ಸೋಮವಾರ, ಆಗಸ್ಟ್ 19, 2019
22 °C
ಬುಧವಾರ

ಬುಧವಾರ, 6–8–1969

Published:
Updated:

ಪಟ್ಟಭದ್ರ ಹಿತ– ಶ್ರೀ ಸಾಮಾನ್ಯನ ನಡುವೆ ಘರ್ಷಣೆ ಸನ್ನಿಹಿತ

ನವದೆಹಲಿ, ಆ. 5– ‘ಶ್ರೀಸಾಮಾನ್ಯ ಮತ್ತು ಪಟ್ಟಭದ್ರ ಹಿತಗಳ ನಡುವೆ ಭೀಕರ ಹೋರಾಟ ಸನ್ನಿಹಿತ’ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿ, ‘ಈ ಹೋರಾಟಕ್ಕೆ ಸಿದ್ಧರಾಗಿರುವಂತೆ’ ಜನತೆಗೆ ಕರೆ ನೀಡಿದರು.

ತಮ್ಮ ವಿರೋಧಿಗಳು ಮತ್ತು ಟೀಕೆಗಾರರು ಹೋರಾಟಕ್ಕೆ ಕಾಲು ಕೆರೆದರೆ ಶಕ್ತಿ ಪ್ರದರ್ಶನ ಮಾಡಲು ಭಾರತದ ಜನತೆ ಸಿದ್ಧರಾಗಿದ್ದಾರೆ ಎಂದೂ ಅವರು ಹೇಳಿದರು.

ಬ್ಯಾಂಕ್ ರಾಷ್ಟ್ರೀಕರಣಕ್ಕೆ ಬೆಂಬಲ ವ್ಯಕ್ತಪಡಿಸಲು ತಮ್ಮ ನಿವಾಸದ ಹೊರಗಡೆಯಲ್ಲಿ ನಡೆದ ಕಾರ್ಮಿಕರು, ರೈತರು ಮತ್ತು ವ್ಯಾಪಾರಿಗಳಿಂದ ಕೂಡಿದ ಬೃಹತ್ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಅವರು ‘ಪ್ರಜಾಸತ್ತೆಯ ಶತ್ರುಗಳನ್ನು ಸಂಪೂರ್ಣವಾಗಿ ತೊಲಗಿಸುವವರೆಗೂ ಹೋರಾಡಿ’ ಎಂದರು.

ಉಪರಾಷ್ಟ್ರಪತಿ ಸ್ಥಾನಕ್ಕೆ ಪಾಠಕ್ ಕಾಂಗ್ರೆಸ್ ಸ್ಪರ್ಧಿ

ನವದೆಹಲಿ, ಆ. 5– ಮೈಸೂರಿನ ರಾಜ್ಯಪಾಲ ಶ್ರೀ ಜಿ.ಎಸ್. ಪಾಠಕ್ ಅವರನ್ನುಉಪರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ
ಯನ್ನಾಗಿ ಕಾಂಗ್ರೆಸ್ಸಿನ ಕೇಂದ್ರ ಪಾರ್ಲಿಮೆಂಟರಿ ಬೋರ್ಡ್ ಆಯ್ಕೆ ಮಾಡಿತು ಎಂದು ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪನ
ವರು ತಿಳಿಸಿದರು.

Post Comments (+)