ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಣೆಕಟ್ಟುಗಳ ಸುರಕ್ಷತೆಯ ಬಗ್ಗೆ ಈಚೆಗೆ ದನಿ ಎತ್ತಿದ್ದಾರೆ. ಅವರು ವ್ಯಕ್ತಪಡಿಸಿರುವ ಕಳವಳಗಳು ಅಣೆಕಟ್ಟುಗಳಲ್ಲಿ ಬಳಕೆಯಾಗಿರುವ ಎಂಜಿನಿಯರಿಂಗ್ ತಂತ್ರಜ್ಞಾನಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಅದು ರಾಷ್ಟ್ರದ ಭದ್ರತೆ, ಒಕ್ಕೂಟ ವ್ಯವಸ್ಥೆಯಲ್ಲಿನ ಹೊಣೆಗಾರಿಕೆ, ಸಾರ್ವಜನಿಕ ವಿಶ್ವಾಸಕ್ಕೆ ಸಂಬಂಧಿಸಿದ್ದೂ ಹೌದು ಎಂಬುದಾಗಿ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಮಾವೇಶದಲ್ಲಿ (ಐಸಿಡಿಎಸ್), ಹಳತಾಗುತ್ತಿರುವ ಅಣೆಕಟ್ಟುಗಳನ್ನು ಭಾರತದ ಮೂಲಸೌಕರ್ಯ ವಲಯದ ಅಪಾಯಗಳ ಕುರಿತ ಚರ್ಚೆಯ ಕೇಂದ್ರಭಾಗಕ್ಕೆ ಅವರು ತಂದಿರಿಸಿದ್ದಾರೆ. ಅಣೆಕಟ್ಟುಗಳ ಸಂಖ್ಯೆಯು ಈ ಕಳವಳಕ್ಕೆ ಕಾರಣವನ್ನು ಹೇಳುತ್ತಿದೆ. ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ, ಭಾರತದಲ್ಲಿ 6,600ಕ್ಕೂ ಹೆಚ್ಚು ಅಣೆಕಟ್ಟುಗಳಿವೆ. ಅಂದರೆ ವಿಶ್ವದಲ್ಲಿ ಅತಿಹೆಚ್ಚಿನ ಸಂಖ್ಯೆಯ ಅಣೆಕಟ್ಟುಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೆಯ ಸ್ಥಾನ ಪಡೆದಿದೆ. ಈ ಪೈಕಿ ಸರಿಸುಮಾರು 1,100 ಅಣೆಕಟ್ಟುಗಳು ಐವತ್ತು ವರ್ಷಗಳಿಗಿಂತ ಹೆಚ್ಚು ಹಳೆಯವು. 220ಕ್ಕಿಂತ ಹೆಚ್ಚು ಅಣೆಕಟ್ಟುಗಳು ಶತಮಾನ ಕಂಡಿವೆ. 2050ರ ಸುಮಾರಿಗೆ ಭಾರತದ ಅಣೆಕಟ್ಟುಗಳ ಪೈಕಿ ಶೇ 80ಕ್ಕಿಂತ ಹೆಚ್ಚಿನವು, ಅವುಗಳ ನಿರೀಕ್ಷಿತ ಆಯುಸ್ಸನ್ನು ಕಳೆದಿರುತ್ತವೆ. ಕರ್ನಾಟಕದಲ್ಲಿಯೇ 231 ಅಣೆಕಟ್ಟುಗಳಿವೆ. ಈ ಪೈಕಿ ಸುಮಾರು ಶೇ 70ರಷ್ಟು ಅಣೆಕಟ್ಟುಗಳು 25 ವರ್ಷಗಳಿಗಿಂತ ಹಳೆಯವು. 40ಕ್ಕಿಂತ ಹೆಚ್ಚು 50 ವರ್ಷಗಳನ್ನು ಕಳೆದಿವೆ. ವಾಣಿ ವಿಲಾಸ ಸಾಗರ (119 ವರ್ಷಗಳು), ಕೃಷ್ಣರಾಜ ಸಾಗರ (95 ವರ್ಷಗಳು) ಮತ್ತು ತುಂಗಭದ್ರಾ ಅಣೆಕಟ್ಟು (73 ವರ್ಷಗಳು) ರಾಜ್ಯದ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಸಾರುತ್ತಿವೆ, ಈಗ ಎದುರಾಗಬಹುದಾದ ಸಮಸ್ಯೆಗಳನ್ನೂ ಹೇಳುತ್ತಿವೆ.

ಅಣೆಕಟ್ಟುಗಳು ಒಂದಕ್ಕೊಂದು ಸಂಬಂಧ ಇರುವ ನಾಲ್ಕು ಅಪಾಯಗಳನ್ನು ಎದುರಿಸುತ್ತಿವೆ. ಮೊದಲನೆಯದು, ರಾಚನಿಕ ಅಪಾಯ, ಗೇಟುಗಳು ಹಾಗೂ ಇತರ ರಚನೆಗಳು ಹಳೆಯದಾಗಿರುವ ಕಾರಣದಿಂದಾಗಿ ಎದುರಾಗುವ ಅಪಾಯ. ಇವುಗಳಲ್ಲಿ ಹಲವು ರಚನೆಗಳು 50 ವರ್ಷ ಬಾಳಿಕೆ ಬರುವಂತೆ ರೂಪುಗೊಂಡವು. 2024ರಲ್ಲಿ ತುಂಗಭದ್ರಾ ಅಣೆಕಟ್ಟಿನ ಸರಪಳಿಯ ಕೊಂಡಿ ತುಂಡಾಗಿ ಒಂದು ಕ್ರೆಸ್ಟ್ ಗೇಟ್ ಕೊಚ್ಚಿಹೋದಾಗ ಈ ಅಪಾಯವು ಬಹಳ ಸ್ಪಷ್ಟವಾಗಿ ಗೋಚರವಾಗಿದೆ. ಎರಡನೆಯ ಅಪಾಯ: ಹೂಳು ತುಂಬಿರುವ ಪರಿಣಾಮವಾಗಿ ಹಲವಾರು ಹಳೆಯ ಅಣೆಕಟ್ಟುಗಳಲ್ಲಿನ ನೀರಿನ ಸಂಗ್ರಹ ಸಾಮರ್ಥ್ಯವು ಗಣನೀಯವಾಗಿ ಕಡಿಮೆ ಆಗಿರುವುದು. ಇದರಿಂದಾಗಿ ಪ್ರವಾಹ ಹಾಗೂ ಅನಾವೃಷ್ಟಿಯನ್ನು ನಿರ್ವಹಿಸುವಲ್ಲಿ ಈ ಅಣೆಕಟ್ಟುಗಳ ಸಾಮರ್ಥ್ಯ ತಗ್ಗಿದೆ. ಮೂರನೆಯ ಅಪಾಯ, ಹವಾಮಾನದ ವೈಪರೀತ್ಯಕ್ಕೆ ಸಂಬಂಧಿಸಿದೆ. ಈ ಅಣೆಕಟ್ಟುಗಳನ್ನು ಯಾವ ಪ್ರಮಾಣದ ಮಳೆಯ ಲೆಕ್ಕಾಚಾರದೊಂದಿಗೆ ಹಿಂದೆ ನಿರ್ಮಿಸಲಾಗಿತ್ತೋ ಆ ಪ್ರಮಾಣವನ್ನು ಈಗಿನ ಅತಿವೃಷ್ಟಿಯು ಮತ್ತೆ ಮತ್ತೆ ಮೀರುತ್ತಿದೆ. ನಾಲ್ಕನೆಯ ಅಪಾಯವು ಈಗಿನ ಕಾಲದ ಸೈಬರ್ ಭದ್ರತೆಗೆ ಸಂಬಂಧಿಸಿದೆ. ಡಿಜಿಟಲ್ ವ್ಯವಸ್ಥೆಯ ಮೂಲಕ ನಿಯಂತ್ರಿಸುವ ಉಪಕರಣಗಳನ್ನು, ಸ್ವಯಂಚಾಲಿತ ಗೇಟುಗಳನ್ನು ಅಣೆಕಟ್ಟುಗಳಿಗೆ ಅಳವಡಿಸಿದಂತೆಲ್ಲ ಅವು ತಾಂತ್ರಿಕವಾಗಿ ನಡೆಸಬಹುದಾದ ವಿಧ್ವಂಸಕ ಕೃತ್ಯಗಳಿಗೂ ಗುರಿಯಾಗುವ ಸಾಧ್ಯತೆ ಇರುತ್ತದೆ. ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಸಿದ್ದರಾಮಯ್ಯ ಅವರು ಒತ್ತು ನೀಡಿದ್ದುದು ಎದ್ದುಕಾಣುವಂತೆ ಇದೆ. ಅವರು ನದಿ ಪಾತ್ರಗಳ ರಕ್ಷಣೆಗೆ ಎಲ್ಲ ರಾಜ್ಯಗಳೂ ಒಟ್ಟಾಗಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದ್ದಾರೆ. ಮನುಷ್ಯ ಖುದ್ದಾಗಿ ಭೇಟಿ ನೀಡಿ ಸುರಕ್ಷತೆಯ ಬಗ್ಗೆ ಆಗಾಗ ತಪಾಸಣೆ ನಡೆಸುವ ಬದಲು, ಡಿಜಿಟಲ್ ವ್ಯವಸ್ಥೆಯ ಮೂಲಕ ಸುರಕ್ಷತೆಯ ಮೇಲೆ ನಿರಂತರವಾಗಿ ನಿಗಾ ಇರಿಸುವ ಕೆಲಸ ಆಗಬೇಕು ಎಂದು ಹೇಳಿದ್ದಾರೆ.

ವ್ಯವಸ್ಥಿತ ನಿಗಾ, ಕಾಲಕಾಲಕ್ಕೆ ಅಣೆಕಟ್ಟುಗಳ ಆಧುನೀಕರಣ, ಹವಾಮಾನದ ವೈಪರೀತ್ಯಗಳಿಗೆ ಒಗ್ಗಿಕೊಳ್ಳುವಂತಹ ಬಗೆಯಲ್ಲಿ ಮರುವಿನ್ಯಾಸ, ಅಣೆಕಟ್ಟೆಯ ಕೆಳಗಿನ ಪ್ರದೇಶಗಳಲ್ಲಿ ವಾಸ ಮಾಡುವ ಸಮುದಾಯಗಳ ಸುರಕ್ಷತೆಯ ದೃಷ್ಟಿಯಿಂದ ವಿಶ್ವಾಸಾರ್ಹವಾದ ತುರ್ತು ಸುರಕ್ಷತಾ ಕ್ರಮಗಳು ಯಾವುದೇ ರಾಜಿ ಇಲ್ಲದೆ ಆಗಬೇಕಾದ ಕೆಲಸಗಳು. ರಾಷ್ಟ್ರದಾದ್ಯಂತ ಅಣೆಕಟ್ಟುಗಳ ತಪಾಸಣೆ ಮೂಲಕ ಈ ಕೆಲಸವು ಶುರು ಆಗಬೇಕು. ದುರಂತ ಸಂಭವಿಸುವವರೆಗೆ ಕಾಯುತ್ತ ಕೂರಬಾರದು. ಈ ಕೆಲಸ ಆಗಬೇಕು ಎಂದಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಾಲುದಾರ ಆಗಿ ಮುಂದಡಿ ಇರಿಸಬೇಕು. ಸಹಕಾರ ಒಕ್ಕೂಟ ವ್ಯವಸ್ಥೆಯ ಆಶಯದಿಂದ ಕೆಲಸ ಮಾಡಬೇಕು. ಅಣೆಕಟ್ಟುಗಳು ಆಧುನಿಕ ಭಾರತದ ಮಂದಿರಗಳು ಎಂದು ಒಂದು ಕಾಲದಲ್ಲಿ ಹೇಳಲಾಗಿತ್ತು. ಅವುಗಳಿಗೆ ವಯಸ್ಸಾದಂತೆಲ್ಲ, ಅವುಗಳ ನಿರ್ವಹಣೆಗೆ ಗಮನ ನೀಡುವುದು ಜನರ ಮತ್ತು ಜೀವನೋಪಾಯದ ಸುರಕ್ಷತೆಯ ದೃಷ್ಟಿಯಿಂದ ಮಹತ್ವದ್ದಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.