇದರ ಪರಿಣಾಮ ಮಗುವಿನ ಬಾಲ್ಯವನ್ನು ಕಸಿಯುವುದಾಗುತ್ತದೆ.

ನಿಧಾನ ಕಲಿಕೆಯ ವಿದ್ಯಾರ್ಥಿಗಳಲ್ಲಿ ಇವತ್ತು ಕಂಡುಬರುವ ಬಹುಮುಖ್ಯ ಸಮಸ್ಯೆ ಭಾಷೆಯದ್ದು. ಒಳ್ಳೆಯ ಫಲಿತಾಂಶ ಬರುವುದು ವಿದ್ಯಾರ್ಥಿಯ ಬಳಿ ಇರುವ ಜ್ಞಾನದ ಸಾಮರ್ಥ್ಯಕ್ಕಲ್ಲ. ಆ ಜ್ಞಾನವನ್ನು ಬರೆದು ಹೇಳಲು ಇರುವ ಸಾಮರ್ಥ್ಯಕ್ಕೆ. ಬರೆದು ಹೇಳಬೇಕಾದ ಭಾಷಾ ಸಾಮರ್ಥ್ಯ ಬೇಕೇಬೇಕು. ಆದರೆ, ವ್ಯಾಕರಣ ನಿಯಮಾನುಸಾರ ಭಾಷೆಯನ್ನು ಕಲಿಸುವ ಪದ್ಧತಿಯನ್ನು ಕೈಬಿಡುತ್ತಾ ಬಂದ ಹಾಗೆ ವಿದ್ಯಾರ್ಥಿಗಳಲ್ಲಿ ಭಾಷಾ ಸಾಮರ್ಥ್ಯ ಕುಸಿಯುತ್ತಾ ಹೋಗಿದೆ. ಇದರರ್ಥ, ಆಧುನಿಕ ಭಾಷಾ ಕಲಿಕೆಯ ಪದ್ಧತಿ ತಪ್ಪೆಂದಲ್ಲ. ಆದರದು ಸರಾಸರಿ ಮಟ್ಟ ಮತ್ತು ಅದಕ್ಕಿಂತ ಮೇಲಿರುವ ವಿದ್ಯಾರ್ಥಿಗಳಿಗೆ ಹೊಂದಿಕೊಳ್ಳುತ್ತದೆ. ಕಲಿಕೆಯಲ್ಲಿ ಹಿಂದುಳಿದವರಿಗೆ ಹೊಂದಿಕೊಳ್ಳುವುದಿಲ್ಲ. ಫಲಿತಾಂಶದಲ್ಲೇ ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯ ಕುಸಿದಿರುವುದು ಇನ್ನೂ ದೊಡ್ಡದಾಗಿ ಕಾಣಲು ಶುರುವಾಗಿಲ್ಲ.

ಭಾಷಾ ಪತ್ರಿಕೆಗಳಲ್ಲಿ ಅನುತ್ತೀರ್ಣ ಆಗುವವರಿಗಿಂತ ಕೋರ್ ವಿಷಯಗಳಲ್ಲಿ ಅನುತ್ತೀರ್ಣತೆ ಹೆಚ್ಚಾಗಿದೆ. ಫಲಿತಾಂಶದಲ್ಲಿ ಈ ರೀತಿ ಕಾಣಿಸಲು ಕಾರಣ, ಭಾಷಾ ಪತ್ರಿಕೆಗಳ ಪ್ರಶ್ನೆಪತ್ರಿಕೆಯ ವಿನ್ಯಾಸ. ಪದ್ಯ ಬಾಯಿಪಾಠ, ಪತ್ರ ಲೇಖನ, ಗಾದೆ ಮಾತು, ಪ್ರಬಂಧ ಮುಂತಾದ ಖಾತರಿಯ ಮತ್ತು ಸರಳ ಪ್ರಶ್ನೆಗಳಿರುವುದರಿಂದ ಅದರಲ್ಲಿ ಉತ್ತೀರ್ಣರಾಗಿಬಿಡುತ್ತಾರೆ. ಆದರೆ, ಜ್ಞಾನವನ್ನೇ ಭಾಷೆಯ ಮೂಲಕ ಬರೆಯಬೇಕಾದ ಕೋರ್ ವಿಷಯಗಳಲ್ಲಿ ಭಾಷೆ ಸಮರ್ಪಕವಾಗಿ ಗೊತ್ತಿಲ್ಲದಿದ್ದರೆ, ವಿದ್ಯಾರ್ಥಿ ತನ್ನ ಜ್ಞಾನವನ್ನು ವಾಕ್ಯ ರೂಪದಲ್ಲಿ ಹೇಳಲು ಆಗುವುದಿಲ್ಲ. ಆದ್ದರಿಂದ ಕೋರ್ ವಿಷಯಗಳಲ್ಲಿ ಅನುತ್ತೀರ್ಣತೆ ಜಾಸ್ತಿ. ಆದರೆ, ಕೋರ್ ವಿಷಯಗಳಲ್ಲೂ ಅನುತ್ತೀರ್ಣತೆಗೆ ಪ್ರಧಾನ ಕಾರಣ ಭಾಷೆಯೇ.

ಆಡಳಿತವು ಶಾಲೆಗಳ ವಾಸ್ತವವನ್ನು ತಾಯ್ತನದ ಭಾವದಿಂದ ಅರ್ಥ ಮಾಡಿಕೊಂಡು ಸ್ಪಂದಿಸಬೇಕಾದ ಅಗತ್ಯವಿದೆ. ಕಡತಗಳಂತೆ ಮಕ್ಕಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಒಂದೊಂದು ಮಗುವೂ ಅನನ್ಯವಾದ ಜೀವಂತ ಕಡತವಾಗಿರುತ್ತದೆ. ಪ್ರತಿಯೊಂದು ಮಗುವಿನ ಹಿನ್ನಡೆಗೂ ಅದರದ್ದೇ ಆದ ಕಾರಣವಿರುತ್ತದೆ. ಆ ಕಾರಣಗಳನ್ನು ಅರಿತುಕೊಳ್ಳುವ ಹೃದಯಗಳು ಬೇಕಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.