‘ರೀ... ಆ ಕಡೀಮನಿ ಕೊಟ್ರೇಶಿ ಮಗಳು ಓಡಿ ಹೋಗಿದ್ಲಲ್ಲ, ಯಾವುದೋ ಹುಡುಗನ್ನ ಮದುವಿ ಮಾಡ್ಕೆಂಡು ಬೆಂಗ್ಳೂರಾಗದಾಳಂತೆ...’ ಮಡದಿ ಪಿಸುಗುಟ್ಟಿದಾಗ ‘ಹೌದಾ? ನಿಂಗ್ಯಾರು ಹೇಳಿದ್ರು’ ಎಂದೆ.

‘ಯಾರರೆ ಹೇಳ್ಲಿ, ಸುದ್ದಿ ಅಂತೂ ಖರೆ, ಬೇಕಾದ್ರೆ ಫ್ಯಾಕ್ಟ್ ಚೆಕ್ ಮಾಡ್ಕಳಿ’ ಎಂದು ಸವಾಲು ಹಾಕಿದಳು.

ಎರಡು ದಿನ ಕಳೆದಿರಲಿಲ್ಲ, ‘ರೀ... ನಮ್ಮೂರ ಎಮ್ಮೆಲ್ಲೆ ಮನೇಲಿ ನೋಟು ಎಣಿಸೋ ಮೆಶಿನ್ ಅದಾವಂತೆ...’ ಮಡದಿ ಕಾಫಿ ಕೊಡುತ್ತ ಹೇಳಿದಾಗ ‘ಹೌದಾ? ನಿಂಗೆಂಗೆ ಗೊತ್ತಾತು’ ಎಂದೆ.

‘ಹೆಂಗೋ ಗೊತ್ತಾತು, ಅದಿರ್ಲಿ ನಿಮ್ ಆಫೀಸಿನಾಗೆ ಪರ್ಮೇಶಿ ಅಂತ ಅದಾರಾ?’

‘ಅದಾನೆ, ವಸೂಲಿ ಗಿರಾಕಿ, ಯಾಕೆ?’

‘ಅವರೆಂಡ್ತಿಗೆ ಡೈಮಂಡ್ ರಿಂಗ್ ಕೊಡಿಸ್ಯಾರಂತೆ, ಆ್ಯನಿವರ್ಸರಿಗೆ...’

‘ಹೌದಾ? ಅವನೆಂಡ್ತಿ ನಿನ್ ಕಿಟ್ಟಿ ಫ್ರೆಂಡಾ?’

‘ಇಲ್ಲಪ್ಪ, ಅವರ ಪರಿಚಯಾನೇ ನಂಗಿಲ್ಲ’ ಎಂದಳು. ಮತ್ತೆ ಇದೆಲ್ಲ ಹೆಂಗೆ... ತಲೆ ಕೆರೆದುಕೊಂಡೆ.

ಒಂದು ದಿನ ಬೆಡ್ ರೂಂಗೆ ನುಗ್ಗಿ ಬಂದವಳೇ ‘ರೀ... ನಿಮ್ ಫ್ರೆಂಡ್ ಹೆಲ್ತ್ ಆಫೀಸರ್ ಮನಿ ಮೇಲೆ ಲೋಕಾಯುಕ್ತ ರೇಡಾತಂತೆ. ಅವನೆಂಡ್ತಿ ಒಡವಿನೆಲ್ಲ ಚೀಲದಾಗೆ ಕಟ್ಟಿ ಪಕ್ಕದ ಮನಿ ನೀರಿನ ಟ್ಯಾಂಕ್ಗೆ ಹಾಕಿದ್ಲಂತೆ. ಅವರು ಹೋದ ಮೇಲೆ ವಾಪಸ್ ತಗಂಡ್ಲಂತೆ...’ ಮಡದಿ ವರದಿ ಒಪ್ಪಿಸಿದಳು.

‘ಹೌದಾ? ಇದನ್ನೆಲ್ಲ ನಿಂಗೆ ಯಾರು ಹೇಳ್ತಾರೆ? ಹೇಳಿದ್ರೆ ಒಂದು ಸೀರಿ ಕೊಡುಸ್ತೀನಿ’ ಎಂದೆ.

‘ಗ್ಯಾರಂಟಿನಾ? ಇನ್ಯಾರು ಹೇಳ್ತಾರ್ರೀ... ನಮ್ ಮನಿ ಕೆಲಸದಾಕಿ...’

‘ಸರಿ ಹೋತು, ಅಲ್ಲೇ ಅವಳು ಅವರ ಮನಿ ಸುದ್ದಿನೆಲ್ಲ ನಮಗೆ ಹೇಳಿದಂಗೆ ನಮ್ಮನಿ ಕತಿನೆಲ್ಲ ಅವರಿಗೆ ಹೇಳಲ್ಲ ಅಂತ ಏನು ಗ್ಯಾರಂಟಿ? ಅಕೀನ ಪಾಕಿಸ್ತಾನಕ್ಕೆ ಕಳಿಸೋದು ಚಲೋ...’ ಎಂದೆ.

‘ಪಾಕಿಸ್ತಾನಕ್ಕಾ? ಯಾಕೆ?’

‘ಬೇಹುಗಾರಿಕೆ ಮಾಡಾಕೆ. ಪಾಕಿಸ್ತಾನದ ರಹಸ್ಯನೆಲ್ಲ ಭಾರತಕ್ಕೆ ಕಳಿಸಾಕೆ...’

ಮಡದಿ ಪಿಟಿಕ್ಕನ್ನಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.