ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತ್ವರಿತವಾಗಿ ಆಗಬೇಕಾದ ಸುಧಾರಣೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳು, ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೀವ್ರ ಒತ್ತಡ ಮತ್ತು ಅವರ ಆತ್ಮಹತ್ಯೆ ಪ್ರಕರಣಗಳ ಕುರಿತಾದ ಕಳವಳಕ್ಕೆ ಸ್ಪಂದನದಂತಿವೆ. ಈ ನಿರ್ದೇಶನಗಳು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಮೂಲ ಸೌಕರ್ಯಗಳ ಕೊರತೆಯು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದನ್ನು ಸೂಚಿಸುವಂತಿವೆ. ನ್ಯಾಯಾಲಯವೇ ರಚಿಸಿದ್ದ ಕಾರ್ಯಪಡೆಯೊಂದು ನೀಡಿರುವ ಮಧ್ಯಂತರ ವರದಿಯನ್ನು ಆಧರಿಸಿ, ವಿದ್ಯಾರ್ಥಿಗಳ ಹಿತಾಸಕ್ತಿಗೆ ಅನುಕೂಲ ಆಗುವಂತೆ ಸಾಂಸ್ಥಿಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ನಿರ್ದೇಶನಗಳನ್ನು ನೀಡಲಾಗಿದೆ. ಕಟ್ಟುನಿಟ್ಟಾದ ಹಾಜರಾತಿ ವ್ಯವಸ್ಥೆ, ಪಠ್ಯಕ್ರಮ ಮತ್ತು ಪರೀಕ್ಷಾ ಮೌಲ್ಯಮಾಪನಕ್ಕೆ ಸಂಬಂಧಿಸಿದ ತೊಡಕುಗಳು, ಕರ್ತವ್ಯ ನಿಯೋಜನೆ ಪ್ರಕ್ರಿಯೆಯಲ್ಲಿನ ಅಸಮರ್ಪಕತೆ, ಬೋಧಕ ಸಿಬ್ಬಂದಿ ಕೊರತೆ ಮತ್ತಿತರ ಸಂಗತಿಗಳು ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ ಉಂಟುಮಾಡುತ್ತಿದ್ದು, ರಚನಾತ್ಮಕ ಶೈಕ್ಷಣಿಕ ಜೀವನವನ್ನು ಖಾತರಿಪಡಿಸುವ ಅಗತ್ಯ ಇರುವುದನ್ನು ಕೋರ್ಟ್ ಗಮನಿಸಿದೆ.

ಸಂವಿಧಾನದ 142ನೇ ವಿಧಿಯನ್ವಯ ತನಗಿರುವ ಅಧಿಕಾರವನ್ನು ಬಳಸಿ, ಉನ್ನತ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅಗತ್ಯವಾದ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್
ನೀಡಿದೆ. ಇವುಗಳಲ್ಲಿ ಏಳು ನಿರ್ದೇಶನಗಳು ಆತ್ಮಹತ್ಯೆಗಳ ದಾಖಲೆ ನಿರ್ವಹಣೆ, ವರದಿ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದ್ದಾಗಿವೆ. ಉಳಿದ ಎರಡು ನಿರ್ದೇಶನಗಳು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸಂಬಂಧಿಸಿದ್ದಾಗಿವೆ. ಸರ್ಕಾರಿ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕ ಸಿಬ್ಬಂದಿಯನ್ನು ನಾಲ್ಕು ತಿಂಗಳಲ್ಲಿ ತುಂಬುವಂತೆ ಕೋರ್ಟ್ ಸೂಚಿಸಿದೆ. ಕುಲಪತಿ, ರಿಜಿಸ್ಟ್ರಾರ್ ಹುದ್ದೆಗಳು ಖಾಲಿಯಾದ ಒಂದು ತಿಂಗಳಲ್ಲಿ ತುಂಬುವುದನ್ನು ನಿಯಮಿತ ಪ್ರಕ್ರಿಯೆಯನ್ನಾಗಿ ಅನುಸರಿಸುವಂತೆಯೂ ಸೂಚಿಸಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ನಾಯಕತ್ವದ ಹುದ್ದೆಗಳು ದೀರ್ಘ ಕಾಲ ಖಾಲಿ ಉಳಿಯಬಾರದು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಹೇಳಿರುವುದನ್ನು ಕಾರ್ಯಪಡೆ ತನ್ನ ವರದಿಯಲ್ಲಿ ಉಲ್ಲೇಖಿಸಿರುವುದನ್ನು ಕೋರ್ಟ್ ಗಮನಿಸಿದೆ. ಬಾಕಿ ಉಳಿದಿರುವ ವಿದ್ಯಾರ್ಥಿ ವೇತನಗಳನ್ನು ನಾಲ್ಕು ತಿಂಗಳೊಳಗೆ ವಿತರಿಸುವಂತೆಯೂ ಕೋರ್ಟ್ ಹೇಳಿದೆ. ವಾಣಿಜ್ಯೀಕರಣ ಮತ್ತು ಖಾಸಗೀಕರಣದಿಂದಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ನೋಂದಣಿಗೆ ಸಂಬಂಧಿಸಿದಂತೆ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ, ಈ ಬೆಳವಣಿಗೆಯ ಜೊತೆಗೇ ವಿದ್ಯಾರ್ಥಿಗಳ ಮಾನಸಿಕ ಒತ್ತಡ, ಆತ್ಮಹತ್ಯೆಗಳು, ಶೋಷಣೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳನ್ನೂ ಗಮನಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅರ್ಧದಷ್ಟು ಉನ್ನತ ಹುದ್ದೆಗಳು ಖಾಲಿ ಉಳಿದಿವೆ ಎನ್ನಲಾಗಿದೆ. ಮತ್ತಷ್ಟು ವಿಳಂಬ ಮಾಡದೆ ಆ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಪ್ರಸ್ತುತ, ನ್ಯಾಯಾಲಯದ ಹಸ್ತಕ್ಷೇಪದಿಂದಾಗಿ, ಆ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಗೊತ್ತುಪಡಿಸಿರುವ ಕಡಿಮೆ ಅವಧಿಯಲ್ಲಿ ನಡೆಯಲಿದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ಕೆಲವು ರಾಜ್ಯಗಳಲ್ಲಿ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ಸಂಘರ್ಷದಲ್ಲಿ ಕುಲಪತಿಗಳ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಆ ಪ್ರಕ್ರಿಯೆ ಕಾನೂನು ಮತ್ತು ರಾಜಕೀಯ ಸವಾಲುಗಳನ್ನು ಎದುರಿಸುತ್ತಿದೆ. ಬೋಧಕ ಸಿಬ್ಬಂದಿಯ ನೇಮಕಾತಿಯು ಯುಜಿಸಿ ನಿಯಮಾವಳಿಯ ಪ್ರಕಾರವೇ ನಡೆಯಬೇಕಾಗಿರುವುದರಿಂದ, ನಿಗದಿತ ಮಾನದಂಡಗಳನ್ನು ಉಲ್ಲಂಘಿಸಿ ತರಾತುರಿಯಲ್ಲಿ ಪ್ರಕ್ರಿಯೆ ನಡೆಸುವುದಕ್ಕೆ ಸಾಧ್ಯವಿಲ್ಲ. ಆಯವ್ಯಯಕ್ಕೆ ಸಂಬಂಧಿಸಿದ ವಿಚಾರಗಳೂ ನೇಮಕಾತಿಗಳೊಂದಿಗೆ ತಳಕು ಹಾಕಿಕೊಂಡಿವೆ. ಹಾಗೆಯೇ, ಬೋಧನೆ ಮತ್ತು ಆಡಳಿತಾತ್ಮಕ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು ಇದ್ದಕ್ಕಿದ್ದಂತೆ ದೊರೆಯುತ್ತಾರೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಇವೆಲ್ಲ ಅಡೆತಡೆಗಳ ನಡುವೆಯೂ, ನ್ಯಾಯಾಲಯದ ನಿರ್ದೇಶನಗಳಲ್ಲಿ ವ್ಯಕ್ತವಾಗಿರುವ ದೃಢ ಉದ್ದೇಶವು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತ್ವರಿತ ಮತ್ತು ಪರಿಣಾಮಕಾರಿ ಬದಲಾವಣೆ ತರಬಹುದಾದ ಮೊದಲ ಹೆಜ್ಜೆ ಆಗುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.