ತುಂಗಭದ್ರಾ ಅಣೆಕಟ್ಟೆಯಲ್ಲಿ 2024ರ ಆಗಸ್ಟ್ 10ರಂದು ಕೊಚ್ಚಿಕೊಂಡು ಹೋಗಿದ್ದ 19ನೇ ಕ್ರೆಸ್ಟ್‌ಗೇಟ್ ಇದ್ದ ಸ್ಥಳದಲ್ಲಿ ಅಳವಡಿಸಿದ್ದ ತಾತ್ಕಾಲಿಕ ಗೇಟ್ ಅನ್ನು ಅನ್ನು ಗುರುವಾರ ತೆರವುಗೊಳಿಸಲಾಯಿತು. ಇಲ್ಲಿ ಹೊಸ ಗೇಟ್ ಶೀಘ್ರ ಅಳವಡಿಕೆಯಾಗಲಿದೆ
–ಪ್ರಜಾವಾಣಿ ಚಿತ್ರ
ಗೇಟ್ ಅಳವಡಿಕೆಯ ಟೆಂಡರ್ ಮೊತ್ತ ₹54 ಕೋಟಿ. ಆಂಧ್ರ ಸರ್ಕಾರ ₹35 ಕೋಟಿ ಕೊಟ್ಟಿದೆ ಮಿಕ್ಕಿದ್ದನ್ನು ಕರ್ನಾಟಕ ಸರ್ಕಾರ ಕೊಡಬೇಕು. ವಿಳಂಬವಾದರೆ ಜೂನ್‌ಗೆ ಕೆಲಸ ಮುಗಿಯಲ್ಲ
–ಕನ್ಹಯ್ಯ ನಾಯ್ಡು, ಕ್ರೆಸ್ಟ್‌ಗೇಟ್ ತಜ್ಞ
₹10 ಕೋಟಿ ವಾಪಸ್ ಪಡೆದ ಬಗ್ಗೆ ಖಚಿತವಾಗಿ ಮಾಹಿತಿ ಗೊತ್ತಿಲ್ಲ. ಮಾಹಿತಿ ಪಡೆದು ತಿಳಿಸುವೆ.
–ಲಕ್ಷ್ಮಣ ನಾಯಕ, ಮುಖ್ಯ ಎಂಜಿನಿಯರ್ ನೀರಾವರಿ ಕೇಂದ್ರ ವಲಯ ಮುನಿರಾಬಾದ್