ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್ಇ) ಡಿಜಿಪಿ ಕೆ. ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ಈ ಬೆಳವಣಿಗೆ ಕರ್ನಾಟಕ ಪೊಲೀಸ್ ವ್ಯವಸ್ಥೆಗೆ ಆಘಾತ ತರುವ ವಿದ್ಯಮಾನವಾಗಿದೆ. ಸೋರಿಕೆಯಾಗಿರುವ ವಿಡಿಯೊಗಳಲ್ಲಿ ಸಮವಸ್ತ್ರದಲ್ಲಿರುವ ಅಧಿಕಾರಿಯು ತಮ್ಮ ಅಧಿಕೃತ ಕಚೇರಿಯಲ್ಲಿ ಮಹಿಳೆಯೊಂದಿಗೆ ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ಸನ್ನಿವೇಶಗಳಿವೆ. ಈ ಕೃತ್ಯಗಳು ಪರಸ್ಪರ ಸಮ್ಮತಿಯಿಂದ ನಡೆದಿರುವಂತೆ ಕಾಣಿಸಿದರೂ, ಸಂಭವಿಸಿರುವ ಘಟನೆ ನೈತಿಕವಾಗಿ ಹಾಗೂ ಕಾನೂನಿನ ದೃಷ್ಟಿಯಿಂದ ಒಪ್ಪಿಕೊಳ್ಳುವಂತಹದ್ದಲ್ಲ. ಅಖಿಲ ಭಾರತ ಸೇವಾ (ನಡವಳಿಕೆ) ನಿಯಮಾವಳಿಯ ‘ನಿಯಮ 3’, ಸೇವೆಯಲ್ಲಿರುವ ವ್ಯಕ್ತಿ ಉನ್ನತ ನೈತಿಕ ಮಾನದಂಡಗಳು, ಸಮಗ್ರತೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳುತ್ತದೆ. ಸಾರ್ವಜನಿಕ ಸೇವೆಯಲ್ಲಿ ಇರುವವರು ಅನುಚಿತ ನಡವಳಿಕೆಯಿಂದ ದೂರವಿರಬೇಕು ಎಂದೂ ನಿಯಮ ಹೇಳುತ್ತದೆ. ಈ ನಿಯಮಕ್ಕೆ ವಿರುದ್ಧವಾಗಿರುವ ಡಿಜಿಪಿ ಅವರ ನಡವಳಿಕೆ ನೈತಿಕ ಅಧಃಪತನದ ಸಂಕೇತವಾಗಿದೆ ಹಾಗೂ ಸೇವಾ ನಿಯಮಾವಳಿಯ ಗಂಭೀರ ಉಲ್ಲಂಘನೆಯಾಗಿದೆ. ಇಂತಹದ್ದೇ ನಡವಳಿಕೆಯ ಕಾರಣದಿಂದಾಗಿ ಅಲ್ಲದಿದ್ದರೂ, ಇದೇ ನಿಯಮದ ಅನ್ವಯ ಬಳ್ಳಾರಿಯ ಎಸ್ಪಿ ಪವನ್ ನೆಜ್ಜೂರ್ ಅವರನ್ನು ಇತ್ತೀಚೆಗಷ್ಟೇ ಅಮಾನತುಗೊಳಿಸಲಾಗಿತ್ತು. ಈ ಪ್ರತ್ಯೇಕ ಪ್ರಕರಣಗಳು, ಒಟ್ಟಾರೆ ಪೊಲೀಸ್ ಇಲಾಖೆಯಲ್ಲಿನ ಸಾಂಸ್ಥಿಕ ಶಿಸ್ತಿನ ಕುಸಿತವನ್ನು ಸೂಚಿಸುವಂತಿವೆ.

ರಾಜಕಾರಣಿಗಳ ಅನೈತಿಕ ವರ್ತನೆಯ ವಿಡಿಯೊಗಳು ರಾಜ್ಯಕ್ಕೆ ಅಪರೂಪವೇನೂ ಅಲ್ಲ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಕೆಲವು ರಾಜಕಾರಣಿಗಳ ಖಾಸಗಿ ಕ್ಷಣಗಳ ವಿಡಿಯೊಗಳು ಬಹಿರಂಗ ಗೊಂಡಿವೆ. ತಂತ್ರಜ್ಞಾನ ಬಳಸಿ ತಿರುಚಿದ ವಿಡಿಯೊಗಳು ಹಾಗೂ ಕೃತಕ ಬುದ್ಧಿಮತ್ತೆ ಬಳಸಿ ರೂಪಿಸಿದ ವಿಡಿಯೊಗಳು ಎಂದು ಹೇಳುವ ಮೂಲಕ ರಾಜಕಾರಣಿಗಳು ತಮ್ಮ ವಿರುದ್ಧದ ಆರೋಪಗಳಿಂದ ಪಾರಾಗಿದ್ದಾರೆ. ಪ್ರಸ್ತುತ, ಡಿಜಿಪಿ ರಾಮಚಂದ್ರ ರಾವ್ ಅವರು ಕೂಡ ಇದೇ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ, ಇಂಥವಾದದಲ್ಲಿ ಇರಬಹುದಾದ ಪೊಳ್ಳುತನ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಾಬೀತಾಗಿದೆ. ಅತ್ಯಾಧುನಿಕ ವಿಧಿವಿಜ್ಞಾನ
ತಂತ್ರಜ್ಞಾನ ಬಳಸಿ, ಆರೋಪಿಯ ಅಪರಾಧ ಕೃತ್ಯಗಳನ್ನು ಸಂಶಯಕ್ಕೆ ಆಸ್ಪದವಿಲ್ಲದಂತೆ ಪೊಲೀಸರು ಸಾಬೀತುಪಡಿಸಿದ್ದಾರೆ. ಆ ಪ್ರಕರಣದಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆಯೂ ಆಗಿದೆ. ಆ ಕಠಿಣ ಪರಿಶೋಧನೆಯ ತನಿಖಾ ವಿಧಾನವನ್ನು, ರಾವ್ ಅವರ ಪ್ರಕರಣದಲ್ಲೂ ಅನುಸರಿಸುವ ಮೂಲಕ ವಿಡಿಯೊಗಳ ಅಸಲೀತನವನ್ನು ಒರೆಗೆ ಹಚ್ಚಬಹುದಾಗಿದೆ. ಈ ಅಧಿಕಾರಿ ವಿವಾದಾತೀತರೇನೂ ಅಲ್ಲ. 2014ರಲ್ಲಿ ಬೆಂಗಳೂರು ದಕ್ಷಿಣ ವಲಯದ ಐಜಿಪಿ ಆಗಿದ್ದಾಗ, ನಗದು ವಶ ಪ್ರಕರಣವೊಂದರಲ್ಲಿ ಇವರ ಹೆಸರು ಪ್ರಸ್ತಾಪವಾಗಿತ್ತು. ಕೇರಳಕ್ಕೆ ಬಸ್ಸಿನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ₹2.25 ಕೋಟಿ ವಶಪಡಿಸಿಕೊಂಡಿದ್ದರೂ, ಎಫ್ಐಆರ್ನಲ್ಲಿ ₹20 ಲಕ್ಷವನ್ನಷ್ಟೇ ತೋರಿಸಲಾಗಿದೆ ಎಂದು ಹೇಳಲಾಗಿತ್ತು. ಪೊಲೀಸ್ ಪ್ರೋಟಕಾಲ್ ದುರುಪಯೋಗದೊಂದಿಗೆ ಚಿನ್ನ ಕಳ್ಳಸಾಗಣೆಯ ಆರೋಪದಲ್ಲಿ ಅವರ ಮಲಮಗಳನ್ನು ಇತ್ತೀಚೆಗಷ್ಟೇ ಬಂಧಿಸಲಾಗಿದೆ. ಈ ಪ್ರಕರಣಗಳು ಡಿಜಿಪಿ ಅವರ ಮೇಲಿನ ಪ್ರಸಕ್ತ ಆರೋಪಗಳನ್ನು ಹೆಚ್ಚು ಸೂಕ್ಷ್ಮವಾಗಿ ನೋಡಲು ಒತ್ತಾಯಿಸುವಂತಿವೆ.

ಉನ್ನತ ಪೊಲೀಸ್ ಅಧಿಕಾರಿಗಳ ಅಮಾನತು ಪ್ರಕರಣಗಳು ಹಾಗೂ ಪೊಲೀಸ್ ಇಲಾಖೆಯ ಕಾರ್ಯದಕ್ಷತೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಯನ್ನು ಒಟ್ಟಿಗೆ ಗಮನಿಸಬೇಕು. ಹಿರಿಯ ಪೊಲೀಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ, ಕಳೆದ ವರ್ಷ 88 ಪೊಲೀಸ್ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರುವುದನ್ನು ನಾಚಿಕೆಗೇಡು ಎಂದು ಕರೆದಿದ್ದಾರೆ. ಸ್ಥಳೀಯ ಪೊಲೀಸರ ಕಣ್ಣು ತಪ್ಪಿಸಿ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಮಾದಕ ವಸ್ತುಗಳ ದಂಧೆಯನ್ನು ಮಹಾರಾಷ್ಟ್ರ ಪೊಲೀಸರು ಪತ್ತೆಹಚ್ಚಿರುವುದರ ಬಗ್ಗೆ ಮುಜುಗರ ವ್ಯಕ್ತಪಡಿಸಿದ್ದಾರೆ. ಹಿರಿಯ ಅಧಿಕಾರಿಗಳ ದುರ್ವರ್ತನೆಯ ಕೃತ್ಯಗಳಿಗೆ ಅಮಾನತು ಮತ್ತು ಇಲಾಖಾ ತನಿಖೆಯಾಚೆಗೆ ಕಠಿಣ ದಂಡನೆ ಆಗದಿರುವುದೇ ಪೊಲೀಸ್ ಇಲಾಖೆಯಲ್ಲಿ ಸಮಸ್ಯೆಗಳ ಮುಂದುವರಿಕೆಗೆ ಮುಖ್ಯ ಕಾರಣವಾಗಿದೆ. ಪೊಲೀಸ್ ಅಧಿಕಾರಿಗಳ ಹೊಣೆಗಾರಿಕೆ ನಿರ್ಣಾಯಕ ಆಗುವುದರ ಬದಲು ಎಲ್ಲಿಯವರೆಗೆ ಐಚ್ಛಿಕವಾಗಿಯೇ ಉಳಿಯವುದೋ ಅಲ್ಲಿಯವರೆಗೆ, ಇಲಾಖೆಯ ಮೇಲಿನ ಸಾರ್ವಜನಿಕರ ವಿಶ್ವಾಸ ಇಳಿಮುಖವಾಗಿಯೇ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.