‘ಈ ಮೊಬಿಲ್ ಪೋನ್ನ ಅದ್ಯಾವ ಮಂಗ್ಯಾ ನನ್ಮಗ ಕಂಡ್ಹಿಡುದ್ನೋ? ಅದ್ಯಂತದೋ ಗೊಡ್ ಪೋನಂತೆ! ಅದುನ್ನ ಕಿವಿಮ್ಯಾಗ್ ಇಳೆ ಬಿಟ್ಕ್ಯಂದ್ ಕುಂತ್ಬಿಟ್ರೆ ಮುಗೀತ್. ಲೋಕಕ್ಕ್ ಪ್ರಳಯಾದ್ರೂ ಗೊತ್ತಾಗದುಲ್ಲ’ ದ್ಯಾಮವ್ವ ಗೊಣಗುತ್ತಿದ್ದಳು.

ಆಗ ಮೊಮ್ಮಗ ಸಾಫ್ಟ್ವೇರ್ ಮಂಜ, ‘ಅಜ್ಜಿ ಅದು ಗೊಡ್ಪೋನಲ್ಲ, ಹೆಡ್ಫೋನ್’ ಎಂದ.

‘ಯೆಡ್ಡೋ ಗೊಡ್ಡೋ! ಅಕಿ ನಿಮ್ಮವ್ವದಾಳಲ್ಲ, ನಿನ್ನಿ ಸ್ಟೌ ಮ್ಯಾಗ್ ಹಾಲಿಟ್ಟು ಜುಂಜುಂ ಕಾಲ್ನ್ಯಾಗೆ ಕಳದೋದ್ಲು. ಅನ್ಯಾಯವಾಗಿ ಎಲ್ಡ್ ಲೀಟ್ರು ಆಲು ಉಕ್ಕಿಚಲ್ಲಿ ಕರಕಲಾಗೋಯ್ತು, ವಟ್ಟಿ ಉರಿಯದುಲ್ವಾ?!’

‘ಅಮ್ಮ ಝೂಂಕಾಲ್ ಅಟೆಂಡ್ ಮಾಡಕ್ಕ್ ಶುರು ಮಾಡಿದ್ಮೇಲೆ ಒಳ್ಳೆದೇ ಆಗಿದೆ ಅಜ್ಜಿ. ನೀನೆಷ್ಟೇ ಅವ್ಳ್ ಮೇಲೆ ಗೊಣಗಿದರೂ ಅವ್ಳಿಗೆ ಗೊತ್ತಾಗಲ್ಲ. ಸೋ, ಬೇಜಾರಾಗ್ಬೇಡ’.

‘ಬ್ಯಾಜಾರಾಗ್ಬ್ಯಾಡಂದ್ರೆ ಯೆಂಗಪ್ಪ? ನಿಮ್ಮಪ್ಪ ನೋಡಿದ್ರೆ ಮೂರೊತ್ತು ಗಬಿನಾರಂತ ಗಬ್ ನಾರ್ತಾ ಇರ್ತಾನೆ. ಮೊನ್ನಿ ಗೀಜರ್ ಅಚ್ಬಿಟ್ಟು ಮಧ್ಯಾನ್ಮಟ ಮಬಿಲ್ಮ್ಯಾಗೆ ಬಳ್ಳ್ ಉಜ್ಕ್ಯತ ಮೈಮರೆತ. ಗೀಜರ್ರೇ ಕೆಟ್ಟೋಯ್ತು’.

‘ಹೋಗಲಿ ಬಿಡಜ್ಜಿ, ಅದು ಹಳೆ ಎಲೆಕ್ಟ್ರಿಕ್ ಗೀಜರ್. ಈ ಕೊರೊನಾ ಬಂತಲ್ಲ, ಆವಾಗಿಂದ ಆಫೀಸ್ ಕೆಲ್ಸ, ಅಟೆಂಡೆನ್ಸ್ ಪಂಚಿಂಗು, ರಿವ್ಯೂ ಮೀಟಿಂಗು, ಝೂಂಕಾಲ್, ವೆಬಿನಾರ್ ಎಲ್ಲನೂ ಅಪ್ಪ– ಅಮ್ಮ ಮೊಬೈಲ್ನಾಗೇ ಮಾಡೋದು ಅನಿವಾರ್ಯವಾಯ್ತು ನೋಡು’.

‘ಹೌದು ಬಿಡಪ್ಪ, ಇಪ್ಪಟ್ಟ್ ಊಟ-ತಿಂಡಿನೂ ಮಬಿಲ್ನ್ಯಾಗೇ ಮಾಡ್ಲಿಕ್ಕೇಳ್ ನಿಮ್ಮಪ್ಪ ಅವ್ವಗೆ. ಒಂದೇ ಮನಿಯಾಗಿದ್ರೂ ವಬ್ರಿಗೊಬ್ರು ಮಾತಾಡ್ಸದಿಕ್ಕೆ ಪುರಸೊತ್ತುಲ್ಲ. ಒಂದ್ ಹರಿಕಥಿಲ್ಲ, ಸಿವ್ಕಥಿಲ್ಲ. ಮೂರೊತ್ತು ಮಬಿಲ್ನ್ಯಾಗ್ ಮಕ ಇಳೆಬಿಟ್ಕ್ಯಂದ್ ಕುಂತ್ರೆ ತಿಂದನ್ನ ಅರಗ್ತದಾ? ಎಪ್ಪತ್ತ್ ವರ್ಸದಕಿ ನಾನು, ಅಡುಗಿ ಮುಸುರಿ ಅಂತ ಕತ್ತಿಚಾಕ್ರಿ ಮಾಡ್ಕ್ಯಂಡದನಿ. ನನ್ನ್ ಕುಟೆ ಯಾರಾದ್ರೂ ಮಾತಾಡ್ತರಾ? ಇಪ್ಪಟ್ಟ್ ನಾನ್-ನೀನ್ ಚೌಕಬಾರನಾದ್ರೂ ಆಡನ ಬಾ’.

‘ಸ್ಸಾರಿ ಅಜ್ಜಿ, ನನಗೀಗ ಕಾನ್ಕಾಲ್ ಇದೆ’.

‘ಬ್ಯಾನ್ಕಾಲ್ ಬಡಿವಾರನಾ? ಆತೇಳಪ್ಪ, ನೀನೂ ಇಪ್ಪಟ್ಟ್ ಕಿವ್ಯಾಗಿಳೆಬಿಟ್ಕ್ಯ’ ಅಂದ ದ್ಯಾಮವ್ವ ಮತ್ತೆ ಗೊಣಗಿಕೊಳ್ಳತೊಡಗಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.