ಬುಧವಾರ, ಏಪ್ರಿಲ್ 21, 2021
23 °C

50 ವರ್ಷಗಳ ಹಿಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುರಾರಜಿ ನಿಷ್ಕ್ರಮಣ ಖಚಿತ: ಇಂದಿರಾ ಜತೆ ಎಸ್ಸೆನ್ ಚರ್ಚೆ ವಿಫಲ
ನವದೆಹಲಿ, ಜುಲೈ 18–
ಶ್ರೀ ಮುರಾರಜಿ ದೇಸಾಯಿಯವರು ಕೇಂದ್ರ ಸಂಪುಟದಿಂದ ನಿಷ್ಕ್ರಮಿಸುವುದು ಇಂದು ರಾತ್ರಿ ಖಚಿತವಾಯಿತು.

ಅರ್ಥ ಖಾತೆಯನ್ನು ಶ್ರೀ ದೇಸಾಯಿಯವರಿಗೆ ಹಿಂತಿರುಗಿಸುವುದಿಲ್ಲವೆಂಬ ತಮ್ಮ ನಿರ್ಧಾರಕ್ಕೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ದೃಢವಾಗಿ ಅಂಟಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿನ ಬಿಕ್ಕಟ್ಟು ಇಂದು ರಾತ್ರಿ ಉಲ್ಬಣಗೊಂಡಿತು.

ರಾಜ್ಯದಾದ್ಯಂತ ಮಾರುಕಟ್ಟೆ ಸಮಿತಿಗಳ ರದ್ದು: ಸುಗ್ರೀವಾಜ್ಞೆ
ಬೆಂಗಳೂರು, ಜುಲೈ 18– ರಾಜ್ಯದಾದ್ಯಂತ ಇರುವ ಮಾರುಕಟ್ಟೆ ಸಮಿತಿಗಳು, ಅವುಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಅಧಿಕಾರವನ್ನು ರದ್ದುಗೊಳಿಸಿ ಮೈಸೂರು ಸರ್ಕಾರ ಇಂದು ಸುಗ್ರೀವಾಜ್ಞೆ ಹೊರಡಿಸಿದೆ.

ಈ ಆಜ್ಞೆಯ ಪ್ರಕಾರ, ರಾಜ್ಯದ ಸುಮಾರು ಎಂಬತ್ತೈದು ಮಾರುಕಟ್ಟೆ ಸಮಿತಿ ಗಳ ಕಾರ್ಯನಿರ್ವಹಣೆಯನ್ನು ಸರಕಾರಿ ಆಡಳಿತಾಧಿಕಾರಿಗಳು ವಹಿಸಿಕೊಳ್ಳುವರು.

ನಿಶ್ಚಯಿಸಿದ್ದಕ್ಕಿಂತ 4 ಗಂಟೆ ಮುಂಚೆ ಚಂದ್ರನಲ್ಲಿ ಮಾನವ
ಹೂಸ್ಟನ್, ಜುಲೈ 18– ನಾಳೆ ರಾತ್ರಿ, ನಿಶ್ಚಯಿಸಿದ ಕಾಲಕ್ಕಿಂತ ಮೂರು ನಿಮಿಷ ಮುಂಚಿತವಾಗಿ ಗಗನಯಾತ್ರಿಗಳು ಚಂದ್ರನ ಮೇಲೆ ನಡೆಯುವರು ಎಂದು ಗಗನಯಾತ್ರೆ ನಿಯಂತ್ರಣ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.