ಹೊಸ ಸೀರೆಯ ರವಿಕೆಯನ್ನು ಟೈಲರ್ ಚೆನ್ನಾಗಿ ಹೊಲಿದಿಲ್ಲ ಅಂತ ಸುಮಿ ಅಪ್ಸೆಟ್ ಆಗಿದ್ದಳು. ಹೀಗಾಗಿ ಈ ಹಬ್ಬ ಇವಳಿಗೆ ಸಡಗರ ತಂದಿಲ್ಲ.

‘ಡಾಕ್ಟರ್ಗಳು ಆಪರೇಷನ್ ಮಾಡಿ ಸ್ಟಿಚ್ ಹಾಕುವಷ್ಟು ಸುಲಭವಲ್ಲ ಬ್ಲೌಸ್ ಸ್ಟಿಚ್ ಮಾಡಿ ಟೈಲರ್ಗಳು ಹೆಂಗಸರಿಂದ ಭೇಷ್ ಅನ್ನಿಸಿ
ಕೊಳ್ಳುವುದು’ ಶಂಕ್ರಿ ಸಮಾಧಾನ ಹೇಳಿದ.

ಸುಮಿಗೆ ಸಮಾಧಾನ ಆಗಲಿಲ್ಲ. ‘ಹಾಗಲ್ಲಾರೀ, ತೋಳು ಲೂಸು, ಕಂಕುಳು ಟೈಟು, ನೆಕ್ ನೆಟ್ಟಗಿಲ್ಲ, ಬ್ಯಾಕ್ ಡೀಪ್ ಕಮ್ಮಿ ಮಾಡಿ ಹೊಲಿದಿದ್ದಾನೆ ಟೈಲರ್’ ಎಂದಳು.

‘ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ ಸೀರೆ ರೇಟಿಗಿಂತ ಡಬ್ಬಲ್ ದುಡ್ಡು ಕೊಟ್ಟು ಓವರ್ ಡಿಸೈನ್ ಬ್ಲೌಸ್ ಹೊಲಿಸಬೇಕಾ? ಸೆರಗಿನಲ್ಲಿ ಮುಚ್ಚಿಕೊಳ್ಳುವ ರವಿಕೆಗೆ ಕಲೆ, ಕಸೂತಿ ಅಲಂಕಾರದ ಅಗತ್ಯವಿದೆಯೇ?’

‘ಗಂಡಸರಿಗೇನು ಗೊತ್ತು ಗೌರಿ ದುಃಖ? ಉಟ್ಟುಕೊಳ್ಳುವ ಸೀರೆಗಿಂತ ತೊಟ್ಟುಕೊಳ್ಳುವ ಬ್ಲೌಸಿನ ಡಿಸೈನ್ ಮುಖ್ಯ. ನೀವು ಗಂಡಸರು ಹೊಲಿಸುವ ಶರ್ಟ್, ಪ್ಯಾಂಟಿನಲ್ಲಿ ಒಂದು ತೋಳು ದೊಡ್ಡದು, ಇನ್ನೊಂದು ಚಿಕ್ಕದಾಗಿದ್ರೂ ತೆಪ್ಪಗೆ ಹಾಕಿಕೊಳ್ತೀರಿ, ನಾವು ಹಾಗಲ್ಲಾರೀ...’

‘ಹೆಂಗಸರಿಗೆ ಸಮಾಧಾನವಾಗುವಂತಹ ರವಿಕೆ ಹೊಲಿಯುವ ಟೈಲರ್ ಹುಟ್ಟಿಲ್ಲಬಿಡು...’

‘ನನಗೂ ಹಾಗೇ ಅನ್ನಿಸುತ್ತೇರೀ... ನನ್ನ ಹೊಸ ಸೀರೆ ನೋಡುವ ನೆಪದಲ್ಲಿ ಬಂದ ಪಕ್ಕದ ಮನೆಯವಳು ಸೀರೆ ಚೆನ್ನಾಗಿದೆ, ಅದಕ್ಕೆ ತಕ್ಕಂತೆ ಬ್ಲೌಸಿನ ಸ್ಟಿಚ್ಚಿಂಗ್ ಸರಿಯಿಲ್ಲ ಎಂದುಬಿಟ್ಟಳು. ಇದಕ್ಕಿಂತ ಅವಮಾನ ಬೇಕೇನ್ರೀ?’ ಸುಮಿಗೆ ಸಂಕಟ.

‘ಅವಳು ಹಾಗೇಬಿಡು, ಯಾವುದನ್ನೂ ಸಹಿಸುವುದಿಲ್ಲ, ನೀನು ಒಳ್ಳೆ ಸೀರೆ ತಗೊಂಡಿದ್ದಕ್ಕೆ ಅಸೂಯೆಪಟ್ಟಿದ್ದಾಳೆ’.

‘ಅದೇನೇ ಆಗ್ಲಿರೀ, ಬ್ಲೌಸ್ನ ಸ್ಟಿಚ್ಚಿಂಗ್ ನನಗಂತೂ ಸಮಾಧಾನ ಆಗಿಲ್ಲ. ಹಬ್ಬಕ್ಕೆ ನಾನು ಆ ಬ್ಲೌಸ್ ತೊಟ್ಟು ಹೊಸ ಸೀರೆ ಉಟ್ಟುಕೊಳ್ಳು ವುದಿಲ್ಲ, ಹೊಸ ನೈಟಿ ಧರಿಸಿ ಹಬ್ಬ ಮಾಡಿ ಮುಗಿಸ್ತೀನಿ...’ ಸುಮಿ ಕಠಿಣ ನಿರ್ಧಾರ ಪ್ರಕಟಿಸಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.