ಮನುಷ್ಯ ಮತ್ತು ನಾಯಿ ನಡುವಿನ ಸಂಬಂಧವು ಮಾನವ ನಾಗರಿಕತೆಯಷ್ಟೇ ಹಳೆಯದು. ಪೆಟ್ ಸಂಸ್ಕೃತಿ ಬರುವುದಕ್ಕೆ ಬಹಳ ಹಿಂದೆಯೇ, ನಾಯಿ ಮನುಷ್ಯನ ನಿಷ್ಠಾವಂತ ಸಂಗಾತಿಯಾಗಿ ರೂಪುಗೊಂಡಿತ್ತು. ಇತಿಹಾಸ ಹೇಳುವಂತೆ ನಾಯಿ ಮನುಷ್ಯನ ಮೊದಲ ಸಾಕು ಪ್ರಾಣಿ. ಅಪಾಯ ಬಂದಾಗ ಎಚ್ಚರಿಸುವ ಸಾಮರ್ಥ್ಯ, ಅತಿಥಿ ಮತ್ತು ಶತ್ರುಗಳನ್ನು ಗುರುತಿಸುವ ಬುದ್ಧಿಮತ್ತೆಯಿಂದಾಗಿ ನಾಯಿ ಕೇವಲ ಉಪಯುಕ್ತ ಪ್ರಾಣಿಯಾಗಿ ಉಳಿಯದೆ ಸ್ನೇಹಿತನಾಗಿ ಮನುಷ್ಯನ ಜೀವನದಲ್ಲಿ ಸ್ಥಾನ ಪಡೆಯಿತು.

ನಾಯಿಯಲ್ಲಿದ್ದ ಕೆಲವು ಉಪಯುಕ್ತ ಗುಣಗಳು ಮನುಷ್ಯನಿಗೆ ಅದರ ಮೇಲಿನ ಪ್ರೀತಿ ಮತ್ತು ಅವಲಂಬನೆ ಹೆಚ್ಚಿಸಿತು. ನಾಯಿ ಮನುಷ್ಯನಿಗೆ ಪ್ರತಿಫಲದ ನಿರೀಕ್ಷೆಯಿಲ್ಲದೆ ನಿಷ್ಠೆ ತೋರಿಸುವ ಪ್ರಾಣಿ. ಮಾಲೀಕರಿಗಾಗಿ ಪ್ರಾಣ ತ್ಯಾಗಮಾಡಿದ ಅನೇಕ ಕಥೆಗಳು ಇತಿಹಾಸದಲ್ಲಿ ದಾಖಲಾಗಿವೆ. ಪ್ರಾಣಿಗಳ ಮೇಲೆ ಕರುಣೆ ಅಗತ್ಯವಾದರೂ, ಮಾನವ ಸಮಾಜದ ಸುರಕ್ಷತೆ ಮತ್ತು ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವಂತಾಗಬಾರದು. ಯಾವುದೇ ಜೀವಿಯ ಸಂತತಿ ಹೆಚ್ಚಾದರೂ ಅದು ಪ್ರಾಕೃತಿಕ ಸಮತೋಲನಕ್ಕೆ ಮಾರಕವೇ ಆಗಿರುತ್ತದೆ. ಮನುಷ್ಯನಂತೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎನ್ನುವುದು ನಿಜ. ಹಾಗೆಂದು ಮಾನವ ಕುಲಕ್ಕೆ ಮಾರಕವಾಗುವ ರೀತಿಯಲ್ಲಿ ಬೆಳೆದಾಗ ಅದಕ್ಕೆ ಕಡಿವಾಣ ಹಾಕುವುದು ಅತಿ ಅಗತ್ಯ.

ಇತ್ತೀಚಿಗೆ ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಬೆಳಿಗ್ಗೆ ಮತ್ತು ಸಂಜೆ ಶಾಲಾ ಮಕ್ಕಳು, ವೃದ್ದರು, ಮಹಿಳೆಯರು ಹಾಗೂ ದ್ವಿಚಕ್ರ ವಾಹನ ಸವಾರರು ಬೀದಿನಾಯಿಗಳ ಉಪಟಳಕ್ಕೆ ತೀವ್ರವಾಗಿ ನಲುಗಿ ಹೋಗಿದ್ದಾರೆ. ರಾತ್ರಿ ಹೊತ್ತಿನಲ್ಲೂ ಇವುಗಳ ಕಾಟ ಹೆಚ್ಚು. ಹಲವೆಡೆ ನಾಯಿ ಕಚ್ಚುವ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು ಸಾರ್ವಜನಿಕರಲ್ಲಿ ಭಯದ ವಾತಾವರಣ ಆರಂಭವಾಗಿದೆ. ಹುಚ್ಚು ನಾಯಿ ಕಡಿತದಿಂದ ಮಾರಕ ರೇಬಿಸ್ ರೋಗ ಹರಡುವುದರಿಂದ ಇದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದಲೂ ಅಪಾಯಕಾರಿ.
.ಪ್ರಜಾವಾಣಿ ಚರ್ಚೆ: ಬೀದಿನಾಯಿಗಳ ತೆರವು ಅವೈಜ್ಞಾನಿಕ, ಅಪಾಯಕಾರಿ.
ಪ್ರತಿವರ್ಷ ಲಕ್ಷಾಂತರ ಜನರು ನಾಯಿಯಿಂದ ಕಚ್ಚಿಸಿಕೊಂಡು ಆಸ್ಪತ್ರೆಗಳಿಗೆ ಧಾವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಪ್ರಾಣ ಕಳೆದುಕೊಂಡ ಉದಾಹರಣೆಗಳು ಬಹಳಷ್ಟಿವೆ. ಅದರಲ್ಲೂ ಶಾಲೆಗಳು, ಆಸ್ಪತ್ರೆ, ಬಸ್ ನಿಲ್ದಾಣಗಳು, ಮಾರುಕಟ್ಟೆಗಳಂತಹ ಜನಸಂದಣಿಯ ಪ್ರದೇಶಗಳಲ್ಲಿಯೇ ಬೀದಿ ನಾಯಿಗಳ ಹಿಂಡು ಹೆಚ್ಚಾಗಿರುವುದು ಅಪಾಯಕಾರಿಯಾಗಿದೆ. ಹಲವೆಡೆ ಪ್ರತಿ ದಿನವೂ ವರದಿಯಾಗುವಂತೆ ಮಕ್ಕಳು ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡು ಸಾವು ಸಂಭವಿಸಿರುವ ಹೃದಯ ವಿದ್ರಾವಕ ಘಟನೆಗಳು ಪೋಷಕರ ಆತಂಕಕ್ಕೆ ಕಾರಣವಾಗಿದೆ.

ದಾಖಲೆಯಲ್ಲಿ ಕಡಿಮೆ ಸಂಖ್ಯೆ: ಅಂಕಿ ಅಂಶಗಳ ಪ್ರಕಾರ, ದೇಶದಾದ್ಯಂತ 2024ರಲ್ಲಿ 37.15 ಲಕ್ಷಕ್ಕೂ ಹೆಚ್ಚು ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ವಾರ್ಷಿಕವಾಗಿ ರೇಬಿಸ್ನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ 18 ಸಾವಿರ–19 ಸಾವಿರದಷ್ಟಿದೆ ಎಂದು ವೈಜ್ಞಾನಿಕ ಅಧ್ಯಯನಗಳು ಹೇಳುತ್ತವೆ. ಆದರೆ ಸರ್ಕಾರದ ಅಧಿಕೃತ ದಾಖಲೆ ಇಂದಿಗೂ ಕಡಿಮೆ ಸಂಖ್ಯೆಯನ್ನು ಮಾತ್ರ ವರದಿ ಮಾಡುತ್ತಿದೆ. ಕರ್ನಾಟಕವನ್ನೇ ತಗೆದುಕೊಂಡರೆ 2024ರಲ್ಲಿ 3.6 ಲಕ್ಷ ನಾಯಿ ಕಚ್ಚಿದ ಪ್ರಕರಣಗಳು, 2025ರ ಜನವರಿಯಿಂದ ಆಗಸ್ಟ್ ತಿಂಗಳ ವರೆಗೆ 3.1 ಲಕ್ಷ ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ರೇಬಿಸ್ನಿಂದ 2024ರಲ್ಲಿ 42 ಮಂದಿ ಸಾವಿಗೀಡಾಗಿದ್ದರೆ, 2025ರ ಜನವರಿಯಿಂದ ಆಗಸ್ಟ್ ತಿಂಗಳವರೆಗೆ 26 ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ದಾವಣಗೆರೆಯಲ್ಲಿ ಖದಿರಾ ಬಾನು ಎಂಬ 4 ವರ್ಷದ ಹುಡುಗಿ ರೇಬಿಸ್ ರೋಗಕ್ಕೆ ತುತ್ತಾಗಿ ಸಾವಿಗೀಡಾಗಿದ್ದು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ನಾಯಿ ಕಚ್ಚಿದ್ದಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದೆ ಇದ್ದಿದ್ದಕ್ಕೆ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು ಸುದ್ದಿಯಾಗಿತ್ತು.

ಜನರು ಬೀದಿ ನಾಯಿಗಳ ಹಾವಳಿಗೆ ತುತ್ತಾಗುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿ ಪ್ರಾಣಿಗಳ ಕ್ರೌರ್ಯ ತಡೆ ಕಾಯ್ದೆ 1960ರ ಮತ್ತು ಪ್ರಾಣಿ ಜನನ ನಿಯಂತ್ರಣ ನಿಯಮಗಳು 2023ರ ಅನುಸಾರ ನಗರಗಳಲ್ಲಿ ನಾಯಿಗಳನ್ನು ಬೀದಿಗೆ ಬೀಡುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ, ಸಂತಾನಶಕ್ತಿ ಹರಣ ಶಸ್ತ್ರಕ್ರಿಯೆ ನಡೆಸುವುದಕ್ಕೆ, ರೇಬಿಸ್ ಲಸಿಕೆ ನೀಡುವುದಕ್ಕೆ ಮತ್ತು ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸಿ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರ ಮಾಡುವುದಕ್ಕೆ ಸೂಚನೆ ನೀಡಿತ್ತು. ನಂತರ ತೀರ್ಪಿನಲ್ಲಿ ಕೆಲವು ಮಾರ್ಪಾಡು ಮಾಡಿ 2023ರ ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳ ಪ್ರಕಾರ, ಸಂತಾನಶಕ್ತಿಹರಣ ಶಸ್ತ್ರಕ್ರಿಯೆ ಮಾಡಬೇಕು ಮತ್ತು ಲಸಿಕೆ ನೀಡಬೇಕು, ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ, ಉದ್ಯಾನಗಳಲ್ಲಿ ನಾಯಿಗಳಿಗೆ ಆಹಾರ ಕೊಡಬಾರದು, ಆಹಾರ ನೀಡುವ ನಿರ್ದಿಷ್ಟ ಸ್ಥಳಗಳನ್ನು ನಗರಾಡಳಿತಗಳು ಗುರುತಿಸಬೇಕು, ದೂರುಗಳಿಗೆ ಸಹಾಯವಾಣಿ ವ್ಯವಸ್ಥೆ ಇರಬೇಕು, ನಿಯಮ ಉಲ್ಲಂಘಿಸುವ ಎನ್ ಜಿ ಒ / ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿತು. ಶಾಲೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ, ಕ್ರೀಡಾಂಗಣಗಳು, ಉದ್ಯಾನ ಮತ್ತು ಇನ್ನಿತರ ಅತಿ ಹೆಚ್ಚು ಜನ ಸಂಚಾರ ಪ್ರದೇಶಗಳಲ್ಲಿ ಬೀದಿ ನಾಯಿಗಳನ್ನು ನಿಯಂತ್ರಿಸಿ ಅವುಗಳನ್ನು ಹಿಡಿದು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಬೇಕು ಮತ್ತು ನಂತರ ಜನಸಂದಣಿಯ ಸ್ಥಳಗಳಿಗೆ ಅವುಗಳನ್ನು ಬಿಡಬಾರದು ಎಂದು ಆದೇಶ ನೀಡಿದೆ.

ಸರ್ಕಾರ ಮಾಡಬೇಕಾಗಿರುವುದೇನು?

ಬೀದಿನಾಯಿಗಳ ನಿಯಂತ್ರಣದ ಹೆಸರಿನಲ್ಲಿ ನಗರಾಡಳಿತಗಳು ಕೋಟ್ಯಂತರ ರೂಪಾಯಿ ಹಣವನ್ನು ವ್ಯಯ ಮಾಡುತ್ತಿವೆ. ಬೀದಿನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಜಿಬಿಎ (ಹಿಂದಿನ ಬಿಬಿಎಂಪಿ) ಬೀದಿನಾಯಿಗಳಿಗೆ ಬಿರಿಯಾನಿ ಉಣ ಬಡಿಸುವ ಯೋಜನೆಗಳು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಾಣಿಗಳ ಮೇಲಿನ ಅತಿಯಾದ ಕರುಣೆ ಮನುಷ್ಯನ ಬದುಕಿಗೆ ಮಾರಕವಾಗಬಾರದು. ಹಾಗಾಗಿ, ಸರ್ಕಾರ ಬೀದಿನಾಯಿಗಳಿಂದ ಜನ ಸಾಮಾನ್ಯರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕಾಗಿದೆ. ಪ್ರಾಣಿಗಳ ಜನನ ನಿಯಂತ್ರಣ ನಿಯಮ 2023 ಅನ್ನು ಕಡ್ಡಾಯವಾಗಿ ಜಾರಿಗೊಳಿಸಿ ಇದರ ಅನುಸಾರ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಕ್ರಿಯೆ ಮಾಡಿ ಸಂಖ್ಯೆ ನಿಯಂತ್ರಣ, ಎಲ್ಲಾ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕುವುದು, ಅಪಾಯಕಾರಿಯಾಗಿರುವ ಬೀದಿನಾಯಿಗಳನ್ನು ಹಿಡಿದು ಆಶ್ರಯ ಕೇಂದ್ರಗಳಲ್ಲಿ ಇರಿಸುವುದು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಮುಖ್ಯ.

ಇದಕ್ಕಾಗಿ ನಗರಾಡಳಿತಗಳು ಆಶ್ರಯ ಕೇಂದ್ರಗಳನ್ನು ತೆರೆಯಬೇಕು ಮತ್ತು ಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿರುವ ಎನ್ಜಿಒಗಳು ಮತ್ತು ವ್ಯಕ್ತಿಗಳು ನಡೆಸುವ ನಾಯಿಗಳ ಪುನರ್ವಸತಿ ಕೇಂದ್ರಗಳಿಗೆ ನೆರವು ನೀಡುವ ಮೂಲಕ ಉತ್ತೇಜಿಸುವ ಕಾರ್ಯವನ್ನು ಮಾಡಬೇಕು. ಶಾಲೆಗಳ ಬಳಿ ಬೀದಿನಾಯಿಗಳನ್ನು ನಿಯಂತ್ರಿಸಬೇಕು. ಬೀದಿನಾಯಿಗಳಿಗೆ ಅಲ್ಲಲ್ಲಿ ತಾತ್ಕಾಲಿಕ ಆಶ್ರಯ ತಾಣಗಳನ್ನು ನಿರ್ಮಿಸಿ ಅಲ್ಲಿಯೇ ಆಹಾರಗಳನ್ನು ಹಾಕುವ ಮೂಲಕ ಎಲ್ಲೆಂದರಲ್ಲಿ ಆಹಾರಗಳನ್ನು ಹಾಕುವುದನ್ನು ನಿಯಂತ್ರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸಗಳನ್ನು/ಆಹಾರ ಪದಾರ್ಥಗಳ, ಮಾಂಸ ಇನ್ನಿತರ ತ್ಯಾಜ್ಯ ಹಾಕುವುದನ್ನು ನಿಯಂತ್ರಿಸಬೇಕು. ಬೀದಿ ನಾಯಿಗಳ ನಿಯಂತ್ರಣವೆಂದರೆ ಅವುಗಳಿಗೆ ವಿಷ ಪ್ರಾಶನ ಮಾಡಿ ಕೊಲ್ಲುವುದೊಂದೇ ದಾರಿಯಲ್ಲ. ಎಬಿಸಿ ನಿಯಮದಂತೆ ಲಸಿಕೆ ಹಾಕುವ ಮೂಲಕ ಸಂತಾನ ನಿಯಂತ್ರಣವನ್ನು ಸಹ ಮಾಡಬಹುದಾಗಿದೆ. ಈ ಎಲ್ಲಾ ಕ್ರಮಗಳನ್ನು ಕೈ ಗೊಳ್ಳುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಇದಕ್ಕಾಗಿ ಸರ್ಕಾರ ಮತ್ತು ಸ್ಥಳಿಯ ಆಡಳಿತ ವ್ಯವಸ್ಥೆಗಳು ಇಚ್ಛಾಶಕ್ತಿ ಹೊಂದಿರಬೇಕು.

ದಾಖಲೆಯಲ್ಲಿ ಕಡಿಮೆ ಸಂಖ್ಯೆ

ಅಂಕಿ ಅಂಶಗಳ ಪ್ರಕಾರ ದೇಶದಾದ್ಯಂತ 2024ರಲ್ಲಿ 37.15 ಲಕ್ಷಕ್ಕೂ ಹೆಚ್ಚು ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ವಾರ್ಷಿಕವಾಗಿ ರೇಬಿಸ್ನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ 18 ಸಾವಿರ–19 ಸಾವಿರದಷ್ಟಿದೆ ಎಂದು ವೈಜ್ಞಾನಿಕ ಅಧ್ಯಯನಗಳು ಹೇಳುತ್ತವೆ. ಆದರೆ ಸರ್ಕಾರದ ಅಧಿಕೃತ ದಾಖಲೆ ಇಂದಿಗೂ ಕಡಿಮೆ ಸಂಖ್ಯೆಯನ್ನು ಮಾತ್ರ ವರದಿ ಮಾಡುತ್ತಿದೆ. ಕರ್ನಾಟಕವನ್ನೇ ತಗೆದುಕೊಂಡರೆ 2024ರಲ್ಲಿ 3.6 ಲಕ್ಷ ನಾಯಿ ಕಚ್ಚಿದ ಪ್ರಕರಣಗಳು 2025ರ ಜನವರಿಯಿಂದ ಆಗಸ್ಟ್ ತಿಂಗಳ ವರೆಗೆ 3.1 ಲಕ್ಷ ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ರೇಬಿಸ್ನಿಂದ 2024ರಲ್ಲಿ 42 ಮಂದಿ ಸಾವಿಗೀಡಾಗಿದ್ದರೆ 2025ರ ಜನವರಿಯಿಂದ ಆಗಸ್ಟ್ ತಿಂಗಳವರೆಗೆ 26 ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಲೇಖಕ: ಶಿವಮೊಗ್ಗದಲ್ಲಿ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.