ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನಕುರಳಿ| ಇ.ಡಿ. ಏಟು

Last Updated 19 ಜೂನ್ 2022, 19:30 IST
ಅಕ್ಷರ ಗಾತ್ರ

‘ಶಾಂತಿ ಸುವ್ಯವಸ್ಥೆ ಕಾಪಾಡಲು ಇನ್ಮೇಲೆ ಪೊಲೀಸರ ಜೊತೆಗೆ ಬುಲ್ಡೋಜರ್ ಬಳಸುವ ವ್ಯವಸ್ಥೆ ಬರಬಹುದು ಅಲ್ವೇನ್ರೀ?’ ಕೇಳಿದಳು ಸುಮಿ.

‘ಬರಬಹುದು. ಲಾಠಿ ಏಟು, ಟಿಯರ್ ಗ್ಯಾಸ್, ಜಲಫಿರಂಗಿ, ಗಾಳಿಯಲ್ಲಿ ಗುಂಡು ವಿಫಲವಾದಾಗ ಬುಲ್ಡೋಜರ್ ಭಯ ತೋರಿಸಿ ಪ್ರತಿಭಟನೆ ಹತ್ತಿಕ್ಕಬಹುದು’ ಅಂದ ಶಂಕ್ರಿ.

‘ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ವ್ಯಾನ್ ಜೊತೆ ಒಂದು ಬುಲ್ಡೋಜರ್ ನಿಲ್ಲಿಸಿದರೆ ಹೋರಾಟಗಾರರು ಹೆದರಿ ಶಾಂತಿಯುತ ಹೋರಾಟ ಮಾಡ್ತಾರೇನೋ’.

‘ಮಾಡಬಹುದು, ಪರಿಸ್ಥಿತಿ ನಿಯಂತ್ರಿಸು ವಲ್ಲಿ ಒಂದು ಪೊಲೀಸ್ ಠಾಣೆ ಸಿಬ್ಬಂದಿ ಮಾಡುವ ಕೆಲಸವನ್ನು ಒಂದೇ ಬುಲ್ಡೋಜರ್ ಮಾಡಬಹುದು’.

‘ಇ.ಡಿ. ಏಟಿನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತಡೆಗೆ ಬುಲ್ಡೋಜರ್ ಭೀತಿ ಬಳಸಬಹುದಲ್ವಾ?’

‘ಇಲ್ಲ, ಇದು ಬುಲ್ಡೋಜರ್‌ಗೆ ಬಗ್ಗುವ ಹೋರಾಟವಲ್ಲ. ಸರ್ವ ರೋಗಕ್ಕೂ ಸಾರಾಯಿ ಮದ್ದಲ್ಲ, ಹೊಸ ರೋಗಕ್ಕೆ ಹೊಸ ಮದ್ದು ಹುಡುಕಬೇಕು’.

‘ಬುಲ್ಡೋಜರ್‌ಗಿಂತ ಬಲವಾದ ಅಸ್ತ್ರ ಇನ್ಯಾವುದಿದೆ?’

‘ಕೋವಿಡ್ ಅಸ್ತ್ರ ಇದೆ. ಕೋವಿಡ್ ಹೆಚ್ಚಳವಾದರೆ ಹೋರಾಟಗಾರರೇ ಹೊಣೆ ಅಂತ ಹೆಲ್ತ್ ಮಂತ್ರಿ ಹೇಳಿದ್ದಾರೆ’.

‘ಕೋವಿಡ್ ಬೆದರಿಕೆಗೆ ಹೋರಾಟಗಾರರು ಹೆದರ್ತಾರಾ? ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಹೋರಾಟ ಮಾಡ್ತೀವಿ ಅನ್ನಬಹುದು’.

‘ಅಂದೇ ಅನ್ತಾರೆ. ಇವರು ಇ.ಡಿ. ಏಟು ಕೊಟ್ಟರೆ ಅವರು ಪ್ರತಿಭಟನೆಯ ತಿರುಗೇಟು ಕೊಡ್ತಾರೆ. ಎಲೆಕ್ಷನ್ ಟೈಂನಲ್ಲಿ ಇಂಥಾ ಏಟಾಟಗಳು ಸಹಜ’.

‘ಈ ಏಟಾಟದ ಫಲಾಫಲಗಳು ಏನಾಗಬಹುದು?’

‘ಗೊತ್ತಿಲ್ಲ, ಏಟು ವೋಟಾಗಬಹುದು, ಇಲ್ಲವೆ ತಿರುಗೇಟಾಗಬಹುದು, ಚುನಾವಣೆವರೆಗೂ ಕಾದು ನೋಡಬೇಕು...’ ಅಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT