ಈ ತಿಂಗಳ 17ರ ಸಂಜೆ ಬ್ಯಾಂಕಾಕಿನ ಎರವಾನ್ ದೇವಾಲಯಲ್ಲಿ ನಡೆದ ಬಾಂಬ್ ಸ್ಫೋಟ, ಬ್ಯಾಂಕಾಕ್ ಜನರನ್ನು ಬೆಚ್ಚಿ ಬೀಳಿಸಿದೆ. ಬ್ಯಾಂಕಾಕಿನಲ್ಲಿ ಇಂತಹ ಘಟನೆ ಈ ಮೊದಲು ಸಂಭವಿಸಿರಲಿಲ್ಲ. ಹಿಂದೆ ಬಾಂಬ್ ಸ್ಫೋಟಗಳು ನಡೆದಾಗ ಅವು ಒಂದು ನಿರ್ದಿಷ್ಟ ಗುಂಪನ್ನು ಗುರಿಯಾಗಿಸಿಕೊಂಡು ನಡೆದಿತ್ತು. ಅಷ್ಟೇ ಅಲ್ಲ, ಈ ತೀವ್ರತೆಯಲ್ಲಿ ಇಷ್ಟೊಂದು ಜನರನ್ನು ಬಲಿ ತೆಗೆದುಕೊಂಡ ದೊಡ್ಡ ಮಟ್ಟಿನ ಸ್ಫೋಟ ನಡೆದಿರಲಿಲ್ಲ.

ಸಾಮಾನ್ಯವಾಗಿ ದಕ್ಷಿಣ ಏಷ್ಯಾ ದೇಶಗಳ ಪೈಕಿ ಥಾಯ್ಲೆಂಡ್ ಒಂದು ಸುರಕ್ಷಿತ ರಾಷ್ಟ್ರವೆಂದು ಪರಿಗಣಿಸಲಾಗುತ್ತದೆ. ದಕ್ಷಿಣದ ಗಡಿಪ್ರದೇಶವನ್ನು ಹೊರತುಪಡಿಸಿದರೆ ಬಹುತೇಕ ಎಲ್ಲಾ ಪ್ರಾಂತ್ಯಗಳಲ್ಲೂ ಶಾಂತಿ ಇದೆ. ಸುರಕ್ಷತೆ, ನೈಸರ್ಗಿಕ ಸೌಂದರ್ಯ, ಎಲ್ಲಾ ಆರ್ಥಿಕ ವರ್ಗದ ಜನರಿಗೂ ಕೈಗೆಟಕುವ ಸವಲತ್ತುಗಳು, ಸುಲಭ ಜೀವನ, ಸುಲಭವಾಗಿ ಸಿಗುವ ವೀಸಾ ಮುಂತಾದುವುಗಳಿಂದ ಥಾಯ್ಲೆಂಡ್ ಆಕರ್ಷಣೀಯವಾಗುತ್ತದೆ.

ಸಾಮಾನ್ಯವಾಗಿ ಪ್ರವಾಸಿಗರ ಸ್ವರ್ಗ ಎಂದು ಪ್ರಸಿದ್ಧವಾಗಿದ್ದರೂ ಉದ್ಯೋಗಕ್ಕಾಗಿ, ಉದ್ಯಮಕ್ಕಾಗಿ ಇಲ್ಲಿ ಬಂದು ನೆಲೆಸಿದವರು ಬಹಳಷ್ಟು ಜನರಿದ್ದಾರೆ. ಹೆಚ್ಚೇಕೆ ನಿವೃತ್ತ ಜೀವನ ಮಾಡುವುದಕ್ಕಾಗಿ ಥಾಯ್ಲೆಂಡ್ಗೆ ಬಂದು ನೆಲೆಸುವವರೂ ಇದ್ದಾರೆ; ಅದಕ್ಕಾಗಿಯೇ ನಿವೃತ್ತಿ ವೀಸಾ ಕೂಡಾ ಲಭ್ಯವಿದೆ. ಇಲ್ಲಿ ಬಂದು ನೆಲೆಸಿದವರನ್ನು ಕಾರಣ ಕೇಳಿದರೆ ಸಾಮಾನ್ಯವಾಗಿ ಸಿಗುವ ಉತ್ತರ- ಇಲ್ಲಿ ಜೀವನ ಸುಲಭ, ಆರಾಮದಾಯಕ, ಸುರಕ್ಷಿತ ಹಾಗೂ ಥಾಯ್ ಜನರು ನಿರುಪದ್ರವಿಗಳು ಎಂಬ ಉತ್ತರ. ಇದು ಕೇವಲ ಭಾರತದಿಂದ ಬಂದು ನೆಲೆಸಿದವರ ಅಭಿಪ್ರಾಯವಲ್ಲ. ಯುರೋಪ್, ಅಮೆರಿಕ ಮುಂತಾದ ಮುಂದುವರಿದ ದೇಶಗಳಿಂದ ಇಲ್ಲಿಗೆ ಜನ ಬಂದು ನೆಲೆಸುವುದೂ ಇದೇ ಕಾರಣಕ್ಕೆ.

ಈ ದೃಷ್ಟಿಯಿಂದ ಸ್ಫೋಟವನ್ನು ಹಲವು ಆಯಾಮಗಳಿಂದ ನೋಡಬೇಕಾಗುತ್ತದೆ. ಥಾಯ್ಲೆಂಡ್ನಲ್ಲಿ ಗಮನಾರ್ಹವಾಗಿ ಕಾಣಸಿಗುವ ಸಂಘರ್ಷಗಳು ರಾಜಕೀಯ ಸಂಘರ್ಷಗಳು ಮಾತ್ರ. ಅಷ್ಟೇ ಅಲ್ಲ, ಇಲ್ಲಿನ ಸಂಘರ್ಷಗಳಲ್ಲಿ, ದಂಗೆಗಳಲ್ಲಿ ಗುಂಡಿನ ಚಕಮಕಿ, ರಕ್ತಕ್ರಾಂತಿ ಆದ ನಿದರ್ಶನಗಳು ತೀರಾ ವಿರಳ.

ಇದಕ್ಕೆ ಕಾರಣ ಅರಿತುಕೊಳ್ಳಲು ನಾವು ಥಾಯ್ ಚರಿತ್ರೆಯನ್ನು ಕೊಂಚ ನೋಡಬೇಕಾಗುತ್ತದೆ. ದಕ್ಷಿಣ ಏಷ್ಯಾ ದೇಶಗಳ ಪೈಕಿ ವಸಾಹತು ಆಡಳಿತಕ್ಕೆ ಒಳಪಡದೆ ಸ್ವತಂತ್ರವಾಗಿ ಉಳಿದ ಏಕೈಕ ದೇಶ ಥಾಯ್ಲೆಂಡ್. ಹೀಗೆ ಥಾಯ್ಲೆಂಡ್ನ್ನು ಯುರೋಪಿಯನ್ ವಸಾಹತುಶಾಹಿಗಳಿಂದ ರಕ್ಷಿಸಿದ ಹಿರಿಮೆ 1851 ರಿಂದ 1910 ರವರೆಗೆ ಆಡಳಿತ ನಡೆಸಿದ ರಾಜ ಮೊಂಕುಟ್ (ರಾಮ 4) ಮತ್ತು ಆತನ ಮಗ ರಾಜ ಚುಲಾಲೊಂಕಾರ್ನ್ (ರಾಮ 5) ಅವರಿಗೆ ಸಲ್ಲುತ್ತದೆ.

ಇವರಿಬ್ಬರೂ ಆಧುನಿಕ ವಿಜ್ಞಾನ, ಶಿಕ್ಷಣ ವ್ಯವಸ್ಥೆ, ರಸ್ತೆ, ರೈಲು, ಮುದ್ರಣ ತಂತ್ರಜ್ಞಾನ, ಆಡಳಿತ ಸೇವೆಯ ಮೂಲಕ ಹೊಸ ಆಡಳಿತ ವ್ಯವಸ್ಥೆಯನ್ನು ಥಾಯ್ಲೆಂಡ್ಗೆ ಪರಿಚಯಿಸಿದರು. ಹಾಗಿದ್ದೂ ಆಡಳಿತಾತ್ಮಕವಾಗಿ ಥಾಯ್ಲೆಂಡ್ ಸಂಪೂರ್ಣ ರಾಜಪ್ರಭುತ್ವದ ಅಡಿಯಲ್ಲೇ ಇತ್ತು. ರಾಜನ ಕುರಿತು ಅಪಾರ ಗೌರವ ಮತ್ತು ರಾಜನನ್ನು ದೇವರಂತೆ ಪೂಜಿಸುವ ಸಂಸ್ಕೃತಿ ಥಾಯ್ ಸಮಾಜದಲ್ಲಿತ್ತು ಎಂಬುದನ್ನು ಇತಿಹಾಸಕಾರರು ದಾಖಲಿಸಿದ್ದಾರೆ. ಹಾಗಾಗಿ ಸ್ವಾತಂತ್ರ್ಯ ಸಂಗ್ರಾಮ, ಪರಕೀಯ ಆಡಳಿತದ ವಿರುದ್ಧ ಹೋರಾಟದಂತಹ ಸಂಘರ್ಷಗಳು ಥಾಯ್ ಚರಿತ್ರೆಯಲ್ಲಿಯೇ ಇಲ್ಲ.

1932ರಲ್ಲಿ ನಡೆದ ಸೇನೆ ಮತ್ತು ಆಡಳಿತ ಸೇವಾಧಿಕಾರಿಗಳು ನಡೆಸಿದ ದಂಗೆಯಿಂದ ಥಾಯ್ಲೆಂಡ್, ಸಾಂವಿಧಾನಿಕ ರಾಜಪ್ರಭುತ್ವವನ್ನು ಅಳವಡಿಸಿಕೊಂಡು ಪ್ರಜಾತಂತ್ರ ದೇಶವಾಯಿತು. ಈ ದಂಗೆ ಆಧುನಿಕ ಥಾಯ್ಲೆಂಡಿನ ಸುಮಾರು 700 ವರುಷಗಳ ಇತಿಹಾಸದಲ್ಲಿ ದಾಖಲಾಗಿರುವ ಮೊದಲ ಆಂತರಿಕ ಸಂಘರ್ಷ. ಈ ದಂಗೆಯ ಮೂಲಕಾರಣದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಪಾಶ್ಚಾತ್ಯ ಸಿದ್ಧಾಂತಗಳು ಹಾಗೂ ತತ್ವಗಳ ಪ್ರಭಾವ, ಚುಲಾಲೊಂಕಾರ್ನ್ ಉತ್ತರಾಧಿಕಾರಿಗಳು ಆತನಷ್ಟು ಶಕ್ತರಲ್ಲದೆ ಇದ್ದುದು ಇತ್ಯಾದಿ.

ಗಮನಿಸಬೇಕಾದ ಅಂಶವೆಂದರೆ ಪ್ರಜಾತಂತ್ರ ವ್ಯವಸ್ಥೆ ಇದ್ದಾಗ್ಯೂ ರಾಜನ ಕುರಿತಾದ ಗೌರವ ಕುಂದಿಲ್ಲ. ಸಂವಿಧಾನದಲ್ಲಿ ರಾಜನಿಗೆ ಬಹಳ ಗೌರವಯುತವಾದ ಸ್ಥಾನ ಇದೆ ಮತ್ತು ಕೆಲ ವಿಶೇಷ ಅಧಿಕಾರಗಳಿವೆ. ಇನ್ನೊಂದು ಮುಖ್ಯ ಅಂಶ ಈ ದಂಗೆಯೂ ರಕ್ತಕ್ರಾಂತಿಯ ದಂಗೆಯಾಗಿರಲಿಲ್ಲ.

ಪ್ರಸ್ತುತ ರಾಜ ಭೂಮಿಬೋಲ್ ಅದುಲ್ಯತೇಜ (ರಾಮ 9) ದೇಶದ ಪ್ರಗತಿಗೆ ತನ್ನದೇ ಕೊಡುಗೆ ಕೊಟ್ಟು ತನ್ನ ಸ್ಥಾನದ ಗೌರವವನ್ನು ಹೆಚ್ಚಿಸಿರುವ ಕಾರಣದಿಂದ ರಾಜನ ಬಗ್ಗೆ ಜನರಲ್ಲಿ ಇಂದಿಗೂ ಅಪಾರ ಗೌರವವಿದೆ. ಇದರ ದ್ಯೋತಕವಾಗಿಯೇ ಥಾಯ್ಲೆಂಡಿನ ಪ್ರತಿ ಕಡೆಯೂ ರಾಜನ ಭಾವಚಿತ್ರ ಕಂಗೊಳಿಸುತ್ತಿರುತ್ತದೆ. ರಾಜನನ್ನು ದೇವರೆಂಬಂತೆ ಆರಾಧಿಸುವವರೂ ಬಹಳಷ್ಟು ಮಂದಿ ಇದ್ದಾರೆ.

ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಮೂಲ ಸೌಕರ್ಯಗಳ ಅಭಿವೃದ್ಧಿ, ಸಮಾಜಿಕ ಆರೋಗ್ಯ ಹೀಗೆ ಹಲವಾರು ರಂಗಗಳ ಅಭಿವೃದ್ಧಿಗೆ ಸರ್ಕಾರೇತವಾಗಿ ರಾಜನ ವೈಯಕ್ತಿಕ ಯೋಜನೆಗಳು ಚಾಲ್ತಿಯಲ್ಲಿವೆ. ಇಲ್ಲಿಯತನಕ ಥಾಯ್ಲೆಂಡಿನಲ್ಲಿ ನಡೆದ ಹತ್ತಕ್ಕೂ ಅಧಿಕ ಸೇನಾ ದಂಗೆ ಹಾಗೂ ಮಿಲಿಟರಿ ಆಡಳಿತ ಹೇರಿಕೆಯ ಸಂದರ್ಭದಲ್ಲಿ ರಾಜಕೀಯ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಮತ್ತು ಸುಸ್ಥಿರಗೊಳಿಸುವಲ್ಲಿ ರಾಜ ಮಹತ್ತರ ಪಾತ್ರ ವಹಿಸಿದ್ದಾರೆ ಎನ್ನಲಾಗುತ್ತದೆ.

ಥಾಯ್ಲೆಂಡಿನ ಪ್ರಸಕ್ತ ರಾಜಕೀಯ ಬಿಕ್ಕಟ್ಟಿನ ಮೂಲ, ಹಿಂದಿನ ಪ್ರಧಾನಿ ತಕ್ಸಿನ್ ಶಿನವಾತ್ರ ಆಡಳಿತಾವಧಿಯಲ್ಲಿ ಪ್ರಾರಂಭವಾಗುತ್ತದೆ. 2001ರಲ್ಲಿ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ತಕ್ಸಿನ್ ಹಲವಾರು ಜನಪ್ರಿಯ ಯೋಜನೆಗಳಿಂದ ಜನರ ಮೆಚ್ಚುಗೆ ಗಳಿಸುತ್ತಾರೆ. ಥಾಯ್ಲೆಂಡ್ ಚರಿತ್ರೆಯಲ್ಲೇ ಪೂರ್ಣಾವಧಿ ಅಧಿಕಾರದಲ್ಲಿದ್ದ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆ ತಕ್ಸಿನ್ ಅವರದು.

ತಕ್ಸಿನ್ ಅಧಿಕಾರಾವಧಿಯಲ್ಲಿ ಥಾಯ್ ಆರ್ಥಿಕತೆಯಲ್ಲಿ ತುಂಬಾ ಚೇತರಿಕೆ ಆಗುತ್ತದೆ. 2005ರ ಮರುಚುನಾವಣೆಯಲ್ಲಿ ಥಾಯ್ಲೆಂಡ್ ಚರಿತ್ರೆಯಲ್ಲೇ ಅತೀ ಹೆಚ್ಚು ಜನ ಮತ ಚಲಾಯಿಸಿ ತಕ್ಸಿನ್ರನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ. ಆದರೆ ಖ್ಯಾತಿಯ ಜೊತೆಜೊತೆಗೆ ತಕ್ಸಿನ್ ಮೇಲೆ ಭ್ರಷ್ಟಾಚಾರ ಹಾಗೂ ರಾಜನಿಗೆ ಅವಮಾನ ಮಾಡಿದ ಆರೋಪ ಕೂಡಾ ಕೇಳಿಬರುತ್ತದೆ. ತಕ್ಸಿನ್ ವಿರೋಧಿಗಳ ಪ್ರತಿಭಟನೆ ಹೆಚ್ಚಿದಂತೆ 2006ರ ಸೆಪ್ಟೆಂಬರ್ನಲ್ಲಿ ಸೇನಾ ದಂಗೆಯ ಮೂಲಕ ಮಿಲಿಟರಿ ಆಡಳಿತ ಹೇರಲಾಗುತ್ತದೆ.

ಮುಂದಿನ ವರುಷಗಳಲ್ಲಿ ನಡೆದ ಹಲವಾರು ರಾಜಕೀಯ ಬೆಳವಣಿಗೆಗಳ ಮಧ್ಯೆ ತಕ್ಸಿನ್ ಥಾಯ್ಲೆಂಡಿನಿಂದ ಪಲಾಯನ ಮಾಡುತ್ತಾರೆ. 2011ರ ಚುನಾವಣೆಯಲ್ಲಿ ತಕ್ಸಿನ್ ಬೆಂಬಲವಿದ್ದ ಫಿಯು ಥಾಯ್ ಪಾರ್ಟಿ ಬಹುಮತ ಗಳಿಸಿ ತಕ್ಸಿನ್ ಸಹೋದರಿ ಇಂಗ್ಲಕ್ ಥಾಯ್ಲೆಂಡಿನ ಮೊದಲ ಮಹಿಳಾ ಪ್ರಧಾನಮಂತ್ರಿ ಆಗುತ್ತಾರೆ.

ದೇಶದ ಹೊರಗಿದ್ದುಕೊಂಡು ತಂಗಿಯನ್ನು ನಿಯಂತ್ರಿಸುತ್ತಾ ಥಾಯ್ ರಾಜಕೀಯವನ್ನು ತಕ್ಸಿನ್ ನಿಯಂತ್ರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತದೆ. 2014ರ ಮೇ ತಿಂಗಳಲ್ಲಿ ಇಂಗ್ಲಕ್ರನ್ನು ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪದಡಿ ಅಧಿಕಾರದಿಂದ ಇಳಿಸಿ ಸೇನಾನಾಯಕ ಪ್ರಯುತ್ ಮಿಲಿಟರಿ ಆಡಳಿತ ಹೇರುತ್ತಾರೆ.

‘ದೇಶದ ಆಡಳಿತ ವ್ಯವಸ್ಥೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿ ಮತ್ತೆ ಚುನಾವಣೆಗೆ ಅನುವು ಮಾಡಿಕೊಡುತ್ತೇನೆ’ ಎಂಬುದು ಪ್ರಯುತ್ ವಾಗ್ದಾನ. ಭ್ರಷ್ಟಾಚಾರದ ವಿರೋಧಿ ಕಾನೂನನ್ನು ಬಲಗೊಳಿಸಿದ್ದಲ್ಲದೆ ಹಲವಾರು ಹೊಸ ಸುಧಾರಣಾ ನಿಯಮಗಳನ್ನು ಪ್ರಯುತ್ ಆಡಳಿತ ಅನುಷ್ಠಾನಕ್ಕೆ ತರುತ್ತಿದೆ ಎಂಬುದು ಸಾಮಾನ್ಯ ಜನರಲ್ಲಿ ಬಹುತೇಕರ ಅಭಿಪ್ರಾಯ. ಆಡಳಿತದಲ್ಲಿ ಸುಧಾರಣೆಯಾಗಿದೆ, ಭ್ರಷ್ಟಾಚಾರ ಕಡಿಮೆಯಾಗಿದೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಸುಗಮವಾಗಿ ಸಾಗುತ್ತಿದೆ ಎಂಬುದು ವ್ಯಾವಹಾರಿಕ ವಲಯದಲ್ಲಿ ಜನರಾಡಿಕೊಳ್ಳುತ್ತಿರುವ ಮಾತು.

ಈ ದೃಷ್ಟಿಯಿಂದ ಹಲವರಲ್ಲಿ ಪ್ರಯುತ್ ಆಡಳಿತದ ಬಗ್ಗೆ ಸಮಾಧಾನ ಇದೆ. ಆದರೆ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಆದಷ್ಟು ಬೇಗ ಜಾರಿ ಮಾಡಬೇಕು ಎಂಬ ಬೇಡಿಕೆ ಕೂಡಾ ಕೆಲವೆಡೆ ಕೇಳಿ ಬರುತ್ತಿದೆ. ವ್ಯವಸ್ಥೆಯಲ್ಲಿ ತುಂಬಿರುವ ಭ್ರಷ್ಟತೆಯನ್ನು ಹೋಗಲಾಡಿಸಿ ಆಡಳಿತ ವ್ಯವಸ್ಥೆಯನ್ನು ಪೂರ್ಣ ಸುಧಾರಣೆ ಮಾಡಲು ಇನ್ನೂ ಬಹಳ ಕಾಲಾವಕಾಶ ಬೇಕು, ಅಲ್ಲಿಯತನಕ ಕಾಯುವುದೇ ಲೇಸು ಎಂಬುದು ಪ್ರಯುತ್ ಬೆಂಬಲಿಗರ ವಾದ. ಒಬ್ಬ ಸಾಮಾನ್ಯ ಪ್ರಜೆಯ ದೃಷ್ಟಿಯಿಂದ ಹೇಳುವುದಾದರೆ ಮಿಲಿಟರಿ ಆಡಳಿತವಿರುವ ಸೇನಾ ನಿಯಂತ್ರಿತ ಉಸಿರುಗಟ್ಟಿಸುವ ವಾತಾವರಣ ಎಲ್ಲೂ ಕಾಣಿಸುವುದಿಲ್ಲ. ಸಾಮಾನ್ಯರ ಜನಜೀವನದಲ್ಲಿ ಏನೂ ತೊಂದರೆ ಆಗಿಲ್ಲ.

ಇನ್ನು ಥಾಯ್ಲೆಂಡಿನ ದಕ್ಷಿಣ ಭಾಗದಲ್ಲಿ ಹಲವು ವರುಷಗಳಿಂದ ನಡೆಯುತ್ತಿರುವ ಇನ್ನೊಂದು ಸಂಘರ್ಷ ಮುಸ್ಲಿಮ್ ಪ್ರತ್ಯೇಕತಾವಾದಿಗಳ ಕೂಗು. ಥಾಯ್ಲೆಂಡಿನಲ್ಲಿ ಶೇ 95ರಷ್ಟು ಬೌದ್ಧಮತ ಅನುಯಾಯಿಗಳಿದ್ದಾರೆ. ದಕ್ಷಿಣದ ಮಲೇಷ್ಯಾ ಗಡಿಪ್ರದೇಶದಲ್ಲಿನ ಮೂರು ಪ್ರಾಂತ್ಯಗಳಲ್ಲಿ ಮಾತ್ರ ಮುಸ್ಲಿಮ್ ಜನಸಂಖ್ಯೆ ಹೆಚ್ಚಿದೆ. ಈ ಭಾಗದಲ್ಲಿ ಪ್ರತ್ಯೇಕತೆಯ ಕೂಗು ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ರಾಜಾಡಳಿತವಿದ್ದಾಗ ಈ ಪ್ರಾಂತ್ಯಗಳ ಆಡಳಿತವನ್ನು ಸ್ಥಳೀಯ ಮುಸ್ಲಿಮ್ ನಾಯಕರು ನೋಡಿಕೊಳ್ಳುತ್ತಿದ್ದರು.

ಸಾಂವಿಧಾನಿಕ ಆಡಳಿತ ಪ್ರಾರಂಭವಾದ ಮೇಲೆ ಸ್ಥಳೀಯ ಜಾವಿ ಭಾಷೆಯ ಬದಲು ಥಾಯ್ ಭಾಷೆಯನ್ನು ಹೇರಲಾಗುತ್ತಿದೆ, ಸ್ಥಳೀಯ ಸಂಸ್ಕೃತಿಯ ಬದಲು ಬೌದ್ಧ ಸಂಸ್ಕೃತಿಯನ್ನು ಹೇರಲಾಗುತ್ತಿದೆ ಎಂಬ ಕೂಗು ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಸ್ವಾಯತ್ತತೆಗಾಗಿ ಬಂಡಾಯ, ಪ್ರತಿಭಟನೆಗಳು ನಡೆಯುತ್ತಿವೆ. ನಿರಂತರವಾಗಿ ವರುಷಗಳಿಂದ ನಡೆಯುತ್ತಿರುವ ಈ ಪ್ರತಿಭಟನೆಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಆ ಪ್ರತಿಭಟನೆಗಳು ದಕ್ಷಿಣ ಪ್ರಾಂತ್ಯಗಳಲ್ಲಿ ನಡೆದಿವೆಯೇ ಹೊರತು ಬ್ಯಾಂಕಾಕ್ನಲ್ಲಿ ನಡೆದಿಲ್ಲ.

ಇತ್ತೀಚೆಗೆ ಹೊಗೆಯಾಡಿದ ಇನ್ನೊಂದು ಸಮಸ್ಯೆ ಉಯ್ಗುರ್ ನಿರಾಶ್ರಿತರದ್ದು. ಹಲವಾರು ಅಂತರರಾಷ್ಟ್ರೀಯ ಒತ್ತಡಗಳ ಹೊರತಾಗಿಯೂ ಥಾಯ್ ಸರ್ಕಾರ ಸುಮಾರು ನೂರಕ್ಕೂ ಹೆಚ್ಚು ಉಯ್ಗುರ್ ನಿರಾಶ್ರಿತರನ್ನು ಚೀನಾಕ್ಕೆ ತಿರುಗಿ ಕಳುಹಿಸಿತು. ಥಾಯ್ ಆಡಳಿತವು ಚೀನಾ ಹಾಗೂ ಟರ್ಕಿಯ ಜೊತೆ ಮಾತುಕತೆ ನಡೆಸಿರುವುದಾಗಿಯೂ ಆ ಮಾತುಕತೆಗಳ ಹಿನ್ನೆಲೆಯಲ್ಲೇ ಅವರನ್ನು ಚೀನಾಕ್ಕೆ ತಿರುಗಿ ಕಳುಹಿಸಿದ್ದೆಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ಆದರೆ ಇದನ್ನು ಟರ್ಕಿಯಲ್ಲಿನ ಉಯ್ಗುರ್ ಹೋರಾಟಗಾರರು ಹಾಗೂ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಖಂಡಿಸಿವೆ. ಇತ್ತೀಚೆಗೆ ಇಸ್ತಾಂಬುಲ್ನಲ್ಲಿ ಥಾಯ್ ರಾಯಭಾರಿ ಕಚೇರಿಯ ಮೇಲೆ ಇದೇ ವಿಷಯದಲ್ಲಿ ದಾಳಿಯೂ ನಡೆಯಿತು. ಉಯ್ಗುರ್ ನಿರಾಶ್ರಿತರ ವಿಷಯದಲ್ಲಿ ಥಾಯ್ ಆಡಳಿತ ನಡೆದುಕೊಂಡ ರೀತಿಯ ಕುರಿತು ಹೊರದೇಶಗಳಲ್ಲಿ ಅಸಮಾಧಾನದ ಹೊಗೆಯಾಡಿತು.

ಪ್ರಸಿದ್ಧ ಪ್ರವಾಸಿ ಸ್ಥಳದಲ್ಲಿ ನಡೆದ ಬಾಂಬ್ ದಾಳಿಯನ್ನು ಥಾಯ್ ಆಡಳಿತ, ಆರ್ಥಿಕತೆಗೆ ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆ ತರಲು ಮಾಡಿದ ಹೀನ ಕೃತ್ಯ ಎಂದು ಹೇಳಿದೆ. ಥಾಯ್ ಜಿಡಿಪಿಯಲ್ಲಿ ಪ್ರವಾಸೋದ್ಯಮದ ದೊಡ್ಡ ಕೊಡುಗೆಯಿದೆ. ಪ್ರವಾಸೋದ್ಯಮ ನೇರವಾಗಿ ಶೇ 9ರಷ್ಟು ಮತ್ತು ಒಟ್ಟಾರೆಯಾಗಿ ಸುಮಾರು ಶೇ 20ರಷ್ಟು ಜಿಡಿಪಿಗೆ ಕೊಡುಗೆ ನೀಡುತ್ತದೆ.

ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಹಲವಾರು ದೇಶಗಳು ತಮ್ಮ ಪ್ರಜೆಗಳಿಗೆ ಥಾಯ್ಲೆಂಡ್ ಪ್ರವಾಸದ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕರೆ ನೀಡಿವೆ. ಪ್ರವಾಸಿಗರನ್ನು ಗುರಿಯಾಗಿಸಿ ಸ್ಫೋಟ ನಡೆಸಿದ್ದನ್ನು ಗಮನಿಸಿದರೆ ಪ್ರವಾಸೋದ್ಯಮ ತನ್ಮೂಲಕ ಥಾಯ್ಲೆಂಡ್ ಆರ್ಥಿಕತೆಯೇ ಈ ದಾಳಿಯ ನೇರ ಗುರಿ ಎಂಬಂತೆ ತೋರುತ್ತದೆ.

ಮೆಚ್ಚಬೇಕಾದ ಅಂಶವೆಂದರೆ ಸ್ಫೋಟದ ನಂತರ ಸ್ಥಳದಲ್ಲಿ ಸ್ವಯಂಸೇವಕರು ತುಂಬಿದರು. ಕೆಲ ಟ್ಯಾಕ್ಸಿಗಳು ಜನರಿಗೆ ಉಚಿತ ಸೇವೆ ಒದಗಿಸಿದವು. ರಕ್ತದಾನ ಮಾಡಲು ದಾನಿಗಳು ಸರತಿ ಸಾಲು ನಿಂತರು. ಒಂದೇ ದಿನದಲ್ಲಿ ಘಟನಾ ಸ್ಥಳವನ್ನು ಸ್ವಚ್ಛವಾಗಿಸಿದರು. ಸಾರ್ವಜನಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಭದ್ರತೆ ಹೆಚ್ಚಿದೆ. ಎರವಾನ್ ದೇವಾಲಯ ಪ್ರವಾಸಿಗರಿಗೆ ಮತ್ತೆ ತೆರೆದುಕೊಂಡಿದೆ!

(ಲೇಖಕ ಬ್ಯಾಂಕಾಕ್ನಲ್ಲಿ ಬಾಷ್ ಕಂಪೆನಿ ಉದ್ಯೋಗಿ)
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.