ಅರಾವಳಿ ಪರ್ವತಶ್ರೇಣಿಯ ಕುರಿತಾದ ಕೇಂದ್ರ ಪರಿಸರ ಸಚಿವಾಲಯದ ವ್ಯಾಖ್ಯೆಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿರುವುದು ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಗಣಿಗಾರಿಕೆ, ರಿಯಲ್ ಎಸ್ಟೇಟ್ ಸೇರಿದಂತೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಚಟುವಟಿಕೆಗಳು ಅರಾವಳಿ ಶ್ರೇಣಿಯ ಬಹುತೇಕ ಬೆಟ್ಟಗಳನ್ನು ಆಪೋಶನ ತೆಗೆದುಕೊಳ್ಳಬಹುದೆನ್ನುವ ಆತಂಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಪರಿಸರ ಸಚಿವಾಲಯದ ಸಮಿತಿ ಮಾಡಿರುವ ಶಿಫಾರಸಿನಂತೆ, ನೂರು ಮೀಟರ್ ಅಥವಾ ಇನ್ನೂ ಎತ್ತರದ ಭೂರಚನೆಗಳನ್ನಷ್ಟೇ ಅರಾವಳಿ ಶ್ರೇಣಿಯಲ್ಲಿನ ಸಂರಕ್ಷಿತ ಪ್ರದೇಶಗಳಾಗಿ ಗುರ್ತಿಸಬಹುದಾಗಿದೆ. 1980ರ ಅರಣ್ಯ (ಸಂರಕ್ಷಣಾ) ಕಾಯ್ದೆ ಮತ್ತು ಅರಣ್ಯ ಸಂರಕ್ಷಣಾ ನಿಯಮಗಳ (2022) ತಿದ್ದುಪಡಿ, ನೂರು ಮೀಟರ್ಗೂ ಕಡಿಮೆ ಎತ್ತರದ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದೆ. ಈ ಮಾನದಂಡದ ಅನ್ವಯ, 12,081 ಬೆಟ್ಟಗಳಲ್ಲಿ ಬರೀ 1,050 ಬೆಟ್ಟಗಳಷ್ಟೇ ಗಣಿಗಾರಿಕೆಯಿಂದ ರಕ್ಷಣೆ ಪಡೆಯಲಿವೆ. ರಾಜಸ್ಥಾನದಲ್ಲಿ ಹಬ್ಬಿಕೊಂಡಿರುವ ಅರಾವಳಿ ಶ್ರೇಣಿಯಲ್ಲಿ ಸುಮಾರು ಶೇ 90ರಷ್ಟು ಬೆಟ್ಟಗಳು 30ರಿಂದ 80 ಮೀಟರ್ ಎತ್ತರ ಹೊಂದಿವೆ. ಗುಜರಾತ್, ರಾಜಸ್ಥಾನ, ದೆಹಲಿ ಮತ್ತು ಹರಿಯಾಣಗಳಲ್ಲಿ ಹಬ್ಬಿಕೊಂಡಿರುವ ಬೆಟ್ಟಸಾಲು, ವಿಶ್ವದಲ್ಲೇ ಅತ್ಯಂತ ಹಳೆಯದಾದ ಪರ್ವತಶ್ರೇಣಿಗಳಲ್ಲೊಂದು ಎನ್ನುವ ಹಿರಿಮೆ ಹೊಂದಿದೆ. ಹಸುರು ಶ್ವಾಸಕೋಶಗಳೆಂದು ಗುರ್ತಿಸಲಾಗಿರುವ ಪರ್ವತಶ್ರೇಣಿ, ಜೀವವೈವಿಧ್ಯದ ತೊಟ್ಟಿಲಾಗಿದೆ, ಜಲಸಂರಕ್ಷಣೆಯ ತಾಣವೂ ಆಗಿದೆ ಹಾಗೂ ತಾನು ಹಬ್ಬಿ ಕೊಂಡಿರುವ ಪ್ರದೇಶ ಮರಳುಗಾಡು ಆಗದಿರುವಂತೆ ರಕ್ಷಿಸುತ್ತಿದೆ.

ಅರಾವಳಿ ಪರ್ವತಶ್ರೇಣಿಯ ಶೇ 0.19 ಪ್ರದೇಶವನ್ನಷ್ಟೇ ಗಣಿಗಾರಿಕೆಗೆ ಬಳಸಿಕೊಳ್ಳಲಾಗುವುದು ಹಾಗೂ ವಿಸ್ತೃತ ಅಧ್ಯಯನದ ನಂತರವಷ್ಟೇ ಗಣಿಗಾರಿಕೆಗೆ ಹೊಸ ಪರವಾನಗಿಗಳನ್ನು ನೀಡಲಾಗು ವುದು ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ. ಆದರೆ, ಸಚಿವರ ಭರವಸೆ ಪರಿಸರ ಕಾರ್ಯಕರ್ತರ ಆತಂಕಗಳನ್ನು ಶಮನಗೊಳಿಸಿಲ್ಲ. ಮರುವ್ಯಾಖ್ಯಾನಕ್ಕೆ ಒಳಪಟ್ಟಿ ರುವ ಪ್ರದೇಶದಲ್ಲಿ ಗಣಿಗಾರಿಕೆ, ನಿರ್ಮಾಣ ಮತ್ತಿತರ ವಾಣಿಜ್ಯ ಚಟುವಟಿಕೆಗಳು ವ್ಯಾಪಕವಾಗಿ ನಡೆಯುವ ಆತಂಕ ಎದುರಾಗಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕೃಪಾಪೋಷಣೆಯಲ್ಲಿ ಈಗಾಗಲೇ ಅಕ್ರಮ ಗಣಿಗಾರಿಕೆ ಅರಾವಳಿ ಶ್ರೇಣಿಯಲ್ಲಿ ನಡೆಯುತ್ತಿದ್ದು, ಅದಕ್ಕೆ ಕಾನೂನು ಸಮ್ಮತಿ ಒದಗಿಸಿಕೊಡುವ ಪ್ರಯತ್ನಗಳು ನಡೆಯುತ್ತಿವೆ. ಅಕ್ರಮ ಗಣಿಗಾರಿಕೆಯಲ್ಲಿ ಕೆಲವೆಡೆ ಪರ್ವತಗಳು ಶಿಥಿಲವಾಗಿರುವುದು ಜನಜೀವನದ ಮೇಲೆ ಪ್ರಭಾವ ಬೀರಿದೆ. ಪರ್ವತಶ್ರೇಣಿಯನ್ನು ಅಪಮೌಲ್ಯಗೊಳಿಸುವ ಈ ಎಲ್ಲ ಪ್ರಯತ್ನಗಳ ವಿರುದ್ಧದ ಸಾರ್ವಜನಿಕ ಪ್ರತಿಭಟನೆಗಳು ಹೆಚ್ಚಾಗುತ್ತಿವೆ.

ಸುಪ್ರೀಂ ಕೋರ್ಟ್ ಈ ಮೊದಲು ಅರಾವಳಿ ಶ್ರೇಣಿಯ ಸಂರಕ್ಷಣೆಗೆ ಪೂರಕವಾದ ನಿರ್ದೇಶನಗಳನ್ನು ಹೊರಡಿಸಿತ್ತು. ಆ ಪ್ರದೇಶದಲ್ಲಿ ಪರಿಸರವನ್ನು ಗಾಸಿಗೊಳಿಸುವ ಯಾವುದೇ ಚಟುವಟಿಕೆಗಳಿಗೆ ಅನುಮತಿ ನೀಡದಂತೆ ಸರ್ಕಾರಗಳು ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತ್ತು. ಈಗ ಬದಲಾದ ಸಂದರ್ಭದಲ್ಲಿ, ಪರಿಸರ ಸಚಿವಾಲಯದ ಸಮಿತಿಯ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಅರಾವಳಿ ಪರಿಸರಕ್ಕೆ ಸಂಬಂಧಿಸಿದ ವಾಸ್ತವ ಸ್ಥಿತಿಯನ್ನು ಸುಪ್ರೀಂ ಕೋರ್ಟ್ನಿಂದ ಮರೆಮಾಚಲಾಗಿದೆ ಎಂದು ಹೇಳಲಾಗುತ್ತಿದೆ. ಪರಿಸರ ಸಚಿವಾಲಯದ ಸಮಿತಿಯು ‘ಫಾರೆಸ್ಟ್ ಸರ್ವೆ ಆಫ್ ಇಂಡಿಯಾ’ ರೂಪಿಸಿದ ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದೂ ಟೀಕೆಗಳಿಗೆ ಕಾರಣವಾಗಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಪ್ರಾಮಾಣಿಕ ಕಾಳಜಿ ಹೊಂದಿರದ ಸರ್ಕಾರ ಮತ್ತು ರಾಜಕಾರಣಿಗಳ ಕುರಿತು ಪರಿಸರ ಕಾರ್ಯಕರ್ತರು ಹಾಗೂ ಸಾರ್ವಜನಿಕರು ವಿಶ್ವಾಸ ಕಳೆದುಕೊಳ್ಳುತ್ತಿದ್ದು, ‘ಅರಾವಳಿ ಉಳಿಸಿ’ ಆಂದೋಲನ ಜನಪ್ರಿಯ ಚಳವಳಿಯಾಗಿ ಬಲಗೊಳ್ಳುತ್ತಿದೆ. ಜನಪರ ಚಳವಳಿಗಳನ್ನು ಪ್ರಜಾಸತ್ತಾತ್ಮಕ ಸರ್ಕಾರ ಕಡೆಗಣಿಸಬಾರದು. ಒಂದೆಡೆ, ದಕ್ಷಿಣ ಭಾರತದ ಜೀವನಾಡಿಗಳಂತಿರುವ ಪಶ್ಚಿಮ ಘಟ್ಟಗಳನ್ನು ಅಭಿವೃದ್ಧಿ ಚಟುವಟಿಕೆಗಳ ಹೆಸರಿನಲ್ಲಿ ಶಿಥಿಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ಯ ಬಗ್ಗೆ ಕರ್ನಾಟಕದಲ್ಲಿ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ಪಶ್ಚಿಮ ಘಟ್ಟ ಅಥವಾ ಅರಾವಳಿ ಶ್ರೇಣಿಗೆ ಅಪಾಯ ತರುವ ಪ್ರಯತ್ನಗಳನ್ನು ಸ್ಥಳೀಯ ಸಮಸ್ಯೆಗಳೆಂದು ಭಾವಿಸದೆ, ದೇಶದ ಪರಿಸರಕ್ಕೆ ಒದಗಿರುವ ಗಂಭೀರ ಬಿಕ್ಕಟ್ಟೆಂದು ಭಾವಿಸಬೇಕಾಗಿದೆ. ಈ ಸೂಕ್ಷ್ಮಪ್ರದೇಶಗಳನ್ನು ಗಾಸಿಗೊಳಿಸುವ ಪ್ರಯತ್ನಗಳು ಪರಿಸರಕ್ಕೆ ಸರಿಪಡಿಸಲಾಗದ ಹಾನಿ ಉಂಟುಮಾಡುತ್ತವೆ ಎನ್ನುವುದನ್ನು ಸರ್ಕಾರಗಳು ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.