ಅತ್ಯಂತ ಭಾರವಾದ ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಇನ್ನೊಂದು ದಾಖಲೆ ನಿರ್ಮಿಸಿದೆ. ಭಾರತದಿಂದ ಉಡಾವಣೆ ಆಗಿರುವ ಉಪಗ್ರಹಗಳ ಪೈಕಿ ಅತ್ಯಂತ ಭಾರದ ಈ ಉಪಗ್ರಹವನ್ನು ಎಲ್ವಿಎಂ3 ರಾಕೆಟ್ ಮೂಲಕ ಕಕ್ಷೆಗೆ ಸೇರಿಸಲಾಗಿದೆ. ಉಪಗ್ರಹವು ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ. ಇದು ಸರಿಸುಮಾರು 6,100 ಕೆ.ಜಿ. ತೂಕದ, ಅಮೆರಿಕದ ಕಂಪನಿಯೊಂದರ ಉಪಗ್ರಹ. ಈ ಉಪಗ್ರಹದ ಯಶಸ್ವಿ ಉಡಾವಣೆಯೊಂದಿಗೆ, ಅತ್ಯಂತ ಸಂಕೀರ್ಣವಾದ ವೈಜ್ಞಾನಿಕ, ಎಂಜಿನಿಯರಿಂಗ್ ಕಾರ್ಯಗಳನ್ನು ತಾನು ಬಹಳ ಕಡಿಮೆ ಖರ್ಚಿನಲ್ಲಿ ನಿರ್ವಹಿಸಬಲ್ಲೆ ಎಂಬುದನ್ನು ಇಸ್ರೊ ಇತರ ದೇಶಗಳಿಗೆ ಸಾರಿ ಹೇಳಿದಂತಾಗಿದೆ. ಹೊಸದಾದ ಈ ರಾಕೆಟ್ ಬಳಸಿ ಇಸ್ರೊ ವಾಣಿಜ್ಯ ಉದ್ದೇಶದ ಉಪಗ್ರಹವೊಂದನ್ನು ನಭಕ್ಕೆ ಹಾರಿಸಿರುವುದು ಇದು ಮೂರನೆಯ ಬಾರಿ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತವು ಈಗ ಪ್ರಬಲ ಶಕ್ತಿಯಾಗಿದೆ, ಬಾಹ್ಯಾಕಾಶದ ಬಗ್ಗೆ ಅತ್ಯಂತ ವಿಸ್ತೃತವಾದ ಸಂಶೋಧನೆಗಳನ್ನು ಕೈಗೊಳ್ಳಲು ಹಾಗೂ ಮನುಷ್ಯ ಸಹಿತ ಬಾಹ್ಯಾಕಾಶ ಪಯಣಗಳಿಗೆ ಅಗತ್ಯವಿರುವ ಅತ್ಯಂತ ಭಾರದ ಉಪಗ್ರಹಗಳನ್ನು ಕೂಡ ನಿಖರವಾಗಿ ಕಕ್ಷೆಗೆ ಸೇರಿಸುವ ಪರಿಣತಿಯನ್ನು ಅದು ಸಾಧಿಸಿದೆ ಎಂಬುದನ್ನು ಈ ಉಡ್ಡಯನವು ಸಾಬೀತು ಮಾಡಿದಂತಿದೆ. ಇಸ್ರೊ ಇದುವರೆಗೆ 34 ದೇಶಗಳಿಗೆ ಸೇರಿದ ಒಟ್ಟು 434 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಈ ಉಡ್ಡಯನಗಳ ಮೂಲಕ ಇಸ್ರೊ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತ ಬಂದಿದೆ, ಈ ಮೂಲಕ ಸಂಸ್ಥೆಯು ಬಹಳ ವಿಶ್ವಾಸಾರ್ಹವಾದ ಬಾಹ್ಯಾಕಾಶ ಶಕ್ತಿಯಾಗಿ ಬೆಳೆದುನಿಂತಿದೆ.

ಇಸ್ರೊ ಈ ವರ್ಷದಲ್ಲಿ ಹಲವು ಮುನ್ನಡೆ ಸಾಧಿಸಿದೆ, ಸುಧಾರಣೆಗಳನ್ನು ಕಂಡಿದೆ. ಎರಡು ಉಪಗ್ರಹಗಳನ್ನು ಕಕ್ಷೆಯಲ್ಲಿಯೇ ಜೋಡಿಸುವ ಹಾಗೂ ಜೋಡಣೆ ಆಗಿರುವ ಉಪಗ್ರಹಗಳನ್ನು ಕಕ್ಷೆಯಲ್ಲಿಯೇ ಬೇರ್ಪಡಿಸುವ ಸ್ಪೇಡೆಕ್ಸ್ ಯೋಜನೆಯನ್ನು ಯಶಸ್ವಿಯಾಗಿ ಕೈಗೊಂಡಿತು. ಈ ಸಾಮರ್ಥ್ಯ ವನ್ನು ಸಿದ್ಧಸಿಕೊಂಡಿದ್ದು ಇಸ್ರೊಗೆ ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಇಳಿಯುವುದು ಹಾಗೂ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಕಟ್ಟಿಕೊಳ್ಳುವುದು ಸೇರಿದಂತೆ ಇತರ ಹಲವು ಯೋಜನೆಗಳ ಅನುಷ್ಠಾನದಲ್ಲಿ ನೆರವಿಗೆ ಬರಲಿದೆ. ಜುಲೈನಲ್ಲಿ ಅಮೆರಿಕದ ಜೊತೆಗೂಡಿ ಕೈಗೊಂಡ ನಿಸಾರ್ ಯೋಜನೆಯಲ್ಲಿಯೂ ಇಸ್ರೊ ಯಶಸ್ಸು ಸಾಧಿಸಿತು. ಇದು ಬಾಹ್ಯಾಕಾಶದಿಂದ ಭೂಮಿಯ ಚಿತ್ರಗಳನ್ನು ಅತ್ಯಂತ ಸ್ಪಷ್ಟವಾಗಿ ಸೆರೆಹಿಡಿಯಿತು. ಈ ಚಿತ್ರಗಳು ಇದುವರೆಗೆ ಬಾಹ್ಯಾಕಾಶದಿಂದ ಸೆರೆಹಿಡಿದಿರುವ ಚಿತ್ರಗಳ ಪೈಕಿ ಅತ್ಯಂತ ವಿವರವಾದವು ಎನ್ನಲಾಗಿದೆ. ನವೆಂಬರ್ನಲ್ಲಿ ಎಲ್ವಿಎಂ3–ಎಂ5 ಯೋಜನೆಯ ಮೂಲಕ 4,400 ಕೆ.ಜಿ. ತೂಕದ ಇನ್ನೊಂದು ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು. ಇದು ಭಾರತದಲ್ಲಿ ಉಡಾವಣೆ ಆದ ಅದುವರೆಗಿನ ಅತ್ಯಂತ ಭಾರದ ಉಪಗ್ರಹವಾಗಿತ್ತು. ಬಹಳ ಭಾರದ ಮೂರು ಉಪಗ್ರಹಗಳನ್ನು ಕಕ್ಷೆ ಯಶಸ್ವಿಯಾಗಿ ಸೇರಿಸುವ ಮೂಲಕ ಇಸ್ರೊ ಸಂಸ್ಥೆಯು ತನ್ನ ತಾಂತ್ರಿಕ ಪರಿಣತಿ, ಸಾಮರ್ಥ್ಯವನ್ನು ಮುಂದೆ ಇನ್ನಷ್ಟು ಹೆಚ್ಚಿಸಿಕೊಳ್ಳುವ ಉಮೇದಿನಲ್ಲಿ ಇರುವಂತಿದೆ.

ಎಲ್ವಿಎಂ3 ಯೋಜನೆ ಯಶಸ್ವಿಯಾಗಿದೆ ಎಂದು ಬಣ್ಣಿಸಿರುವ ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ಅವರು, ಸಂಸ್ಥೆಯ ಮುಂದಿನ ಕೆಲವು ತಿಂಗಳ ಕಾರ್ಯಸೂಚಿಗಳನ್ನು ಹಂಚಿಕೊಂಡಿದ್ದಾರೆ. ಮುಂದಿನ ವರ್ಷದಲ್ಲಿ ಸಂಸ್ಥೆಯು ಮಾನವ ರಹಿತ ಗಗನಯಾನ ಯೋಜನೆಗೆ ಚಾಲನೆ ನೀಡಲಿದೆ. ಇದು ದೇಶದ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಹೊಸದೊಂದು ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದೆ. ಸಂಸ್ಥೆಯು ಮಾರ್ಚ್ಗೆ ಮೊದಲು ಆರು ಹೊಸ ಉಡ್ಡಯನಗಳ ಸಿದ್ಧತೆ ನಡೆಸಿದೆ. ದೇಶದಲ್ಲೇ ಅಭಿವೃದ್ಧಿಪಡಿಸಿರುವ 30 ಮುಖ್ಯ ತಂತ್ರಜ್ಞಾನವನ್ನು ಪ್ರದರ್ಶಿಸುವ ಹಾಗೂ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸುವ ಆಲೋಚನೆಯೂ ಇಸ್ರೊಗೆ ಇದೆ. ಈಗ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಿಗೂ ಉತ್ತೇಜನ ನೀಡಲಾಗುತ್ತಿದೆ. ಹೀಗಾಗಿ ಹಲವು ನವೋದ್ಯಮಗಳು ಕೂಡ ಜನ್ಮತಾಳಿವೆ. ದೇಶದ ಮೊದಲ ಖಾಸಗಿ ರಾಕೆಟ್ ಉಡ್ಡಯನ ಯೋಜನೆಯಲ್ಲಿ ಕೊಡುಗೆ ಹೊಂದಿರುವ ಸ್ಕೈರೂಟ್ ಏರೋಸ್ಪೇಸ್ ಕಂಪನಿಯು ತನ್ನ ವಿಕ್ರಮ್–1 ರಾಕೆಟ್ನ ಮೊದಲ ಉಡ್ಡಯನವನ್ನು ಮುಂಬರುವ ತಿಂಗಳುಗಳಲ್ಲಿ ನಡೆಸುವ ಉದ್ದೇಶ ಹೊಂದಿದೆ. ಮಾನವ ಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳಬೇಕು ಎಂದು ಭಾರತ ಹೊಂದಿರುವ ಮಹತ್ವಾಕಾಂಕ್ಷೆಯನ್ನು ಸಾಕಾರ ಮಾಡಿಕೊಳ್ಳುವಲ್ಲಿ ಎಲ್ವಿಎಂ3 ಯೋಜನೆಯು ಬಹಳ ಮುಖ್ಯವಾದ ಹೆಜ್ಜೆಯಾಗಲಿದೆ ಎಂದು ನಾರಾಯಣನ್ ಹೇಳಿದ್ದಾರೆ. ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ 2033ರ ವೇಳೆಗೆ ಶೇ 10ರಷ್ಟು ಪಾಲು ಹೊಂದುವ ಗುರಿಯನ್ನು ತಲುಪುವ ಹಾದಿಯಲ್ಲಿ ಇಸ್ರೊ ಇದೆ ಎಂಬುದು ಕೂಡ ಈ ಯಶಸ್ಸುಗಳು ಹೇಳುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.