‘ಗುರೂ... ಮೊನ್ನೆ ಭಾರತಕ್ಕೆ ಟ್ರಂಪ್ ಬಂದಿದ್ರಲ್ಲ, ಗೋಡ್ಸೆ ಅಥ್ವಾ ಗುಜರಾತ್ನ ಗೋಡೆ ಬಗ್ಗೆ ಅವ್ರು ‘ನಮೋ’ ಸಾಹೇಬ್ರಿಗೆ ಏನೂ ಕೇಳಲಿಲ್ವಂತಾ?’
‘ಪಾಪ, ಅವರು ಎರಡೂ ಒಂದೇ ಅಂತ ತಿಳ್ಕಂಡಿರಬೇಕು. ಕಾರಲ್ಲಿ ಬರುವಾಗ ಕೊಳೆಗೇರಿ ಕಾಣದಂಗೆ ಕಟ್ಟಿದ್ದ ಗೋಡೆ ನೋಡಿ ‘ವ್ಹಾವ್, ನೀವು ಗೋಡ್ಸೆನ ತುಂಬ ಸ್ಟ್ರಾಂಗಾಗಿ ಕಟ್ಟಿದೀರಿ. ಚೀನಾದಲ್ಲೂ ಇಂಥ ಗೋಡ್ಸೆ ಇರಬೇಕಲ್ಲ?’ ಅಂತ ಕೇಳಿದ್ರಂತೆ. ನಮೋ ಸಾಹೇಬ್ರು ಪಿಟಕ್ಕೆನ್ನಲಿಲ್ವಂತೆ’
‘ಒಳ್ಳೆ ಕತೆ, ಆಮೇಲೆ ಗಾಂಧಿ ಆಶ್ರಮಕ್ಕೆ ಹೋಗಿದ್ರಲ್ಲ, ಅಲ್ಲೇನಾತಂತೆ?’
‘ಅಲ್ಲಿದ್ದ ಚರಕ ಮತ್ತು ಗಾಂಧೀಜಿಯ ಮೂರು ಮಂಗಗಳನ್ನ ನೋಡಿದ ಟ್ರಂಪ್ ಹೆಂಡ್ತಿ ‘ರೀ... ಈ ಮಂಗಗಳು ಎಷ್ಟು ಕ್ಯೂಟಾಗಿದಾವೆ. ಅಮೆರಿಕಕ್ಕೆ ತಗಂಡು ಹೋಗೋಣ್ವ?’ ಅಂತ ಕೇಳಿದ್ರಂತೆ. ಅದಕ್ಕೆ ಟ್ರಂಪು ‘ನಮ್ಮೂರಲ್ಲೇ ಬೇಕಾದಷ್ಟು ಮಂಗಗಳಿದಾವೆ, ಬೇಡ’ ಅಂದ್ರಂತೆ.’
‘ಹೌದಾ? ಆಮೇಲೆ?’
‘ತಾಜ್ಮಹಲ್ ನೋಡಿದ ಟ್ರಂಪ್ ಹೆಂಡ್ತಿ ‘ವಂಡರ್ಫುಲ್, ಮಾರ್ವಲಸ್, ಇದಂತೂ ನಂಗೆ ಬೇಕೇಬೇಕು’ ಅಂತ ಹಟ ಹಿಡಿದ್ರಂತೆ. ಆಗ ಮೋದಿ ಅಲ್ಲೇ ಗಿಫ್ಟ್ ಅಂಗಡೀಲಿದ್ದ ಸಣ್ಣ ಮಾರ್ಬಲ್ ತಾಜ್ಮಹಲನ್ನ ಕೊಟ್ಟು ‘ಸದ್ಯ ಇದನ್ನ ಇಟ್ಕಂಡಿರಿ. ನೀವು ಊರಿಗೆ ಹೋದ ಮೇಲೆ ಒರಿಜಿನಲ್ ಕಳಿಸಿಕೊಡ್ತೀನಿ’ ಅಂತ ಸಮಾಧಾನ ಮಾಡಿದ್ರಂತೆ.’
‘ಸರಿಹೋಯ್ತು, ಮತ್ತೆ ಎಲ್ಲೆಲ್ಲಿಗೆ ಅವರು ಭೇಟಿ ನೀಡಿದ್ರಂತೆ?’