‘ಇನ್ಮುಂದೆ ಈ ರಾಜಕಾರಣಿಗಳು, ಸಿನಿಮಾ ಮಂದಿ ಜತಿ ಫೋಟೊ ಹೊಡೆಸ್ಕಾಬಾರ್ದು ಕಣ್ರಲೆ...’ ಎಂದ ಗುಡ್ಡೆ.

‘ಯಾಕೆ?’ ದುಬ್ಬೀರ ಕೇಳಿದ.

‘ಅವ್ರು ಏನೇನೋ ಭ್ರಷ್ಟಾಚಾರ, ಭಾನಗಡಿ ಮಾಡಿರ್ತಾರೆ, ಅವರ ಜತಿ ಫೋಟೊದಲ್ಲಿ ನಾವಿದ್ರೆ, ಈ ಪಕ್ಕದಲ್ಲಿರೋನು ಯಾರು, ಎಲ್ಲದಾನೆ, ಏನು ವ್ಯವಹಾರ ಅವುಂದು, ಅವ್ನಿಗೂ ಇವ್ನಿಗೂ ಏನ್ ಸಂಬಂಧ? ನೋಟಿಸ್ ಕೊಡ್ರಿ, ಎಳ್ಕಂಡ್ ಬರ್ರಿ ಅಂತಾರೆ. ಯಾವನಿಗೆ ಬೇಕು ಆ ತೆಲಿನೋವು’.

‘ಅಷ್ಟೇ ಅಲ್ಲಲೆ, ನಾವು ಈ ಸನ್ಮಾನ, ಪ್ರಶಸ್ತಿ ತಗಾಬೇಕಾದ್ರೆ ಕೊಡೋವ್ರು ಯಾರು ಅಂತನೂ ಯೋಚನಿ ಮಾಡಿ ತಗಾಬೇಕು. ನಮಿಗೆ ಪ್ರಶಸ್ತಿ ಕೊಟ್ಟೋನು ಮುಂದೆ ರೊಕ್ಕ ಹೊಡೆದೋ ಕೊಲೆ ಮಾಡಿನೋ ಜೈಲಿಗೆ ಹೋದ್ರೆ ಅವನು ಪ್ರಶಸ್ತಿ ಕೊಟ್ಟ ಫೋಟೊನ ನಮ್ಮನಿ ಗೋಡೆ ಮ್ಯಾಲ ಹೆಂಗೆ ಹಾಕ್ಕೊಳ್ಳೋದು?’ ತೆಪರೇಸಿ ಪಾಯಿಂಟ್.

‘ಕರೆಕ್ಟ್, ಅದು ನಿಂಗೆ ಪ್ರಶಸ್ತಿ ಬಂದಾಗ ನೋಡಾಣ, ಈಗ ಅಂಬಾನಿ ಮಗನ ಮದುವಿಗೆ ಐದು ಸಾವಿರ ಕೋಟಿ ಖರ್ಚಾತಂತೆ. ನಿಂದೂ ಪಮ್ಮಿ ಮದುವಿ ಹೆಂಗಾಗಿತ್ತೋ ತೆಪರ?’ ಮಂಜಮ್ಮ ಕೇಳಿದಳು.

‘ನಂದಾ? ಸರ್ಜರಿ ಅಂಡ್ ಭರ್ಜರಿ ಮದುವಿ, ಇಡೀ ಊರಿಗೆ ಊರೇ ನಿಂತು ನೋಡಿತ್ತು. ಪೊಲೀಸ್ರು, ಪೇಪರ್ನೋರು ಎಲ್ಲ ಬಂದಿದ್ರು’.

‘ಹೌದಾ? ಅದೆಂಥ ಮದುವಿನೋ ಅದು?’

‘ಅದ್ನ ನಾ ಹೇಳ್ತೀನಿ. ಹತ್ತು ವರ್ಷದ ಹಿಂದೆ ವ್ಯಾಲೆಂಟೈನ್ಸ್ ಡೇ ದಿನ ಈ ತೆಪರ ಬಸ್ಸ್ಟಾಪ್ನಾಗೆ ನಿಂತಿದ್ನಂತೆ. ಯಾವುದೋ ಹುಡುಗಿ ಇವನನ್ನ ಟೈಮೆಷ್ಟು ಅಂತ ಕೇಳ್ತಂತೆ. ಅಷ್ಟಕ್ಕೇ ಅದ್ಯಾರೋ ಸೇನೆಯವರಂತೆ, ಇವ್ರನ್ನ ಪ್ರೇಮಿಗಳು ಅನ್ಕಂಡು ಗಪ್ಪಂತ ಹಿಡಿದು, ಪಟ್ ಅಂತ ಅಲ್ಲೇ ತಾಳಿ ಕಟ್ಟಿಸೇಬಿಟ್ರಂತೆ...’ ಗುಡ್ಡೆ ಕಿಸಕ್ಕೆಂದ.

‘ಅಲೆ ಇವ್ನ, ಹೌದಾ? ಹಂಗಾರೆ ನಯಾಪೈಸೆ ಖರ್ಚಿಲ್ಲ?’

‘ಯಾಕಿಲ್ಲ? ಐವತ್ತು ಕೋಟಿ ಖರ್ಚಾತು’.

‘ಐವತ್ತು ಕೋಟಿನಾ?’

‘ಆರು ಸೊನ್ನಿ ಕಮ್ಮಿ!’ ಗುಡ್ಡೆ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು.

ಚುರುಮುರಿ: ಭರ್ಜರಿ ಮದುವೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.