ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ಏಳನೆಯ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಪರಿಷ್ಕರಿಸಿದೆ. ದೆಹಲಿಯ ಸುಲ್ತಾನರು ಮತ್ತು ಮೊಘಲರ ಕುರಿತ ಭಾಗವನ್ನು ಪಠ್ಯಪುಸ್ತಕದಿಂದ ಕೈಬಿಟ್ಟಿದೆ. ಇವುಗಳ ಬದಲಿಗೆ ಭಾರತದ ಪ್ರಾಚೀನ ರಾಜವಂಶಗಳು, ಮಹಾ ಕುಂಭಮೇಳ, ಯಾತ್ರಾಸ್ಥಳಗಳ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಇತಿಹಾಸ, ಭೂಗೋಳಶಾಸ್ತ್ರ ಮತ್ತು ಪೌರನೀತಿಗೆ ಪ್ರತ್ಯೇಕ ಪಠ್ಯಪುಸ್ತಕ ಇದ್ದಿದ್ದನ್ನು ಬದಲಿಸಿ, ‘ಎಕ್ಸ್ಪ್ಲೋರಿಂಗ್ ಸೊಸೈಟಿ– ಇಂಡಿಯಾ ಆ್ಯಂಡ್ ಬಿಯಾಂಡ್’ (ಸಮಾಜದ ಅನ್ವೇಷಣೆ– ಭಾರತ ಮತ್ತು ಅದರ ಆಚೆಗೆ) ಎಂಬ ಒಂದೇ ಪಠ್ಯಪುಸ್ತಕವನ್ನು ನೀಡಲಾಗಿದೆ. ಹೊಸ ಪಠ್ಯಪುಸ್ತಕದಲ್ಲಿ ಇತಿಹಾಸದ ಪಾಠಗಳು ಮೂರು ಮತ್ತು ಆರನೆಯ ಶತಮಾನದ ನಡುವಿನ ಗುಪ್ತರ ಕಾಲಕ್ಕೆ ಕೊನೆಗೊಳ್ಳುತ್ತವೆ. ದೆಹಲಿಯ ಸುಲ್ತಾನರು ಮತ್ತು ಮೊಘಲರ ಅವಧಿ ಕುರಿತ ಪಾಠಗಳನ್ನು ಕೈಬಿಡಲಾಗಿದೆ. ಹೊಸ ಪಠ್ಯಪುಸ್ತಕದಲ್ಲಿನ ಅಧ್ಯಾಯಗಳು ಪ್ರಾಚೀನ ಭಾರತ, ಶಾತವಾಹನರು, ಚೋಳರು, ಪಾಂಡ್ಯರು, ಮೌರ್ಯ ಸಾಮ್ರಾಜ್ಯ, ಸಾಮ್ರಾಟ್ ಅಶೋಕನ ಕಾಲದ ರಾಜಕೀಯ ಸ್ಥಿತಿಯ ಬಗ್ಗೆ ಹೆಚ್ಚು ಗಮನ ನೀಡಿವೆ.

ಇತಿಹಾಸಕ್ಕೆ ಸಂಬಂಧಿಸಿದ ಹಳೆಯ ಪಠ್ಯಪುಸ್ತಕ 7ನೇ ಶತಮಾನದ ನಂತರದ ವಿವರಗಳನ್ನು ಒಳಗೊಂಡಿತ್ತು. ಅದು ದೆಹಲಿಯ ಸುಲ್ತಾನರು, ಮೊಘಲ್ ಆಡಳಿತಗಾರರು, ಅವರ ಆಡಳಿತ ವ್ಯವಸ್ಥೆ ಒಳಗೊಂಡಂತೆ ಮಧ್ಯಯುಗದ ಬಗ್ಗೆ ವಿವರ ಒಳಗೊಂಡಿತ್ತು. ಆದರೆ ಹೊಸ ಪಠ್ಯಪುಸ್ತಕವು ಭಾರತ ಮತ್ತು ವಿಶ್ವದ ಐದು ಅಂಶಗಳ ಬಗ್ಗೆ ಗಮನ ಹರಿಸಿದೆ. ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಜ್ಞಾನ ಸಂಪ್ರದಾಯಗಳು, ಆಡಳಿತ ಮತ್ತು ಪ್ರಜಾತಂತ್ರ, ನಮ್ಮ ಸುತ್ತಲಿನ ಆರ್ಥಿಕ ಜೀವನ ಸೇರಿದಂತೆ ಐದು ಅಂಶಗಳ ಬಗ್ಗೆ ಗಮನ ನೀಡಿದೆ. ಧಾರ್ಮಿಕ ಸ್ಥಳಗಳ ಬಗ್ಗೆ ‘ನೆಲವು ಪವಿತ್ರವಾಗುವುದು ಹೇಗೆ’ ಎಂಬ ಹೆಸರಿನ ಹೊಸ ಪಾಠವೊಂದು ಇದೆ. 66 ಕೋಟಿ ಜನರು ಭಾಗಿಯಾಗಿದ್ದರು ಎಂದು ಹೇಳಲಾಗಿರುವ ಕುಂಭಮೇಳದ ಬಗ್ಗೆಯೂ ವಿವರ ಇದೆ. ಇದು ಪಠ್ಯಪುಸ್ತಕದ ಮೊದಲ ಭಾಗ ಮಾತ್ರ, ಮುಂದಿನ ಭಾಗದಲ್ಲಿ ಹೆಚ್ಚಿನ ಅಧ್ಯಾಯಗಳು ಇರುತ್ತವೆ ಎಂದು ಎನ್ಸಿಇಆರ್ಟಿ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಈಗ ಕೈಬಿಟ್ಟಿರುವ ಭಾಗಗಳನ್ನು ಪಠ್ಯಪುಸ್ತಕದ ಎರಡನೆಯ ಭಾಗದಲ್ಲಿ ಅಳವಡಿಸಲಾಗುತ್ತದೆಯೇ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿಲ್ಲ. ಎರಡನೆಯ ಭಾಗವು ಈ ವರ್ಷದಲ್ಲಿ ಮುಂದಿನ ದಿನಗಳಲ್ಲಿ ಹೊರಬರುವ ನಿರೀಕ್ಷೆ ಇದೆ. ಮೊಘಲರ ಕಾಲದ ಪಾಠವನ್ನು ಕೈಬಿಟ್ಟಿಲ್ಲ, ಪುನರಾವರ್ತನೆಗಳನ್ನು ಮಾತ್ರ ಕೈಬಿಡಲಾಗಿದೆ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಕಾಂತ ಮಜುಂದಾರ್ ಅವರು ಹೇಳಿದ್ದಾರೆ.

ಪಠ್ಯಪುಸ್ತಕದ ಮೊದಲ ಭಾಗದಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಮಹತ್ವದ ಕಾಲಘಟ್ಟವೊಂದನ್ನು ಕೈಬಿಡಲಾಗಿದೆ, ಅದು ಪಠ್ಯಪುಸ್ತಕದ ಎರಡನೆಯ ಭಾಗದಲ್ಲಿ ಸೇರ್ಪಡೆ ಆಗುತ್ತದೆ ಎಂಬುದು ಖಚಿತವಿಲ್ಲ ಎನ್ನುವುದು ವಾಸ್ತವ. ಈಗಿನ ಆಡಳಿತಾರೂಢರು ಪಠ್ಯಪುಸ್ತಕಗಳನ್ನು ಸೈದ್ಧಾಂತಿಕ ಹಾಗೂ ರಾಜಕೀಯ ಕದನಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತೀಯ ಮೌಲ್ಯಗಳಿಗೆ ಆದ್ಯತೆ ನೀಡುತ್ತದೆ ಎಂಬುದು ಪಠ್ಯಪುಸ್ತಕಗಳಲ್ಲಿ ಕಾಲಕಾಲಕ್ಕೆ ಬದಲಾವಣೆ ತರುವುದಕ್ಕೆ ನೆಪವಾಗಿ ಒದಗಿಬಂದಿದೆ. ಎನ್ಸಿಇಆರ್ಟಿ ಪಠ್ಯಪುಸ್ತಕಗಳು ಮತ್ತೆ ಮತ್ತೆ ಪರಿಷ್ಕರಣೆ ಕಂಡಿವೆ. ಪುನರಾವರ್ತನೆಯನ್ನು ಇಲ್ಲವಾಗಿಸುವ ನೆಪ ಹೇಳಿ ಪಠ್ಯಗಳನ್ನು ಬದಲಾಯಿಸಲಾಗಿದೆ. ಬಾಬರಿ ಮಸೀದಿ ಧ್ವಂಸ, 1975ರಲ್ಲಿ ಜಾರಿಯಾದ ತುರ್ತು ಪರಿಸ್ಥಿತಿ, ದಲಿತ ಚಳವಳಿಗಳು, ನಕ್ಸಲ್ವಾದ, ಕೋಮು ಹಿಂಸಾಚಾರಗಳು ಮತ್ತು 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಉಲ್ಲೇಖಗಳನ್ನು ಪರಿಷ್ಕರಿಸಲಾಗಿದೆ, ಅವುಗಳಿಗೆ ಕತ್ತರಿ ಹಾಕಲಾಗಿದೆ ಅಥವಾ ತೆಗೆದುಹಾಕಲಾಗಿದೆ. ಪಠ್ಯಪುಸ್ತಕದ ಹೂರಣದ ಕುರಿತು ಸ್ಪಷ್ಟತೆ ಇಲ್ಲದಿರುವುದು, ಪಠ್ಯದ ಯಾವ ಭಾಗವನ್ನು ಕೈಬಿಡಬಹುದು ಅಥವಾ ಉಳಿಸಿಕೊಳ್ಳಬಹುದು ಎಂಬುದು ಸ್ಪಷ್ಟವಾಗದೇ ಇರುವುದು, ಯಾವಾಗ ಮತ್ತು ಎಷ್ಟು ಹಂತಗಳಲ್ಲಿ ಆ ಕೆಲಸ ನಡೆಯಬಹುದು ಎಂಬುದು ಗೊತ್ತಾಗದೇ ಇರುವುದು ಪಠ್ಯಪುಸ್ತಕಗಳನ್ನು ಆಗಾಗ ಪರಿಷ್ಕರಿಸುವುದಕ್ಕಿಂತ ಹೆಚ್ಚಿನ ಕಳವಳ ಉಂಟುಮಾಡುವಂತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.