ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕ ವಾಹನಗಳಲ್ಲಿ ಅಕ್ರಮ ಲೈಟ್ಗಳ ಬಳಕೆಯ ವಿರುದ್ಧ ನಡೆಸುತ್ತಿರುವ ಆಂದೋಲನ ರೂಪದ ಕಾರ್ಯಾಚರಣೆಯು ಸಂಚಾರದ ಶಿಸ್ತನ್ನು ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅನಧಿಕೃತ ಎಲ್ಇಡಿ ಬಾರ್ಗಳು, ಹೆಚ್ಚು ತೀಕ್ಷ್ಣತೆಯ ಹೆಡ್ಲೈಟ್ಗಳು ಮತ್ತು ಕೆಂಪು–ನೀಲಿ ಸ್ಟ್ರೋಬ್ ಲೈಟ್ಗಳನ್ನು ಬಳಸಿದ ಕಾರಣಕ್ಕಾಗಿ ಒಂದು ಸಾವಿರಕ್ಕೂ ಹೆಚ್ಚು ವಾಹನ ಚಾಲಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸಂಚಾರ ಪೊಲೀಸರ ಈ ಕಾರ್ಯಾಚರಣೆಯು, ರಸ್ತೆಗಳು ಎಲ್ಲ ನಾಗರಿಕರ ಬಳಕೆಗೆ ಇರುವ ಸ್ಥಳವೇ ಹೊರತು, ಭಯ ಹುಟ್ಟಿಸುವ ಅಖಾಡವಲ್ಲ ಎನ್ನುವ ಭಾವನೆ ಮೂಡಿಸುವಂತಿದೆ. ವಾಹನಗಳಲ್ಲಿನ ದೀಪಗಳ ಬಳಕೆಗೆ ಸಂಬಂಧಿಸಿದ ಕಾನೂನು ಸ್ಪಷ್ಟವಾಗಿದೆ. ಭಾರತೀಯ ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರದ ಮೋಟಾರು ವಾಹನ ನಿಯಮಗಳು, ಹಲವು ಬಣ್ಣಗಳ ದೀಪಗಳು, ಕೆಂಪು ಅಥವಾ ನೀಲಿ ಫ್ಲ್ಯಾಷರ್ಗಳು ಮತ್ತು ಹೆಚ್ಚಿನ ತೀವ್ರತೆಯ ದೀಪಗಳನ್ನು ಬಳಸುವುದನ್ನು ನಿಷೇಧಿಸಿವೆ. ನಿಯಮಗಳ ಪ್ರಕಾರ, ಪ್ರಖರವಾಗಿ ಬೆಳಕು ಚಿಮ್ಮುವ ದೀಪಗಳನ್ನು ಆ್ಯಂಬುಲೆನ್ಸ್ಗಳು, ಅಗ್ನಿಶಾಮಕದಳದ ಹಾಗೂ ಕರ್ತವ್ಯನಿರತ ಪೊಲೀಸ್ ವಾಹನಗಳಂತಹ ಅಧಿಕೃತ ಸೇವೆಗಳಲ್ಲಿ ಮಾತ್ರ ಬಳಸಬಹುದಾಗಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸುವುದರ ಜೊತೆಗೆ ಅಕ್ರಮ ಅಳವಡಿಕೆಗಳನ್ನು ತೆಗೆದುಹಾಕಲಾಗುತ್ತದೆ.

ವಾಹನವೊಂದರ ಕಣ್ಣು ಕೋರೈಸುವ ದೀಪಗಳ ಬೆಳಕು ರಸ್ತೆಯಲ್ಲಿನ ಇತರ ವಾಹನಗಳ ಸುಗಮ
ಸಂಚಾರಕ್ಕೆ ಅಡಚಣೆ ಉಂಟುಮಾಡಬಹುದು. ವಾಹನ ಚಾಲಕರನ್ನು ಭಯಗೊಳಿಸಬಹುದು ಅಥವಾ ಗಲಿಬಿಲಿಗೆ ಒಳಗಾಗುವಂತೆ ಮಾಡಬಹುದು; ದೃಷ್ಟಿಚಂಚಲಗೊಳಿಸಿ ಅಪಘಾತಗಳಿಗೆ ಆಸ್ಪದ ಕಲ್ಪಿಸಬಹುದು. ತುರ್ತು ಸಂದರ್ಭದಲ್ಲಿ ಬಳಸುವ ದೀಪಗಳನ್ನು ದ್ವಿಚಕ್ರ ವಾಹನಗಳು, ಖಾಸಗಿ ಕಾರುಗಳು ಹಾಗೂವಾಣಿಜ್ಯ ವಾಹನಗಳಲ್ಲಿ ಬಳಸುವುದರಿಂದಾಗಿ, ಆ ದೀಪಗಳ ನೈಜ ಉದ್ದೇಶದ ಬಗ್ಗೆಯೇ ಸಾರ್ವಜನಿಕರಲ್ಲಿ ಉದಾಸೀನಭಾವ ಮೂಡಬಹುದು. ಇದರ ಪರಿಣಾಮವಾಗಿ ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳದ ತುರ್ತು ವಾಹನಗಳ ಸುಗಮ ಸಂಚಾರಕ್ಕೆ ಜಾಗ ಬಿಟ್ಟುಕೊಡಲು ಇತರ ವಾಹನ ಚಾಲಕರು ಹಿಂದೆಮುಂದೆ ನೋಡುತ್ತಾರೆ. ಪ್ರತಿಯೊಂದು ಕ್ಷಣವೂ ಸಾವು ಮತ್ತು ಬದುಕನ್ನು ನಿರ್ಣಯಿಸುವಂಥ ಸಮಯದಲ್ಲಿ ಈ ವಿಳಂಬ ಗಂಭೀರ ಪರಿಣಾಮ ಉಂಟುಮಾಡಬಹುದು.

ಸಮಾಜಶಾಸ್ತ್ರಜ್ಞರು ‘ಯಾಜಮಾನ್ಯ ಧೋರಣೆ’ ಎಂದು ವಿಶ್ಲೇಷಿಸುವ ಈ ಅಪಾಯಕಾರಿ ಮನಃಸ್ಥಿತಿ ಬ್ರಿಟಿಷ್ ಪ್ರಭುತ್ವದ ಪಳೆಯುಳಿಕೆಯನ್ನು ನೆನಪಿಸುವಂತಿದೆ. ಸ್ಥಳೀಯರಿಂದ ದೈಹಿಕವಾಗಿ ಹಾಗೂ ಕಾನೂನಾತ್ಮಕವಾಗಿ ಅಂತರ ಕಾಪಾಡಿಕೊಳ್ಳುವ ವಸಾಹತುಶಾಹಿ ಮನಃಸ್ಥಿತಿಯ ಅನುಕರಣೆಯನ್ನು ವಾಹನಗಳಲ್ಲಿನ ಸೈರನ್ ಸಂಸ್ಕೃತಿಯ ಲೈಟ್ಗಳಲ್ಲಿ ಕಾಣಬಹುದಾಗಿದೆ. ರಸ್ತೆಯಲ್ಲಿ ತಮ್ಮ ಅಧಿಕಾರದ ಪ್ರಾಬಲ್ಯವನ್ನು ಪ್ರದರ್ಶಿಸುವ ಹಾಗೂ ವಿಶೇಷ ಸವಲತ್ತುಗಳನ್ನು ಪಡೆಯುವ ಉದ್ದೇಶ ಈ ಧೋರಣೆಯ ಹಿಂದಿದೆ. ಅಧಿಕಾರದ ಪ್ರತಿಷ್ಠೆಯ ಪ್ರದರ್ಶನಕ್ಕಾಗಿ ಸಂಸದರು, ಶಾಸಕರಂಥ ಜನಪ್ರತಿನಿಧಿಗಳು ಮಾತ್ರವಲ್ಲದೆ, ನಿವೃತ್ತ ಕಾರ್ಪೊರೇಟರ್ಗಳು ಕೂಡ ತುರ್ತು ದೀಪಗಳನ್ನು ಬಳಸುವುದರಿಂದಾಗಿ ಈ ವಿಐಪಿ ಸಂಸ್ಕೃತಿ ಬಲಗೊಂಡಿದೆ. ರಾಜಕೀಯ ಪ್ರಾಬಲ್ಯ ಹೊಂದಿರುವ ವ್ಯಕ್ತಿಗಳ ಉಲ್ಲಂಘನೆಯನ್ನು ಸಹಿಸಿಕೊಂಡು, ಜನಸಾಮಾನ್ಯರ ಮೇಲೆ ಕ್ರಮ ಜರುಗಿಸುವ ಪ್ರವೃತ್ತಿ ಸಾರ್ವಜನಿಕ ಸಿನಿಕತೆಯನ್ನು ಸೃಷ್ಟಿಸಿದೆ. ಕಾನೂನಿನ ಬಗ್ಗೆ ಸಾರ್ವಜನಿಕರಿಗೆ ನಂಬಿಕೆ ಮತ್ತು ಗೌರವ ಮೂಡಬೇಕಾದರೆ, ಅದು ಕೆಳಮುಖವಾಗಿ ಮಾತ್ರವಲ್ಲದೆ ಮೇಲ್ಮುಖವಾಗಿಯೂ ಚಲಿಸುವಂತಿರಬೇಕು. ರಸ್ತೆಗಳ ಮೇಲಿನ ಪ್ರತಿಷ್ಠೆಯ ಪ್ರಹಸನದ ಸಮಸ್ಯೆ ಬೆಂಗಳೂರಿಗೆ ಸೀಮಿತವಾಗಿರದೆ, ದೇಶದೆಲ್ಲೆಡೆ ಕಂಡುಬರುವಂತಹದ್ದಾಗಿದೆ. ತುರ್ತು ದೀಪಗಳನ್ನು ಯಾರು ಬಳಸಬಹುದು ಎನ್ನುವುದರ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಬೇಕಾಗಿದೆ ಮತ್ತು ಅದನ್ನು ರಾಜ್ಯಗಳ ಪೊಲೀಸ್ ನಿರ್ದೇಶಕರು ಯಾವುದೇ ವಿನಾಯಿತಿ ಇಲ್ಲದೆ ಜಾರಿಗೊಳಿಸಬೇಕಾಗಿದೆ. ಪ್ರಸ್ತುತ, ಅಕ್ರಮ ದೀಪಗಳ ವಿರುದ್ಧ ಬೆಂಗಳೂರು ಪೊಲೀಸರು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ವಾಹನಗಳಲ್ಲಿ ಅಕ್ರಮ ದೀಪಗಳ ಬಳಕೆಯನ್ನು ತಡೆಗಟ್ಟುವುದು ಸೌಂದರ್ಯಾತ್ಮಕ ಅಥವಾ ಕಾನೂನಾತ್ಮಕ ಕ್ರಮವಷ್ಟೇ ಆಗಿರದೆ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವುದರ ಸಂಕೇತವೂ ಆಗಿದೆ. ಈ ಅಕ್ರಮ ‘ದೀಪಸಂಸ್ಕೃತಿ’ಯನ್ನು ಕೊನೆಗೊಳಿಸುವುದು ಅಪಾಯಕಾರಿ ಮನಃಸ್ಥಿತಿಯನ್ನು ಕೊನೆಗೊಳಿಸುವ ಪ್ರಯತ್ನವೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.